ನರ್ಸಿಂಗ್ ವಿದ್ಯಾರ್ಥಿನಿಯ ಶುಲ್ಕಕ್ಕಾಗಿ ತಾಯಿಯೇ ತಾಳಿ, ಕಿವಿಯೋಲೆ ಬಿಚ್ಚಿಕೊಟ್ಟಿದ್ದು ನಿಜವೇ? ಕಾಲೇಜು ಆಡಳಿತ ಮಂಡಳಿ ಹೇಳಿದ್ದೇನು?

ಕೊಪ್ಪಳದ ಗಂಗಾವತಿಯ ಬಿಬಿಸಿ ನರ್ಸಿಂಗ್ ಕಾಲೇಜಿನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ನರ್ಸಿಂಗ್ ವಿದ್ಯಾರ್ಥಿನಿಯ ಶುಲ್ಕಕ್ಕಾಗಿ ಆಕೆಯ ತಾಯಿಯ ತಾಳಿ, ಕಿವಿಯೋಲೆ ಬಿಚ್ಚಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೇ, ಕಾಲೇಜು ಆಡಳಿತ ಮಂಡಳಿ ಈ ಆರೋಪ ನಿರಾಕರಿಸಿದೆ.

author-image
Chandramohan
nursing student

ವಿದ್ಯಾರ್ಥಿನಿ ಕಾವೇರಿ ಹಾಗೂ ಆಕೆಯ ತಾಯಿ ರೇಣುಕಮ್ಮ

Advertisment

ಕೊಪ್ಪಳ ಜಿಲ್ಲೆಯ ಗಂಗಾವತಿ  ಪಟ್ಟಣದ  ರಾಯಚೂರು ರಸ್ತೆಯಲ್ಲಿರುವ ಬಿಬಿಸಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ  ಗಂಭೀರ ಆರೋಪ ಒಂದು ಕೇಳಿ ಬಂದಿದೆ. 
ಕಾವೇರಿ ಎನ್ನುವ ವಿದ್ಯಾರ್ಥಿನಿಯ ಶುಲ್ಕಕ್ಕಾಗಿ ಆಕೆಯ ತಾಯಿ ರೇಣುಕಮ್ಮ ತಾಳಿ, ಬಂಗಾರ ಬಿಚ್ಚಿಕೊಟ್ಟಿದ್ದಾರೆ ಎನ್ನಲಾಗಿದೆ‌. ಕೊಪ್ಪಳದ ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಹನುಮಂತಪ್ಪ ಹಾಗೂ ರೇಣುಕಮ್ಮ ಎನ್ನುವ ದಂಪತಿಗಳ ಮಗಳಾದ ಕಾವೇರಿಯನ್ನು ಡಾ. ಸಿ.ಬಿ ಚಿನಿವಾಲರ ಅವರಿಗೆ ಸೇರಿದ ಖಾಸಗಿ ಬಿಬಿಸಿ ನರ್ಸಿಂಗ್ ಕಾಲೇಜಿಗೆ ಮುಂಗಡ 10 ಸಾವಿರ ಕೊಟ್ಟು ಪ್ರವೇಶ ಪಡೆದಿದ್ದಾರೆ. ನಾಲ್ಕು ವರ್ಷದ ಬಿಎಸ್ಸಿ ನರ್ಸಿಂಗ್ ಕೋರ್ಸ್ ಗೆ ಪ್ರತಿ ವರ್ಷ 95 ಸಾವಿರ ಶುಲ್ಕವಿದೆ ಎಂದು ಈ ಹಿಂದೆ ಆಡಳಿತ ಮಂಡಳಿ ಕಾವೇರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಕಾವೇರಿಗೆ ಗದಗನಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜೊಂದರಲ್ಲಿ ಸೀಟು ಲಭ್ಯವಾಗಿದೆ.   ಅಲ್ಲಿಗೆ ಪ್ರವೇಶ ಪಡೆಯಲು ಈಗ ಓದುವ ಗಂಗಾವತಿ ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರ್ಮನ್ ಡಾ. ಸಿ.ಬಿ ಚಿನಿವಾಲರ ಅವರ ಬಳಿ  ವರ್ಗಾವಣೆ ಪತ್ರ, ಪ್ರಮಾಣ ಪತ್ರ ಹಾಗೂ ದಾಖಲೆಗಳನ್ನು ಪಡೆಯಲು ಕಾವೇರಿ,  ಪಾಲಕರನ್ನು ಕರೆದುಕೊಂಡು ಹೋಗಿ ಮನವಿ ಮನವಿ ಮಾಡಿದ್ದಾಳೆ. ದಾಖಲೆಗಳನ್ನು ಕೊಡಲು ಒಂದು ವರ್ಷದ ಪೂರ್ಣಪ್ರಮಾಣದ ಶುಲ್ಕ ಪಾವತಿಸಲು ತಿಳಿಸಿದ ಹಿನ್ನೆಲೆ ಕಾವೇರಿ ತಾಯಿ ರೇಣುಕಮ್ಮ ತನ್ನ ಕುತ್ತಿಗೆಯಲ್ಲಿದ್ದ ತಾಳಿ, ಬಂಗಾರ ಬಿಚ್ಚಿಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ .

nursing student02

 ಈ ಹಿನ್ನೆಲೆಯಲ್ಲಿ , ಕಾಲೇಜಿನ ಚೇರ್ಮನ್ ಚಿನಿವಾಲರ ಸ್ಪಷ್ಟನೆ ನೀಡಿದ್ದಾರೆ. ನಾವು ಯಾವುದೇ ರೀತಿ ತಾಳಿ ಕೇಳಿಲ್ಲ, ವಿದ್ಯಾರ್ಥಿನಿ ಗೆ ಫೀಸ್ ಕಟ್ಟಿ ಅಂತಾ ಹೇಳಿದ್ದಿವಿ ಹೊರತು ತಾಳಿ ಕೇಳಿಲ್ಲ, ಫೀಸ್ ಕೇಳಿದ್ದಕ್ಕೆ ವಿದ್ಯಾರ್ಥಿನಿ ಪೋಷಕರು ಎಮೋಷನಲ್ ಆಗಿ ತಾಳಿ,ಬೆಂಡಾಲಿ, ಬಿಚ್ಚಿಟ್ಟಿದ್ದಾರೆ, ಆದ್ರೂ ಅವರಿಗೆ ಸಮಾಧಾನ ಮಾಡಿ ಮರಳಿಸಿದ್ದೇವೆ
ವರ್ಗಾವಣೆ ಪತ್ರ ಕೊಟ್ಟು, ತಾಳಿ, ಬಂಗಾರವನ್ನು ತಕ್ಷಣವೇ ಮರಳಿಸಿದ್ದೇವೆ ಎಂದಿದ್ದಾರೆ.  ಸರ್ಕಾರಿ ಸೀಟು ಸಿಕ್ಕಿರೋ ಬಗ್ಗೆ ವಿದ್ಯಾರ್ಥಿನಿ ಬಿಬಿಸಿ ನರ್ಸಿಂಗ್ ಕಾಲೇಜಿಗೆ ಸರಿಯಾಗಿ  ಮಾಹಿತಿ ನೀಡಿಲ್ಲ. ಸೀಟು ಸಿಕ್ಕ ಮಾಹಿತಿ ಬಂದ ಮೇಲೆ ಟಿಸಿ ನೀಡಿದ್ದೇವೆ. ಸರ್ಕಾರ ನಿಗದಿಪಡಿಸಿರುವ  ಫೀಸ್ ಅನ್ನು ಕೇಳಿದ್ದೇವೆ. ನಮ್ಮ ಇನ್ಸಿ ಟಿಟ್ಯೂಟ್  ಬಗ್ಗೆ ಕೆಟ್ಟ ಹೆಸರು ತರೋದಕ್ಕೆ ಈ ರೀತಿ ಯಾರೋ ತಪ್ಪು ಸಂದೇಶವನ್ನು ಪಾಲಕರ ಮೂಲಕ ರವಾನೆ ಮಾಡಿದ್ದಾರೆ ಎಂದು  ಚೇರ್ಮನ್ ಸಿ.ಬಿ‌.ಚಿನವಾಲರ ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

GANGANVATHI BBC NURSING COLLEGE
Advertisment