/newsfirstlive-kannada/media/media_files/2025/09/17/katrina-kaif-at-kukke-subramanya-2025-09-17-13-54-42.jpg)
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕತ್ರೀನಾ ಕೈಫ್
ಬಾಲಿವುಡ್‌ನ ಸ್ಟಾರ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಆಗಿದ್ದಾಳಂತೆ, ಮುಂದಿನ ನವೆಂಬರ್ ವೇಳೆಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಳೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಯಾವುದೇ ಹೆಣ್ಣಿಗೆ ತಾಯಿಯಾಗೋ ಭಾಗ್ಯ ತುಂಬಾನೆ ವಿಶೇಷ. ಅದು ಖಂಡಿತವಾಗಿಯೂ ವರ್ಣನೆಗೆ ನಿಲುಕದ ಸಂತೋಷ.
2021 ರಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್‌ನ ವಿವಾಹವಾಗಿದ್ದ ಕತ್ರಿನಾ ಕೈಫ್‌ಗೆ ನಾಲ್ಕು ವರ್ಷವಾಗಿದ್ರೂ ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ವಯಸ್ಸು 42 ಮೀರಿ ಹೋಗಿತ್ತು. ವೈದ್ಯರನ್ನ ಭೇಟಿ ಮಾಡಿ ಟ್ರೀಟ್ ಮೆಂಟ್ ತೆಗದುಕೊಂಡಿದ್ದರೂ ಸಂತಾನ ಭಾಗ್ಯ ಮಾತ್ರ ದೂರದ ಮಾತಾಗಿತ್ತು. ಆ ಸಂದರ್ಭದಲ್ಲಿ ಕತ್ರಿನಾ ಕೈಫ್ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗಿದ್ದಾರೆ. ಆವಾಗ ಜ್ಯೋತಿಷಿಗಳು ಕತ್ರಿನಾ ಕೈಫ್ ಜಾತಕವನ್ನು ಪರಿಶೀಲಿಸಿ ಸರ್ಪದೋಷ ಇರೋದಾಗಿ ಹೇಳಿದ್ದಾರೆ. ಹಾಗೇ ಅದಕ್ಕೆ ಪರಿಹಾರವಾಗಿ ಕರ್ನಾಟಕದಲ್ಲಿರೋ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಠೆ ಮಾಡಿಸಲು ಸೂಚನೆ ಕೊಟ್ಟಿದ್ದರು.
ಜ್ಯೋತಿಷಿಗಳು ನೀಡಿದ್ದ ಸಲಹೆ ಮೇರೆಗೆ ಕಳೆದ ಮಾರ್ಚ್ 11 ರಂದು ಕತ್ರಿನಾ ಕೈಫ್ ತಮ್ಮ ಕುಟುಂಬಸ್ಥರ ಜೊತೆ ಸೇರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದಿದ್ದರು. ಎರಡು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೇ ವಾಸವಾಗಿದ್ದು, ಸಂತಾನ ಭಾಗ್ಯಕ್ಕೆ ಸಂಕಲ್ಪ ಮಾಡಿ ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಠೆಯನ್ನ ಮಾಡಿಸಿದ್ದರು. ಅಚ್ಚರಿಯಂತೆ ನಾಲ್ಕು ವರ್ಷದಿಂದ ಯಾವುದೇ ಪೂಜೆ ಪುನಸ್ಕಾರ ಮಾಡಿದರೂ ಸಂತಾನ ಭಾಗ್ಯ ಕಾಣದ ಕತ್ರಿನಾ ಕೈಫ್‌ಗೆ ಈಗ ಸಂತಾನ ಫಲ ಸಿಕ್ತಾ ಇದೆ.
ಕುಕ್ಕೆ ಸುಬ್ರಮಣ್ಯದಲ್ಲಿ ನಟಿ ಕತ್ರೀನಾ ಕೈಫ್ ಪೂಜೆ ನೆರವೇರಿಸುತ್ತಿರುವುದು
ಕತ್ರಿನಾಗೆ ಸಿಕ್ತಾ ಕುಕ್ಕೆ ಸುಬ್ರಹ್ಮಣ್ಯನ ಆಶೀರ್ವಾದ?
ಸಂತಾನ ಭಾಗ್ಯಕ್ಕಾಗಿ ಸರ್ಪಸಂಸ್ಕಾರ, ನಾಗ ಪ್ರತಿಷ್ಠೆ ಮಾಡಿಸಿದ್ದ ನಟಿ!
ಕುಕ್ಕೆಯಲ್ಲಿ ನೆಲೆ ನಿಂತಿರೋ ಸುಬ್ರಹ್ಮಣ್ಯ ಸ್ವಾಮಿ ವಿಶ್ವದಲ್ಲಿಯೇ ಫೇಮಸ್. ಇಲ್ಲಿಗೆ ದೇಶ, ವಿದೇಶದಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಬರ್ತಾರೆ. ಸಾಮಾನ್ಯವಾಗಿ ಸರ್ಪದೋಷ ಇದ್ದವ್ರು, ನಾಗ ಶಾಪಕ್ಕೆ ತುತ್ತಾದವರು ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗ್ತಾರೆ. ಹಾಗೇ ಪೂಜೆ ಮಾಡಿಸಿಕೊಂಡು ಹೋದ ಮೇಲೆ ಸರ್ಪದೋಷದಿಂದ ಮುಕ್ತರಾಗಿದ್ದಾರೆ. ಇನ್ನು ಸಂತಾನ ಫಲ ತಡವಾಗುತ್ತಿದೆ ಅಂದ್ರೆ ಅದಕ್ಕೆ ಸರ್ಪದೋಷವೇ ಮುಖ್ಯ ಕಾರಣವಾಗಿರುತ್ತೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಈ ಹಿನ್ನೆಲೆಯಲ್ಲಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಸರ್ಪ ಸಂಸ್ಕಾರ ಮತ್ತು ನಾಗ ಪ್ರತಿಷ್ಠೆ ಮಾಡಿಸಿಕೊಂಡು ಹೋದ ಬೆನ್ನಲ್ಲಿಯೇ ಗರ್ಭಿಣಿಯಾಗಿದ್ದಾರೆ. 42 ವರ್ಷದ ಕತ್ರಿನಾಗೆ ಸಂತಾನ ಭಾಗ್ಯ ಸಿಕ್ತಾ ಇದೆ. ಇದು ಏನನ್ನ ಸೂಚಿಸುತ್ತೆ ಅಂದ್ರೆ, ಅದೆಂಥಾ ಸರ್ಪದೋಷ ಇದ್ದರೂ, ಕುಕ್ಕೆ ಸುಬ್ರಹ್ಮಣ್ಯನಿಗೆ ಭಕ್ತಿಯಿಂದ ಮೊರೆ ಹೋದರೆ, ಪೂಜೆ ಮಾಡಿಸಿದ್ರೆ ಸಂತಾನ ಭಾಗ್ಯ ಗ್ಯಾರಂಟಿ ಅನ್ನೋದನ್ನ ಹೇಳುತ್ತಿದೆ.
ಕುಕ್ಕೆ ಸುಬ್ರಮಣ್ಯಕ್ಕೆ ಕತ್ರೀನಾ ಕೈಫ್ ಭೇಿಟಿ ನೀಡಿದ್ದ ಪೋಟೋ.
ಆಶ್ಲೇಷ ನಕ್ಷತ್ರದಲ್ಲಿಯೇ ಪೂಜೆ ಮಾಡಿಸಿದ್ದ ಕತ್ರಿನಾ!
ನಾಗದೇವರ ಪೂಜೆಗೆ ವಿಶೇಷ ನಕ್ಷತ್ರ ಅಂದ್ರೆ ಅದು ಆಶ್ಲೇಷ ನಕ್ಷತ್ರ. ಅದರಲ್ಲಿಯೂ ಮಂಗಳವಾರ ಆಶ್ಲೇಷ ನಕ್ಷತ್ರ ಬಂದರೆ ಪೂಜೆಗೆ ತುಂಬಾ ಒಳ್ಳೆಯ ದಿನ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಹಾಗೇ ಆ ದಿನ ಸರ್ಪ ಸಂಸ್ಕಾರದ ಪೂಜೆ ಕೈಗೊಂಡ್ರೆ ಒಳ್ಳೆ ಫಲಗಳು ಸಿಗುತ್ತೆವೆ ಅನ್ನೋ ನಂಬಿಕೆಯಿದೆ. ಕತ್ರಿನಾ ಕೂಡ ಮಂಗಳವಾರ ಮತ್ತು ಆಶ್ಲೇಷಾ ನಕ್ಷತ್ರದ ದಿನವೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪೂಜೆ ಮಾಡಿಸಿದ್ದರು. ಅದರ ಫಲ ಏನು ಅಂದರೇ, ಕತ್ರಿನಾ ಕೈಫ್‌ಗೆ ದೇವರ ಆಶೀರ್ವಾದ ಸಿಕ್ತಾ ಇದೆ. ಈಗ ಕತ್ರಿಕಾ ಮಗುವಿಗೆ ಜನ್ಮ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.