/newsfirstlive-kannada/media/media_files/2025/08/02/rakshak-bullet5-2025-08-02-14-16-38.jpg)
ಇರಲಾರದೆ ಇರುವೆ ಬಿಟ್ಕೊಳೋದು ಅಂತ ಒಂದು ಮಾತಿದೆ. ಆ ಮಾತಿಗೂ ಈ ರಕ್ಷಕ್ ಬುಲೆಟ್ಗೂ ಏನೂ ವ್ಯತ್ಯಾಸ ಇಲ್ಲ. ಪ್ರಥಮ್ ಕೊಟ್ಟ ಕೇಸ್ನಲ್ಲಿ ಠಾಣೆ ಮೆಟ್ಟಿಲು ಹತ್ತಿರುವ ರಕ್ಷಕ್ಗೆ ಆ್ಯಕ್ಸಿಡೆಂಟ್ ಕೇಸ್ ಹೆಗಲೇರಿದೆ. ಅಡ್ಡಾದಿಡ್ಡಿ ಗಾಡಿ ಓಡಿಸಿ, ಕಾಲುಮುರಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಅಮ್ಮ ಆಗ್ತಿದ್ದಾರೆ ಭಾವನಾ.. ಒಂಟಿಯಾಗಿ ತಾಯಿ ಆಗುವ ಬಗ್ಗೆ ನಟಿ ಹೇಳಿದ್ದೇನು..?
ಆ ಪ್ರಥಮ್ ಜೊತೆ ಕಿರಿಕ್ ನಡುವೆ ಇದೆಲ್ಲಾ ಬೇಕಿತ್ತಾ? ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕಿದ ಆ ತಂಡದಲ್ಲಿ ರಕ್ಷಕ್ ಅಲ್ಲಿದ್ದ ಅನ್ನೋದು ಪ್ರಥಮ್ನ ಆರೋಪ. ಈ ಬೆನ್ನಲ್ಲೇ ಮತ್ತೊಂದು ಸುದ್ದಿ ಬಂದಿದೆ. ರಕ್ಷಕ್ ಎಡವಟ್ಟಿನಿಂದ ಯುವಕನೊಬ್ಬನ ಕಾಲು ಮುರಿತವಾಗಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕೇಸ್ ಸಹ ದಾಖಲಾಗಿದೆ.
ಅಪಘಾತದ ಹಿನ್ನೆಲೆ ಏನು?
ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ. ನಿನ್ನೆ ಬೆಳಗ್ಗೆ 11.30 ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಣುಗೋಪಾಲ ಎಂಬ ಯುವಕನ ಬೈಕ್‌ಗೆ ರಕ್ಷಕ್ ಕಾರು ಡಿಕ್ಕಿ ಆಗಿದೆ. ವೇಣುಗೋಪಾಲ ಮತ್ತು ಸ್ನೇಹಿತೆ ಬೈಕ್ನಲ್ಲಿ ಬರುತ್ತಿದ್ದಾಗ ಆಕ್ಸಿಡೆಂಟ್ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಈ ಘಟನೆ ಜರುಗಿದ್ದು, ಆಕ್ಸಿಡೆಂಟ್ ನಂತರ ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ಗಾಯಾಳು ಯುವಕನನ್ನ ದಾಖಲು ಮಾಡಲಾಗಿದೆ. ಆಕ್ಸಿಡೆಂಟ್ ಅದ ಪರಿಣಾಮ ವೇಣುಗೋಪಾಲ್ ಎಡಗಾಲಿನ ಮೂಳೆ ಮುರಿತ ಆಗಿದೆ ಎನ್ನಲಾಗಿದೆ.
ಆಕ್ಸಿಡೆಂಟ್ ಬಳಿಕ ಬೇರೆ ಕಾರಿನಲ್ಲಿ ಯುವಕನನ್ನ ಆಸ್ಪತ್ರೆಗೆ ದಾಖಲಿಸಿದ್ದ ರಕ್ಷಕ್, ಕೊಟೇಷನ್ ಹಾಕುವಾಗ ಖರ್ಚು ಎಷ್ಟಾದ್ರು ನೋಡ್ಕೊತಿನಿ ಅಂದಿದ್ರಂತೆ. ಆದ್ರೆ ಈಗ ಸೆಟಲ್ಮೆಂಟ್ಗೆ ಬಂದೇ ಇಲ್ಲ. ಹೀಗಾಗಿ ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗಿ ಪೋಷಕರು ಹೇಳಿದ್ದಾರೆ.
‘ಖರ್ಚು ನೋಡ್ಕೋತಿನಿ ಅಂತ ಮೋಸ’
ಈ ಬಗ್ಗೆ ಮಾತಾಡಿ ಗಾಯಾಳು ಪ್ರಕಾಶ್ ತಂದೆ ವೇಣುಗೋಪಾಲ, ಒಂದೇ ಸಾರಿ ಸೆಟ್ಲಮೆಂಟ್ ಮಾಡ್ತೀನಿ ಅಂತ ಒಪ್ಪಿಕೊಂಡ್ರು. ಮತ್ತೆ ಆಮೇಲೆ ಹೇಳ್ತಾರೆ. ಈಗ 50 ಸಾವಿರ ಕೋಡ್ತೀನಿ, ಮತ್ತೆ ಎರಡು ತಿಂಗಳು ಬಿಟ್ಟು ದುಡ್ಡು ಕೊಡ್ತೀನಿ ಅಂದ್ರು. ಅವಾಗ ಮನಗೆ ಬೇಸರ ಆಯ್ತು. ಆ ಎರಡು ತಿಂಗಳು ಆದ್ಮೇಲೆ ದುಡ್ಡು ಕೊಡ್ತಾರೆ ಅನ್ನೋದಕ್ಕೆ ಗ್ಯಾರಂಟಿ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಒಟ್ಟಾರೆ, ಅಜಾಗರೂಕತೆಯಿಂದ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಆರೋಪ ಹೊತ್ತ ರಕ್ಷಕ್ಗೆ ಹೊಸ ಕೇಸ್ ಹೆಗಲೇರಿದೆ.. ನಿನ್ನೆಯಷ್ಟೇ ಪ್ರಥಮ್ ದೂರಿನನ್ವಯ ದೊಡ್ಡಬಳ್ಳಾಪುರ ಠಾಣೆಗೆ ಹೋಗಿ ವಿಚಾರಣೆ ಎದುರಿಸಿದ್ದು, ಅದಾದ ಬೆನ್ನಲ್ಲೆ ಮತ್ತೊಂದು ಕೇಸ್ನಲ್ಲಿ ಲಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ