/newsfirstlive-kannada/media/media_files/2025/09/17/karnataka-examination-authority02-2025-09-17-16-33-16.jpg)
ಕೆಇಎ ನಿಂದ ವಿಟಿಯುಗೆ ಪತ್ರ ಬರೆದು ಸೂಚನೆ
ಸೀಟ್ ಬ್ಲಾಕಿಂಗ್ ಬ್ರೇಕ್ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ.. ಸೀಟು ಪಡೆದು ಕಾಲೇಜು ಸೇರದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದು ಕಳ್ಳಾಟಕ್ಕೆ ಕಡಿವಾಣ ಹಾಕಲು VTU ಮೊರೆ ಹೋಗಿದೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ
ಸೀಟು ಪಡೆದು ಅಡ್ಮಿಷನ್ ಆಗದ 351 ಅಭ್ಯರ್ಥಿಗಳು
ಶೋಕಾಸ್ ನೋಟಿಸ್ ಜಾರಿ ಮಾಡಿದ KEA
ಪ್ರತೀ ವರ್ಷ ಕೂಡ CET ಸೀಟು ಹಂಚಿಕೆ ಬಳಿಕ ಕೇಳಿ ಬರ್ತಾ ಇದ್ದ ಒಂದೇ ಒಂದು ವಿಚಾರ ಅಂದ್ರೆ ಅದು ಸೀಟ್ ಬ್ಲಾಕಿಂಗ್. ಸೀಟ್ ಬ್ಲಾಕಿಂಗ್ ಕರಾಳ ದಂಧೆಯಿಂದ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗೆ ಸರ್ಕಾರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುವ ಕನಸು ಕಮರಿ ಹೋಗುತ್ತಿತ್ತು. ಯಥಾ ಪ್ರಕಾರ ಈ ವರ್ಷವೂ ಸೀಟ್ ಬ್ಲಾಕಿಂಗ್ ಯತ್ನ ನಡೆದಿದೆ. ಆದ್ರೆ ಮೊದಲೇ ಎಚ್ಚರಿಸಿದಂತೆ KEA ಈ ಬಾರಿ ಅಲರ್ಟ್ ಆಗಿದ್ದು ಸೀಟು ಪಡೆದು ಕಾಲೇಜು ದಾಖಲಾಗದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಒಂದಲ್ಲ ಎರಡಲ್ಲ ಒಟ್ಟು 351 ಅಭ್ಯರ್ಥಿಗಳು ಸೀಟು ಪಡೆದು CET ಮೂರನೇ ಸುತ್ತಿನ ಸೀಟು ಹಂಚಿಕೆ ಬಳಿಕವೂ ಕಾಲೇಜು ಅಡ್ಮಿಷನ್ ಮಾಡಿಸಿ ಕೊಂಡಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಕಾರಣ ಕೇಳಿ KEA ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಸಂಪೂರ್ಣ ವಿವರ VTU ಗೆ ಸಲ್ಲಿಕೆ ಮಾಡಿ ಯಾವುದೇ ಮಾರ್ಗದಿಂದಲೂ ಅಡ್ಮಿಷನ್ ಕೊಡದಂತೆ ತಿಳಿಸಿದ್ದಾರೆ. KEA ಬರೆದ EXCLUSIVE ಪತ್ರದ ಪ್ರತಿ ಕೂಡ ನ್ಯೂಸ್ ಫಸ್ಟ್ ಗೆ ಲಭ್ಯ ಆಗಿದೆ.
ಕೆಇಎ ಸಿಇಓ ಪ್ರಸನ್ನ
ಕಾಮೆಡ್ ಕೆ ಅಥವಾ ಮ್ಯಾನೇಜ್ಮೆಂಟ್ ಸೀಟು ಕೂಡ ಸದ್ಯದ ಮಟ್ಟಿಗೆ ಈ 351 ಅಭ್ಯರ್ಥಿಗಳಿಗೆ ಕೊಡಬಾರದು ಅಂತ KEA ತಿಳಿಸಿದೆ. ಇನ್ನು 351 ಕ್ಕೆ 351 ಅಭ್ಯರ್ಥಿಗಳು ಸೀಟ್ ಬ್ಲಾಕ್ ಮಾಡಿದ್ದಾರೆ ಅಂತ ಹೇಳೋಕೆ ಅಸಾಧ್ಯ. ಕೆಲವರು ವೈಯಕ್ತಿಕ ಕಾರಣಗಳಿಂದ ಅಡ್ಮಿಷನ್ ಆಗದೇ ಇರಬಹುದು ಇದೇ ಕಾರಣಕ್ಕೆ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅಭ್ಯರ್ಥಿಗಳು ಅಡ್ಮಿಷನ್ ಆಗದ ಸೀಟು ಖಾಸಗಿ ಅವರಿಗೆ ಲಾಭ ಮಾಡಿ ಕೊಳ್ಳಲು ದಾರಿ ಆಗುತ್ತೆ. ಈ ಹಿನ್ನಲೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ
CET ಪರೀಕ್ಷೆ ಆರಂಭ ಆಗುವ ಮೊದಲಿಂದಲೂ ಕೂಡ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ವಿಚಾರವಾಗಿ ಅಡ್ಮಿಷನ್ ವಿಚಾರವಾಗಿ KEA ಸ್ಪಷ್ಟವಾಗಿ ತಿಳಿಸಿತ್ತು. ಒಂದೊಮ್ಮೆ ಡ್ರಾಪ್ ಆದರೂ ಎರಡು ಸುತ್ತಿನ ಸೀಟು ಹಂಚಿಕೆ ಆದ ಮೇಲೆ ಮೂರನೇ ಸುತ್ತಿನ ಸೀಟು ಹಂಚಿಕೆ ಮೊದಲೇ ನಿರ್ಣಯ ಕೈಗೊಳ್ಳಬೇಕು ಅಂತ ತಿಳಿಸಿದ್ದರೂ ಅಭ್ಯರ್ಥಿಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟು ಸಿಗದೇ ಇರೋ ರೀತಿ ಮಾಡಿರುವುದು ದುರದೃಷ್ಟಕರ. ಈ ರೀತಿ ಮಾಡಿ ಖಾಸಗಿಯವರಿಗೆ ಲಾಭ ಮಾಡಿ ಕೊಡುವ ಕೆಟ್ಟ ಹವ್ಯಾಸಕ್ಕೆ KEA ಬ್ರೇಕ್ ಹಾಕಲು ಹೊರಟಿರುವುದು ಒಳ್ಳೆ ನಡೆಯೇ ಸರಿ.
ಪ್ರಗತಿ ಶೆಟ್ಟಿ
ನ್ಯೂಸ್ ಫಸ್ಟ್
ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.