/newsfirstlive-kannada/media/media_files/2025/07/31/salil_parekh-2025-07-31-21-17-54.jpg)
ಭಾರತ ಮತ್ತು ಜಗತ್ತಿನಲ್ಲಿ ಈಗ ಟೆಕ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲೇ ಆಫ್ ನೀಡಿ ಮನೆಗೆ ಕಳಿಸುತ್ತಿವೆ. ಕಂಪನಿಗಳು ಆರ್ಟಿಫಿಷಿಯಲ್ ಇಂಟಲಿಜೆನ್ಸ್ , ಆಟೋಮೇಷನ್ ಆಳವಡಿಸಿಕೊಂಡು ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡುತ್ತಿವೆ. ಮೈಕ್ರೋಸಾಫ್ಟ್, ಐಬಿಎಂ, ಭಾರತದ ಟಿಸಿಎಸ್ ಸೇರಿದಂತೆ ಎಲ್ಲ ಕಂಪನಿಗಳು ಲೇ ಆಫ್ ನೀಡುತ್ತಿವೆ. ಇದರ ಮಧ್ಯೆ ಫ್ರೆಶರ್ ಇಂಜಿನಿಯರ್ ಗಳಿಗೆ ಗುಡ್ ನ್ಯೂಸ್ ಒಂದು ಬಂದಿದೆ. ಭಾರತದ , ಬೆಂಗಳೂರಿನ ಪ್ರಸಿದ್ದ ಐ.ಟಿ. ಕಂಪನಿ ಇನ್ಪೋಸಿಸ್ ಈ ವರ್ಷ ಬರೋಬ್ಬರಿ 20 ಸಾವಿರ ಫ್ರೆಶರ್ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಇನ್ಪೋಸಿಸ್ ಕೂಡ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಆಟೋಮೇಷನ್ ಆಳವಡಿಸಿಕೊಂಡಿದೆ. ಜೊತೆಗೆ ತಮ್ಮ ಉದ್ಯೋಗಿಗಳ ಸ್ಕಿಲ್ಸ್ ಅನ್ನು ಅಪ್ ಡೇಟ್ ಕೂಡ ಮಾಡುತ್ತಿದೆ.
ಇನ್ಪೋಸಿಸ್ ಕಂಪನಿಯು 2025-26 ರಲ್ಲಿ 20 ಸಾವಿರ ಫ್ರೆಶರ್ ಗಳನ್ನು ನೇಮಕಾತಿ ಮಾಡಿಕೊಳ್ಳುವ ಗುರಿಗೆ ಬದ್ದವಾಗಿದೆ ಎಂದು ಇನ್ಪೋಸಿಸ್ ಸಿಇಓ ಸಲೀಲ್ ಪಾರೇಖ್ ಹೇಳಿದ್ದಾರೆ. ಇನ್ಪೋಸಿಸ್ ಈಗಾಗಲೇ 17 ಸಾವಿರ ಮಂದಿಯನ್ನು ನೇಮಕ ಮಾಡಿಕೊಂಡಿದೆ. 20 ಸಾವಿರ ಕಾಲೇಜು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಪ್ಲ್ಯಾನ್ ಇದೆ. ಕಂಪನಿಯು ರೀ ಸ್ಕಿಲಿಂಗ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಗೆ ಒತ್ತು ನೀಡುತ್ತಿದೆ. ಇದಕ್ಕಾಗಿ ವಿವಿಧ ಹಂತಗಳಲ್ಲಿರುವ 2.75 ಲಕ್ಷ ಉದ್ಯೋಗಿಗಳಿಗೆ ತರಬೇತಿಯನ್ನು ಈಗಾಗಲೇ ನೀಡಿದೆ.
ಇನ್ಪೋಸಿಸ್ ಕಂಪನಿಯು ಡಿಜಿಟಲ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಲ್ಲಿ ಹೂಡಿಕೆ ಮಾಡುತ್ತಿದೆ. ಉದ್ಯೋಗಿಗಳ ದಕ್ಷತೆಯನ್ನು ಹೆಚ್ಚಿಸಲು ರೀಸ್ಕಿಲಿಂಗ್ ಗೆ ಒತ್ತು ನೀಡುತ್ತಿದೆ. ಇದರಿಂದಾಗಿ ಹೆಚ್ಚಿನ ಉದ್ಯೋಗಿಗಳನ್ನು ಹೊಸ ಪ್ರಾಜೆಕ್ಟ್ ಗಳಿಗೆ ನಿಯೋಜಿಸಲು ಸಾಧ್ಯವಾಗುತ್ತೆ.
ಹೂಡಿಕೆ ಮಾಡುವುದು ಬಹಳ ಮುಖ್ಯ. ನಾವು ಡಿಜಿಟಲ್, ಎಐ, ಲಾಂಗ್ವೇಜ್ ಮಾಡೆಲ್ಸ್ ಮತ್ತು ಉದ್ಯೋಗಿಗಳ ರೀಸ್ಕಿಲಿಂಗ್ಸ್ ಗೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದೇವೆ. ಈ ಹೂಡಿಕೆಯನ್ನು ಬೆಂಬಲಿಸಲು ಅಂತರಿಕ ದಕ್ಷತೆಗೂ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಇದರಿಂದಾಗಿ ಹೆಚ್ಚಿನ ಉದ್ಯೋಗಿಗಳನ್ನು ಹೊಸ ಪ್ರಾಜೆಕ್ಟ್ ಗೆ ನೇಮಿಸಲು ಸಾಧ್ಯವಾಗುತ್ತೆ ಎಂದು ಸಿಇಓ ಸಾಲೀಲ್ ಪಾರೇಖ್ ಹೇಳಿದ್ದಾರೆ.
ಇನ್ನೂ ಇನ್ಪೋಸಿಸ್ ಉನ್ನತ ಎಕ್ಸಿಕ್ಯುಟೀವ್ ಗಳು ಹೇಳಿರುವ ಪ್ರಕಾರ, ಇನ್ಪೋಸಿಸ್ ಕಂಪನಿಯು ಇತ್ತೀಚೆಗೆ ವೇತನ ಹೆಚ್ಚಳ ಜಾರಿಗೊಳಿಸಿದೆ. ಮುಂದಿನ ವೇತನ ಹೆಚ್ಚಳವನ್ನು ಯಾವಾಗ ಮಾಡಬೇಕೇಕೆಂದು ಇನ್ನೂ ಕಂಪನಿಯು ತೀರ್ಮಾನಿಸಿಲ್ಲ. ಇನ್ಪೋಸಿಸ್‌ನ ಚೀಫ್ ಫೈನಾನ್ಸಿಯಲ್ ಆಫೀಸರ್ ಜಯೇಶ್ ಸಂಗರಾಜಕ ಹೇಳುವ ಪ್ರಕಾರ, ಕಂಪನಿಯ ಏಪ್ರಿಲ್- ಜೂನ್ ತ್ರೈಮಾಸಿಕದ ಫಲಿತಾಂಶವನ್ನು ಜುಲೈ 22 ರಂದು ಪ್ರಕಟಿಸಲಾಗಿದೆ. ಕಂಪನಿಯು ಕಳೆದ ತ್ರೈಮಾಸಿಕದಲ್ಲಿ ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡಿದೆ.
ಚಂದ್ರಮೋಹನ್, ನ್ಯೂಸ್ ಫಸ್ಟ್.