/newsfirstlive-kannada/media/media_files/2025/09/15/karnataka-grameena-bank02-2025-09-15-18-06-32.jpg)
ಕರ್ನಾಟಕ ಗ್ರಾಮೀಣಾ ಬ್ಯಾಂಕ್ ನಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಬ್ಯಾಂಕ್ ಕೆಲಸ ಅಂದ್ರೆ ಮೊದಲ ನೆನಪಾಗೋದು ಕೈತುಂಬಾ ಸಂಬಳ, ವರ್ಕಿಂಗ್ ಡೇಸ್ನಲ್ಲಿ ಎಷ್ಟೇ ಕೆಲಸ ಇದ್ರೂ, ಸಾಕಷ್ಟು ರಜೆಗಳೂ ಇರೋದು, ಇದ್ರ ಜೊತೆಗೆ ಉದ್ಯೋಗ ಭದ್ರತೆ. ಇದರಿಂದಾಗಿಯೇ ಅದೆಷ್ಟೋ ಯುವ ಜನರು, ತಮ್ಮ ಎಜುಕೇಷನ್ ಮುಗೀತಿದ್ದಂತೆ, ಬ್ಯಾಂಕಿಂಗ್ ಎಕ್ಸಾಮ್ ಬರೆಯೋಕೆ ಮುಂದಾಗೋದು. ಆದರೆ ಕೇವಲ ಕಾಮರ್ಸ್‌ನಲ್ಲಿ ಅಥವಾ ಒಂದು ಡಿಗ್ರಿ ಮಾಡಿದ ಮಾತ್ರಕ್ಕೆ ಬ್ಯಾಂಕ್ ಉದ್ಯೋಗ ಖಾತ್ರಿನಾ ಅನ್ನೋ ಪ್ರಶ್ನೆ ಮೂಡೋದು ಸಹಜ. ಸದ್ಯ ಉದ್ಯೋಗ ಖಾತರಿ ಮಾಡುವ ನಿಟ್ಟಿನಲ್ಲಿ ಈಗ ಹಲವಾರು ಪ್ರತ್ಯೇಕ ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯವಿವೆ.
ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಈಗೆಲ್ಲಾ ಸಾಕಷ್ಟು ಉದ್ಯೋಗ ಅವಕಾಶಗಳಿವೆ ಅಂತ ಹೇಳೋದನ್ನು ನೋಡಿರ್ತೀರಿ. ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ಫ್ಯಾನಾನ್ಸ್ಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಕೆಲಸಗಳೂ ಸಿಗುತ್ತಿವೆ. ಅದ್ರಲ್ಲೂ ಕಾಮರ್ಸ್ ನಿಮ್ಮ ಮೆಚ್ಚಿನ ಕ್ಷೇತ್ರವಾಗಿದ್ದರೆ ಜಾಬ್ ಗ್ಯಾರಂಟಿ ಅಂತಲೂ ಹೇಳುತ್ತಾರೆ. ಈಗ ಬ್ಯಾಂಕ್ ಕೆಲಸಕ್ಕಾಗಿ ಎದುರು ನೋಡುತ್ತಿರೋರಿಗೆ ಗುಡ್ನ್ಯೂಸ್ ಒಂದಿದೆ.
ದೇಶದಾದ್ಯಂತ ಒಟ್ಟು 28 ಗ್ರಾಮೀಣ ಬ್ಯಾಂಕುಗಳಲ್ಲಿ 13,217 ಹುದ್ದೆಗಳ ನೇಮಕಾತಿಗಾಗಿ IBPS ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅದ್ರಲ್ಲೂ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ರಾಜ್ಯದಾದ್ಯಂತ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಇದು ಪದವೀಧರರಿಗೆ ದೊಡ್ಡ ಅವಕಾಶ.
ಮೊದಲಿಗೆ ಕರ್ನಾಟಕದಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ ಅಂತಾ ನೋಡೋದಾದ್ರೆ..!
ದೇಶದ ಮಟ್ಟದಲ್ಲಿ 13,217 ಹುದ್ದೆಗಳಿದ್ದು, ಅದರಲ್ಲಿ 1,425 ಹುದ್ದೆಗಳು ಕರ್ನಾಟಕಕ್ಕೆ ಮೀಸಲಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ರಾಜ್ಯದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಯಾವ್ಯಾವು ಅಂದ್ರೆ, ಆಫೀಸ್ ಅಸಿಸ್ಟೆಂಟ್ 800 ಹುದ್ದೆಗಳು, ಆಫೀಸರ್ ಸ್ಕೇಲ್ 585 ಹುದ್ದೆಗಳು, ಆಫೀಸರ್ IT 01 ಹುದ್ದೆ, ಆಫೀಸರ್ (ಕಾನೂನು) 05 ಹುದ್ದೆಗಳು, ಆಫೀಸರ್ ಕೃಷಿ 34 ಹುದ್ದೆಗಳು ಇವೆ.
ಅಭ್ಯರ್ಥಿ ವಯೋಮಿತಿ, ಇತರೆ ಅರ್ಹತೆಗಳನ್ನ ಗಮನಿಸೋದಾದ್ರೆ,
ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18–28 ವರ್ಷ ಆಗಿರಬೇಕು. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅಪ್ಲೈ ಮಾಡೋಕೆ 18–30 ವರ್ಷ ಇರಬೇಕು. ಮೀಸಲಾತಿ ಪ್ರಕಾರ ವಯೋಮಿತಿಯಲ್ಲಿ 3 ರಿಂದ 10 ವರ್ಷಗಳ ವಿನಾಯಿತಿ ಅನ್ವಯವಾಗುತ್ತೆ. ಕನಿಷ್ಠ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಕೆಲವು ಹುದ್ದೆಗಳಿಗೆ ಅನುಭವ ಕಡ್ಡಾಯ. ರಾಜ್ಯದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನ್ನಡ ಬಲ್ಲವರಾಗಿರಬೇಕು.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 21 ಸೆಪ್ಟೆಂಬರ್ 2025. ಶುಲ್ಕ ಪಾವತಿ ಕೊನೆಯ ದಿನವೂ ಸೆಪ್ಟೆಂಬರ್ 21, 2025ರಂದೇ ಆಗಿರುತ್ತೆ. ಮುಖ್ಯ ಪರೀಕ್ಷೆ ಡಿಸೆಂಬರ್ 2025 ರಿಂದ ಜನವರಿ 2026 ಮಧ್ಯೆ ನಡೆಯಲಿದೆ. ತಾತ್ಕಾಲಿಕ ನೇಮಕಾತಿ ಪತ್ರ ವಿತರಣೆ ಫೆಬ್ರವರಿ ಅಥವಾ ಮಾರ್ಚ್ 2026ರಲ್ಲಿ ಆಗಲಿದೆ.
ರಾಜ್ಯದ ಪದವೀಧರ ಯುವಕರಿಗೆ ಇದೊಂದು ಒಳ್ಳೆಯ ಉದ್ಯೋಗಾವಕಾಶ. ವಿವಿಧ ಶಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಿದ್ದು, ಅದ್ರಲ್ಲೂ ಸರ್ಕಾರಿ ಬ್ಯಾಂಕ್ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ ಎನ್ನಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.