/newsfirstlive-kannada/media/media_files/2025/08/05/lic-bhima-sakhi-2025-08-05-10-20-00.jpg)
ಮನೆಯಲ್ಲೇ ಕುಳಿತು ಹಣ ಸಂಪಾದನೆ ಮಾಡಬೇಕು ಅನ್ನೋದು ಹಲವರ ಪ್ಲ್ಯಾನ್. ಅದ್ರಲ್ಲೂ ಬಹುತೇಕ ಮಹಿಳೆಯರು ಮನಯೆಲ್ಲೇ ಕೂತು ಮಾಡುವ ಕೆಲಸ ಹುಡುಕುತ್ತಾರೆ. ಇಂಥವರಿಗೆ ಭರ್ಜರಿ ಗುಡ್ನ್ಯೂಸ್ ಒಂದಿದೆ.
ಸರ್ಕಾರ ಹಾಗೂ ಎಲ್ಐಸಿ ಸೇರಿ ಮಹಿಳೆಯರನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿ ಮಾಡಲು ಮಹತ್ವದ ಯೋಜನೆ ಜಾರಿಗೆ ತಂದಿದೆ. ಇದರ ಹೆಸ್ರು ಬಿಮಾ ಸಖಿ ಯೋಜನೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರಿಗಾಗಿ ಈ ಯೋಜನೆ ಜಾರಿಗೆ ಬಂದಿದ್ದು, ಈ ಸ್ಕೀಮ್ ಅಡಿಯಲ್ಲಿ ಮನೆಯಲ್ಲೇ ಕೂತ ಹಣ ಗಳಿಸಬಹುದು. ಈ ಕುರಿತು ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..!
ಏನಿದು ಬಿಮಾ ಸಖಿ ಯೋಜನೆ ಅಂತಾ ನೋಡೋದಾದ್ರೆ..!
ಇನ್ನೂ, ಈ ಯೋಜನೆ ಅಡಿ ಮಹಿಳೆಯರು ಎಲ್ಐಸಿ ಏಜೆಂಟ್ ಆಗುವ ಮೂಲಕ ಸ್ಟೈಫಂಡ್ ಪಡೀಬಹುದು. ಅಷ್ಟೇ ಅಲ್ಲ ತಿಂಗಳಿಗೆ 2 ಲಕ್ಷಕ್ಕಿಂತ ಹೆಚ್ಚು ಹಣ ಗಳಿಸೋ ಅವಕಾಶ ಇಲ್ಲಿದೆ. ಬಿಮಾ ಸಖಿ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ ಜಂಟಿಯಾಗಿ ಶುರು ಮಾಡಿದೆ. ಮಹಿಳೆಯರ ಆರ್ಥಿಕ ಸಬಲೀಕರಣ ಇದರ ಮಹತ್ವದ ಗುರಿಯಾಗಿದೆ.
ಯೋಜನೆಯ ಮುಖ್ಯ ಉದ್ದೇಶ ಏನು ಅಂತಾ ನೋಡೋದಾದ್ರೆ..!
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು. ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ಜಾಗೃತಿ ಹೆಚ್ಚಳ ಮಾಡುವುದು. 2025ರ ವೇಳೆಗೆ 1 ಲಕ್ಷಕ್ಕೂ ಹೆಚ್ಚು ವಿಮಾ ಸಖಿಗಳಿಗೆ ತರಬೇತಿ ನೀಡುವುದು. ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಗುರುತು ನೀಡುವುದಾಗಿದೆ.
ಮಹಿಳೆಯರಿಗೆ ಟ್ರೈನಿಂಗ್ ಜತೆಗೆ ಪ್ರತಿ ತಿಂಗಳು ₹ 7000 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ನೇರವಾಗಿ ಇವ್ರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ವಿಶೇಷ ಅಂದ್ರೆ ಟ್ರೈನಿಂಗ್ ತೆಗೆದುಕೊಳ್ಳುತ್ತಲೇ ಮಹಿಳೆಯರು ವಿಮಾ ಪಾಲಿಸಿಯನ್ನು ಮಾರಾಟ ಮಾಡಬಹುದು. ಇದರಿಂದ ಇವರಿಗೆ ಕಮಿಷನ್ ಸಿಗಲಿದೆ. ತರಬೇತಿ ಮುಗಿದ ನಂತ್ರ ಮಹಿಳೆಯರಿಗೆ ವಿಮಾ ಸಖಿ ಪ್ರಮಾಣಪತ್ರ ಮತ್ತು ಎಲ್ ಐಸಿ (LIC) ಏಜೆಂಟ್ ಕೋಡ್ ನೀಡಲಾಗುವುದು.
ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಗಣ ಗಳಿಸೋದು ಹೇಗೆ ಅಂತಾ ನೋಡೋದಾದ್ರೆ..!
ಮೂರು ವರ್ಷಗಳ ಕಾಲ ಈ ಯೋಜನೆಯಡಿ ಸಕ್ರಿಯವಾಗಿ ಕೆಲಸ ಮಾಡಬೇಕು. ಆಗ ಅವರಿಗೆ ತಿಂಗಳಿಗೆ ₹ 2.16 ಲಕ್ಷದವರೆಗೆ ಹಣ ಗಳಿಸುವ ಅವಕಾಶ ಸಿಗುತ್ತದೆ. ಭವಿಷ್ಯದಲ್ಲಿ ಅಭಿವೃದ್ಧಿ ಅಧಿಕಾರಿಯಂತಹ ಉನ್ನತ ಜವಾಬ್ದಾರಿ ಕೂಡ ಸಿಗಲಿದೆ.
ಯಾರು ಅರ್ಜಿ ಸಲ್ಲಿಸಬಹುದು ಅಂತಾ ನೋಡೋದಾದ್ರೆ..!
18 ರಿಂದ 70 ವರ್ಷ ನಡುವಿನ ಯಾವುದೇ ಮಹಿಳೆ ಅರ್ಜಿ ಸಲ್ಲಿಸಬಹುದು. ಕನಿಷ್ಠ ಅರ್ಹತೆ 10ನೇ ತರಗತಿ ಪಾಸ್ ಆಗಿರಬೇಕು. ಆಸಕ್ತಿಯುಳ್ಳ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಐಸಿಯ ಅಧಿಕೃತ ವೆಬ್ಸೈಟ್ https://licindia.in ಗೆ ಮೊದಲು ಭೇಟಿ ನೀಡಬೇಕು. ಬಳಿಕ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. 10ನೇ ತರಗತಿ ಅಂಕಪಟ್ಟಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಪಾಸ್ಪೋರ್ಟ್ ಗಾತ್ರದ ಫೋಟೋ ಕಡ್ಡಾಯ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ