/newsfirstlive-kannada/media/media_files/2025/08/02/bhavana-ramanna-baby-shower-celebration4-2025-08-02-07-32-45.jpg)
ಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಸಖತ್ ಖುಷಿಯಲ್ಲಿದ್ದಾರೆ. ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್ ಮೂಲಕ ಗರ್ಭ ಧರಿಸಿದ್ದಾರೆ. ಮದುವೆಯಾಗದೆ, ವೀರ್ಯ ದಾನ ಪಡೆದು ಅವಳಿ ಮಕ್ಕಳಿಗೆ ಭಾವನಾ ರಾಮಣ್ಣ ಗರ್ಭಿಣಿ ಆಗಿದ್ದಾರೆ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ಅಮ್ಮ ಆಗ್ತಿದ್ದಾರೆ ಭಾವನಾ.. ಒಂಟಿಯಾಗಿ ತಾಯಿ ಆಗುವ ಬಗ್ಗೆ ನಟಿ ಹೇಳಿದ್ದೇನು..?
ಇನ್ನೂ, ಇದೇ ಖುಷಿಯಲ್ಲಿ ನಟಿ ಭಾವನಾ ರಾಮಣ್ಣ ಅವರ ಮನೆಯಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಒಂಟಿಯಾಗಿ ತಾಯಿಯಾಗುವ ತೀರ್ಮಾನ ತೆಗೆದುಕೊಂಡಿರೋ ಭಾವನಾ ಅವರು ಸದ್ಯ ತುಂಬು ಗರ್ಭಿಣಿಯಾಗಿದ್ದಾರೆ.
ನಟಿ ಭಾವನಾ ಅವರಿಗೆ ಇನ್ನೂ ಮದುವೆಯಾಗಿಲ್ಲ. ಆದ್ರೆ, ಮದುವೆಯಾಗದೇ ತಾಯಿಯಾಗಬೇಕೆಂಬ ಹಂಬಲ ಭಾವನಾ ಅವರಲ್ಲಿತ್ತು. ಹೀಗಾಗಿ ಐವಿಎಫ್ (In vitro fertilization) ಇನ್ ವಿಟ್ರೊ ಫಲೀಕರಣ (IVF) ಎಂದರೆ ಪ್ರಯೋಗಾಲಯದಲ್ಲಿ ಮೊಟ್ಟೆ ಮತ್ತು ವೀರ್ಯವನ್ನು ಸಂಯೋಜಿಸುವ ಮೂಲಕ ಗರ್ಭಧರಿಸಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ.
ಈ ಮೂಲಕ ನಟಿ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಚಿಕ್ಕಂದಿನಿಂದಲೂ ಭಾವನಾ, ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40ನೇ ವಯಸ್ಸಿಗೆ ತಲುಪಿದಾಗ ತಾಯಿಯಾಗಬೇಕೆಂಬ ಆಸೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಭಾವನಾ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದರು.
ಸದ್ಯ ನಟಿ ಭಾವನಾ ರಾಮಣ್ಣ ಅವರು ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾವನಾ ಅವರ ಸೀಮಂತ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ನಟಿಗೆ ಶುಭ ಹಾರೈಸುತ್ತಿದ್ದಾರೆ. ವಿಶೇಷ ಎಂದರೆ, ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರದಲ್ಲಿ ಸ್ಟಾರ್ ಗಾಯಕಿ ಅರ್ಚನಾ ಉಡುಪ ಭಾಗಿಯಾಗಿದ್ದರು. ಅಲ್ಲದೇ ಲೋಕದ ಕಣ್ಣಿಗೆ ರಾಧೆಯು ಕೂಡ ಎಂಬ ಹಾಡನ್ನು ಹಾಡಿದ್ದರು. ಇದೇ ಹಾಡನ್ನು ನಟಿ ಭಾವನ ಎಂಜಾಯ್ ಮಾಡುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ