/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಸಾಮಾಜಿಕ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ
- ಕಾನೂನು ಕ್ರಮ ಕೆಲಸಕ್ಕೆ ಬಾರದೆ ಬೇಸರ ಆಗಬಹುದು
- ಸಾಲ ಪಡೆದ ವ್ಯಕ್ತಿಗಳು ತಿರುಗಿಬೀಳಬಹುದು, ನಷ್ಟದ ಸೂಚನೆ
- ಹೊಟ್ಟೆ ನೋವಿಗೆ ಸಂಬಂಧಿಸಿದ ತೊಂದರೆಯಾಗಬಹುದು
- ಭಾವನಾತ್ಮಕ ನಿರ್ಧಾರಗಳಿಂದ ವ್ಯಥೆಯಾಗಬಹುದು
- ವೈಯಕ್ತಿಕ ಜೀವನದಲ್ಲಿ ಬೇಸರ, ಅಶಾಂತಿ, ಕೋಪ
- ವಿಷ್ಣುವಿಗೆ ಜೇನುತುಪ್ಪದ ಅಭಿಷೇಕ ಮಾಡಿಸಿ
ವೃಷಭ
- ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಲಿದೆ
- ಅಪರಿಚಿತರಿಂದ ದ್ರೋಹ ಸಾಧ್ಯತೆ
- ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರ
- ಬೇರೆಯವರನ್ನು ಸಂಪೂರ್ಣ ಅವಲಂಭಿಸಬೇಡಿ
- ವಿದೇಶದಿಂದ ಸಿಹಿ ಸುದ್ದಿ ಬರಬಹುದು
- ಕೃಷಿ ಕೆಲಸ, ಜಮೀನು ಸಂಬಂಧೀ ಕೆಲಸಗಳಿಗೆ ನಷ್ಟ
- ಗಣಪತಿಗೆ ಬಿಳೀ ಎಕ್ಕದ ಹೂ ನೀಡಿ
ಮಿಥುನ
- ಸಮಾಜದಲ್ಲಿ ಪರೋಕ್ಷವಾಗಿ ಟೀಕೆ ಆಗಲಿದೆ ಅಪಖ್ಯಾತಿಗೆ ಒಳಗಾಗುತ್ತೀರಿ
- ಪಾಲುಗಾರಿಕೆ ಮತ್ತು ಬಡ್ಡಿ ವ್ಯವಹಾರದಲ್ಲಿ ಲಾಭ ಸಿಗಲಿದೆ
- ಆಸೆ, ತೃಪ್ತಿ, ಸಮಾಧಾನ ಇವು ವಿರುದ್ಧವಾದ ಫಲವನ್ನು ಕೊಡುವಂತಹದ್ದು
- ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡುವಂತಹದ್ದು
- ಯಾವುದೇ ವಿಚಾರಕ್ಕೂ ಕೂಡ ಈ ದಿನ ಹಣ ಹೂಡಿಕೆ ಮಾಡಬೇಡಿ
- ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ
ಕಟಕ
- ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಬಹುದು
- ನಿಮ್ಮ ಕರ್ತವ್ಯಕ್ಕೆ ಆದ್ಯತೆಯನ್ನು ಕೊಡಿ
- ನಂಬಿದವರಿಂದ ವಂಚನೆ ಆಗುವ ಸಾಧ್ಯತೆ ಇದೆ
- ಇಂದು ಸಿಹಿ ಸುದ್ದಿ ಕೇಳುತ್ತೀರಿ ಆದರೂ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ಪ್ರಾಮಾಣಿಕ ಪ್ರಯತ್ನಕ್ಕೆ ಮಾತ್ರ ಗೌರವ ಸಿಗುವ ದಿನ
- ಮನಸ್ಥಿತಿಯನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
- ಧ್ಯಾನಕ್ಕೆ ಶರಣು ಹೋಗಿ
ಸಿಂಹ
- ನಿಮ್ಮ ಕಾರ್ಯವೈಖರಿ, ನಡತೆ, ಸ್ವಭಾವ, ವರ್ತನೆ ಟೀಕೆಗೆ ಗುರಿಯಾಗುವಂತಹದ್ದು
- ವಾಹನ ಚಾಲನೆಯಿಂದ ತೊಂದರೆ ಇದೆ ಎಚ್ಚರಿಕೆವಹಿಸಿ
- ವಿವಾದಗಳಿಂದ ಅಂತರ ಕಾಯ್ದುಕೊಳ್ಳಬೇಕು
- ಬಂಧುಗಳಲ್ಲಿ ಅಥವಾ ಸ್ನೇಹಿತರ ಮಧ್ಯದಲ್ಲಿ ಅನುಚಿತ ವರ್ತನೆ ಮಾಡಬೇಡಿ
- ಆತುರದ ಕೆಲಸ ನಿರ್ಧಾರಗಳಿಂದ ಹಾನಿ ಉಂಟಾಗಬಹುದು
- ನಕಾರಾತ್ಮಕ ಆಲೋಚನೆಯಿಂದ ದೂರವಿರಿ
- ಪ್ರಾಣಿಗಳಿಗೆ ಆಹಾರ ನೀಡಿ
ಕನ್ಯಾ
- ಕೆಲಸಕ್ಕಾಗಿ ಜನರ ಹುಡುಕಾಟ ಅದರಿಂದ ವೈಪಲ್ಯ ಹೊಂದುತ್ತೀರಿ
- ಪ್ರಜ್ಞಾವಂತರ ಸಹವಾಸದಿಂದ ಲಾಭವಿದೆ
- ನವ ವಿವಾಹಿತರಿಗೆ ಶುಭ ಸುದ್ದಿ ಸಿಗಲಿದೆ
- ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತೀರಿ ಅದರಲ್ಲೂ ಗಂಟಲಿನ ಸಮಸ್ಯೆ ಕಾಡಬಹುದು
- ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಳ್ಳಿ
- ಸಾಲಿಗ್ರಾಮ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ತುಲಾ
- ಸ್ವಭಾವದಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
- ಮಾತಿನಿಂದ ಬೇರೆಯವರಿಗೆ ಅಪಮಾನ ಆಗಬಹುದು ಅಥವಾ ಬೇರೆಯವರು ನಿಮ್ಮನ್ನು ಅವಮಾನಿಸಬಹುದು
- ವಿದ್ಯಾರ್ಥಿಗಳು ತುಂಬಾ ಕಷ್ಟವನ್ನು ಅನುಭವಿಸುವ ದಿನ
- ಕುಟುಂಬ ಸಂಬಂಧಗಳು ಈ ದಿನ ಚೆನ್ನಾಗಿರುವುದಿಲ್ಲ
- ಮಕ್ಕಳ ಚಟುವಟಿಕೆ, ಸ್ವಭಾವ ಬೇಸರ ತರುವ ದಿನವಾಗಿರುತ್ತದೆ
- ಅವಿವಾಹಿತರ ಸಮಸ್ಯೆ ತಾರಕಕ್ಕೇರಬಹುದು
- ದೇವಿ ಉಪಾಸನೆ ಮಾಡಿ
ವೃಶ್ಚಿಕ
- ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಕುಟುಂಬದಲ್ಲಿ ಪ್ರವಾಸದ ಬಗ್ಗೆ ಚಿಂತಿಸಬಹುದು
- ಆತ್ಮ ವಿಶ್ವಾಸ ಬೆಳೆಸಿಕೊಳ್ಳಲು ಸರಿಯಾದ ಸಮಯ
- ಒಡಹುಟ್ಟಿದವರೊಡನೆ ಘರ್ಷಣೆ ಆಗುವುದರಿಂದ ಅಶಾಂತಿಗೆ ಅವಕಾಶ ಆಗಬಹುದು
- ಬೇರೆ ಯಾರಿಗೂ ಈ ದಿನ ಯಾವ ಭರವಸೆಯನ್ನು ನೀಡಬೇಡಿ
- ಉಗ್ರ ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ
ಧನುಸ್ಸು
- ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತ ಕ್ಷೇಪ ಬೇಡ
- ಸಣ್ಣ ಉದ್ಯಮಿಗಳಿಗೆ ಉತ್ತಮವಾದ ದಿನ
- ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
- ಪತಿ-ಪತ್ನಿಯರ ಮಧ್ಯೆ ಸಾಮರಸ್ಯ ಕಡಿಮೆ ಇರಲಿದೆ
- ಅಣ್ಣ ತಮ್ಮಂದಿರಲ್ಲಿ ಕಲಹ ಉಂಟಾಗಲಿದೆ
- ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
- ಅಯ್ಯಪ್ಪ ಸ್ವಾಮಿಯನ್ನು ವಿಭೂತಿಯಿಂದ ಅರ್ಚನೆ ಮಾಡಿಸಿ
ಮಕರ
- ವ್ಯಾವಹಾರಿಕವಾಗಿ, ನೌಕರಿಯಲ್ಲಿ, ವಿದ್ಯಾಕ್ಷೇತ್ರದಲ್ಲಿ ಗಣನೀಯವಾದ ಫಲಿತಾಂಶ ಲಭಿಸುತ್ತದೆ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಫಲ
- ಹೊಸ ಸಂಪರ್ಕಗಳಿಂದ ಅನುಕೂಲವಾಗುವಂತಹದ್ದು
- ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಅಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೀರಿ
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕಾರ್ಯನಿಮಿತ್ತ ಪ್ರಯಾಣ ಮಾಡಬೇಕಾಗಬಹುದು
- ಮಕ್ಕಳ ಜೊತೆಯಲ್ಲಿ ಆನಂದದ ಸಮಯ ಕಳೆಯಬಹುದು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಕುಂಭ
- ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆ ಕಾಣುವ ದಿನ
- ಅನಗತ್ಯ ವಿವಾದಗಳು ಸೃಷ್ಠಿಯಾಗುವುದರಿಂದ ಬೇಸರ ಆಗಲಿದೆ
- ಬರಬೇಕಿದ್ದ ಬಾಕಿ ಹಣ ನಿಮ್ಮ ಕೈ ಸೇರಿ ಸಂತೋಷ ಆಗಲಿದೆ
- ದೂರದ ಪ್ರಯಾಣ ಬೇಡ ಎನ್ನುವ ಸೂಚನೆ ಇದೆ ಕೊನೆಗೆ ರದ್ದಾಗಬಹುದು
- ಕಾರ್ಯಕ್ಷೇತ್ರದಲ್ಲಿ ಗೌರವ, ಮನ್ನಣೆ ದೊರಕಲಿದೆ
- ಸಂಬಂಧಿಕರಲ್ಲಿ ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ
- ದುರ್ಗಾದೇವಿಯನ್ನು ಪ್ರಾರ್ಥಿಸಿ
ಮೀನ
- ಸಾಧಾರಣವಾದ ದಿನ ಯಾವುದೇ ರೀತಿಯ ಆತಂಕ ಬೇಡ
- ಸ್ವಾಭಿಮಾನ ಹೆಚ್ಚಾಗುವ ವಾತಾವರಣ ಉಂಟಾಗಲಿದೆ
- ಮನೆಯ ವಾತಾವರಣ ಗೌಪ್ಯವಾಗಿರುತ್ತದೆ
- ಹಣದ ಚಿಂತೆ ನಿಮಗೆ ಕಾಡಬಹುದು
- ಅನೇಕ ಜನ ನಿಮ್ಮನ್ನ ತಮ್ಮ ಸ್ವಾರ್ಥಕ್ಕಾಗಿ ಆಶ್ರಯವನ್ನು ಮಾಡಿ ಬರುತ್ತಾರೆ
- ಕುಟುಂಬದ ಸದಸ್ಯರ ಜೊತೆ ಇರುವ ಭಿನ್ನಾಭಿಪ್ರಾಯ ಬೇಡ
- ಹಿರಿಯರ ಆರ್ಶೀವಾದ ಪಡೆಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ