/newsfirstlive-kannada/media/media_files/2025/09/23/katrina-kaif-pregency-2025-09-23-15-18-47.jpg)
ನಟಿ ಕತ್ರೀನಾ ಕೈಫ್ ರಿಂದ ಬೇಬಿ ಬಂಪ್ಸ್ ಪೋಟೋ ಹಂಚಿಕೆ
ಬಾಲಿವುಡ್ ನಟಿ ಕತ್ರೀನಾ ಕೈಫ್ ಹಾಗೂ ಪತಿ ವಿಕ್ಕಿ ಕೌಶಲ್ ತಮ್ಮ ದಾಂಪತ್ಯದ ಮಹತ್ವದ ಘೋಷಣೆಯೊಂದನ್ನು ಇಂದು ಮಾಡಿದ್ದಾರೆ. ತಮ್ಮ ಬಾಳಿನಲ್ಲಿ ಹೊಸ ಹೆಜ್ಜೆಯೊಂದರ ಘೋಷಣೆ ಮಾಡಿದ್ದಾರೆ. ನಟಿ ಕತ್ರೀನಾ ಕೈಫ್ ಗರ್ಭೀಣಿಯಾಗಿದ್ದಾರೆ ಎಂದು ಇಂದು ಘೋಷಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಸುದ್ದಿ ಹರಿದಾಡುತ್ತಿತ್ತು. ಆದರೇ, ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಇಬ್ಬರೂ ಇನ್ಸ್ ಟಾಗ್ರಾಮ್ ಪೋಸ್ಟ್ ನಲ್ಲಿ ಕತ್ರೀನಾ ಕೈಫ್ ಗರ್ಭೀಣಿಯಾಗಿರುವುದನ್ನ ಅಧಿಕೃತವಾಗಿ ಘೋಷಿಸಿದ್ದಾರೆ.
ಕತ್ರೀನಾ ತುಂಬು ಗರ್ಭೀಣಿಯಾಗಿರುವ ಪೋಟೋವನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಬಂಪ್ಸ್ ಪೋಟೋವನ್ನು ವಿಕ್ಕಿ ಕೌಶಲ್ ಮತ್ತು ಕತ್ರೀನಾ ಇಬ್ಬರೂ ಷೇರ್ ಮಾಡಿದ್ದಾರೆ. ನಾವು ನಮ್ಮ ಜೀವನದ ಉತ್ತಮ ಅಧ್ಯಾಯವನ್ನು ಆರಂಭಿಸುವ ಹಾದಿಯಲ್ಲಿದ್ದೇವೆ. ಹೃದಯ ಸಂಪೂರ್ಣ ಸಂತೋಷದಿಂದ ತುಂಬಿದೆ. ಕೃತಜ್ಞತೆಯಿಂದ ಇದ್ದೇವೆ ಎಂದು ಇಬ್ಬರೂ ಇನ್ಸಾಟಾಗ್ರಾಮ್ ನಲ್ಲಿ ಹೇಳಿದ್ದಾರೆ.
ನಟಿ ಕತ್ರೀನಾ ಕೈಫ್ ಈಗಾಗಲೇ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. 2021 ರಲ್ಲಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದ ಬರ್ವಾರಾದಲ್ಲಿರುವ ಸಿಕ್ಸ್ ಸೆನ್ಸಸ್ ಪೋರ್ಟ್ ನಲ್ಲಿ ವಿವಾಹವಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.