/newsfirstlive-kannada/media/media_files/2025/09/23/kawasaki-bikes-2025-09-23-12-40-44.jpg)
ಕವಾಸಾಕಿ ಬೈಕ್ ಗಳ ಬೆಲೆ ಇಳಿಕೆ
ದೇಶದಲ್ಲಿ ಜಿಎಸ್‌ಟಿ ದರ ಬದಲಾವಣೆಯಾದ ಬಳಿಕ ಕವಾಸಾಕಿ ಬೈಕ್ ಕಂಪನಿಯು ತನ್ನ ಬೈಕ್ ಗಳ ರೇಟ್ ಇಳಿಕೆ ಮಾಡಿದೆ. ಕೇಂದ್ರದ ಹಣಕಾಸು ಇಲಾಖೆ ಹಾಗೂ ಜಿಎಸ್‌ಟಿ ಮಂಡಳಿ ತೆಗೆದುಕೊಂಡ ತೀರ್ಮಾನದ ಪ್ರಕಾರ, 350 ಸಿಸಿ ವರೆಗಿನ ಇಂಜಿನ್ ಹೊಂದಿರುವ ಬೈಕ್ ಗಳಿಗೆ ಯಾವುದೇ ಸೆಸ್ ಇಲ್ಲ. ಜೊತೆಗೆ ಶೇ.18 ರಷ್ಟು ಜಿಎಸ್‌ಟಿ ಮಾತ್ರ ವಿಧಿಸಿ ಜಿಎಸ್‌ಟಿ ಕೌನ್ಸಿಲ್ ತೀರ್ಮಾನ ತೆಗೆದುಕೊಂಡಿದೆ. ಇದರಿಂದಾಗಿ ಕವಾಸಾಕಿ KLX230, ನಿಂಜಾ 300 ಮತ್ತು ವೇರಿಸೇ X300 ಬೈಕ್ ಗಳು ಹೆಚ್ಚು ಅಫರ್ಡಬಲ್ ಆಗಿವೆ.
ಕವಾಸಾಕಿ KLX 230 ಬೈಕ್‌ನ ಬೆಲೆಯನ್ನು ಇತ್ತೀಚೆಗೆ ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಈ ಬೈಕ್ ಬೆಲೆ 1.99 ಲಕ್ಷ ರೂಪಾಯಿಗೆ ಇಳಿದಿದೆ. ಆದರೇ, ಹೊಸ ಜಿಎಸ್‌ಟಿ ದರ ಜಾರಿಯಾದ ಬಳಿಕ ಕವಾಸಾಕಿ KLX 230 ಬೆಲೆಯು ಮತ್ತಷ್ಟು ಇಳಿದಿದ್ದು, 1.84 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಇದು ಎಕ್ಸ್ ಷೋರೂಮು ಬೆಲೆ.
ಇನ್ನೂ ಕವಾಸಾಕಿ KLX 230 ಮತ್ತು KLX 230 RS ಬೆಲೆಯ ವಿವರ ಈ ಕೆಳಗಿನಂತಿದೆ.
Model | Model Year | Old Price (Rs, ex-showroom) | New Price (Rs, ex-showroom) |
---|---|---|---|
KLX 230 | MY26 | 1.99 lakh | 1.84 lakh |
KLX 230 | MY25 | 3.30 lakh | 2.99 lakh |
KLX 230 R S | MY26 | 1.94 lakh | 1.79 lakh |
KLX 230 R S | MY24 | 5.21 lakh | 4.81 lakh |
ಇನ್ನೂ ಕವಾಸಾಕಿ W 175
ಇನ್ನೂ ಕವಾಸಾಕಿ W175 ತನ್ನ ಚಾರ್ಮ್ ನಿಂದ ಗಮನ ಸೆಳೆದಿದೆ. ಇದರ ಬೆಲೆಯು ಇಳಿಕೆಯಾಗಿದೆ. MY 24 ಮಾಡೆಲ್ ಪ್ರಾರಂಭಿಕ ಬೆಲೆಯು 1.25 ಲಕ್ಷ ರೂಪಾಯಿ ಆಗಿದೆ. ಇದು ಎಕ್ಸ್ ಷೋರೂಮು ಬೆಲೆ.
Model | Model Year | Old Price (Rs, ex-showroom) | New Price (Rs, ex-showroom) |
---|---|---|---|
W175 | MY23 | 1.22 lakh | 1.13 lakh |
W175 SP ED | MY23 | 1.24 lakh | 1.15 lakh |
W175 | MY24 | 1.29 lakh | 1.19 lakh |
W175 SP ED | MY24 | 1.31 lakh | 1.21 lakh |
W175 Street | MY24 | 1.35 lakh | 1.25 lakh |
KLX 110RL
ಇನ್ನೂ ಕೆಎಲ್‌ಎಕ್ಸ್ 110 RL 110 ಸಿಸಿ ಆಗಿದ್ದು, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿರುವ ಬೈಕ್. ಇದು KLX 230 ಬೈಕ್ ಗಿಂತ ಚಿಕ್ಕ ಬೈಕ್ ಆಗಿದೆ. ಕವಾಸಾಕಿ 100ಆರ್‌ಎಲ್ ಬೈಕ್ ಬೆಲೆಯು 3.12 ಲಕ್ಷ ರೂಪಾಯಿಯಿಂದ 2.88 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ.
ಇನ್ನೂ ಕವಾಸಾಕಿ ನಿಂಜಾ 300 ಬೈಕ್ ಬೆಲೆಯು 3.43 ಲಕ್ಷ ರೂಪಾಯಿಯಿಂದ 3.17 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಇದು ಎಕ್ಸ್ ಷೋರೂಮು ಬೆಲೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.