/newsfirstlive-kannada/media/media_files/2026/02/10/social-media-influencer-chinnu-papu-death-2026-02-10-17-38-22.jpg)
ಚಿನ್ನು ಪಾಪು ಅಲಿಯಾಸ್ ರೇಷ್ಮಾ ಸಾವು
ಮನುಷ್ಯ ಪರರಿಗೆ ಸೋಲಲ್ಲ.. ಆದ್ರೆ ಪರಿಸ್ಥಿತಿಗೆ ಸೋಲ್ತಾನೆ.. ಕೇರಳದ ಇನ್‌ಫ್ಲ್ಯೂಯೆನ್ಸರ್ ಬಾಳಲ್ಲಿ ಅದೇ ನಡೆದಿರೋದು.. ಪರಿಸ್ಥಿತಿಗೆ ತಲೆ ಬಾಗಿದಾಕೆ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇನ್​ಸ್ಟಾ ಇನ್‌ಫ್ಲ್ಯೂಯೆನ್ಸರ್ ಚಿನ್ನು ಪಾಪು ಅನುಮಾನಾಸ್ಪದ ಸಾವು ಕಾಸರಗೋಡು ಪೊಲೀಸರ ತಲೆ ನೋವಾಗಿ ಪರಿಣಮಿಸಿದೆ.
ಫಿಶ್​.. ನಾನ್​ ವೆಜ್​.. ಪರೋಟ.. ಕಾಯಿ.. ಬಕೆಟ್​.. ಜಗ್ಗು.. ಹಳ್ಳಿ ಸೊಗಡು.. ಗ್ರಾಮೀಣ ಜೀವನ.. ಕಾಸರಗೋಡು ಶೈಲಿಯ ಭಾಷೆ.. ಸ್ಥಳೀಯ ಆಹಾರದ ವಿಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್​ ಮಾಡಿ ಜನರಿಗೆ ಒಂದಷ್ಟು ಇನ್​ಫಾರ್ಮೇಷನ್​ ಕೊಡ್ತಿದ್ದ ಇನ್‌ಫ್ಲ್ಯೂಯೆನ್ಸರ್ ಚಿನ್ನು ಪಾಪು.. ನೇಣಿಗೆ ಕೊರಳೊಡ್ಡಿದ್ದಾಳೆ.
ಇನ್‌ಫ್ಲ್ಯೂಯೆನ್ಸರ್ ಚಿನ್ನು ಪಾಪು ಅನುಮಾನಾಸ್ಪದ ಸಾವು!
ಮೇಲ್ನೋಟಕ್ಕಿದು ಆತ್ಮಹತ್ಯೆ.. ಸಾವಿನ ಹಿಂದೆ ಅನುಮಾನ!
ರೇಷ್ಮಾ.. ಚಿನ್ನು ಪಾಪು.. ಎಂದೇ ಪ್ರಖ್ಯಾತಿ ಪಡೆದಿದ್ದ ಯುವತಿ.. ವಯಸ್ಸು ಜಸ್ಟ್​ 24.. ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್.. ಕಲರ್​ ಫುಲ್​ ಜೀವ ಶೈಲಿಯಲ್ಲಿ ದಿನ ಕಳೆಯುತ್ತಿದ್ದಾಕೆ.. ನಾಲ್ಕು ಗೋಡೆ ಇರೋ ಕತ್ತಲೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ನಿಗೂಢ ರೀತಿಯಲ್ಲಿ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಮೃತಪಟ್ಟಿರೋ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಉಳಿಯತ್ತಡ್ಕದಲ್ಲಿರೋ ತಮ್ಮ ಬಾಡಿಗೆ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಕ್ಕಪಕ್ಕದವ್ರು ತಕ್ಷಣವೇ ಅವರನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಅವರು ಮೃತಪಟ್ಟಿರೋ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ.
ಚಿನ್ನು ಪಾಪು.. ನಿಜವಾದ ಹೆಸರು ಕೆ.ರೇಷ್ಮಾ.. ಇವರು ಮೂಲತಃ ಅಡೂರ್‌ನವರು. ಆದ್ರೆ, ಸಾವಿಗೀಡಾಗುವ ಸಮಯದಲ್ಲಿ ಕಾಸರಗೋಡು ನಗರದ ಬಳಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ರು. ಇನ್‌ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಚಿನ್ನು, ತಮ್ಮ ಶಾರ್ಟ್ ವಿಡಿಯೋಗಳಿಂದಲೇ ಹೆಚ್ಚು ಪರಿಚಿತರಾಗಿದ್ರು. ಅವರ ಕಂಟೆಂಟ್ ಸರಳ, ಸ್ಥಳೀಯ ಹಾಗೂ ಕಾಸರಗೋಡಿನ ದೈನಂದಿನ ಬದುಕಿಗೆ ಹತ್ತಿರವಾಗಿದ್ದ ಕಾರಣಕ್ಕೆ ಜನರನ್ನ ಸೆಳೆದಿತ್ತು. ಚಿನ್ನು ಪಾಪು ಮುಖ್ಯವಾಗಿ ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ಮಾಡಿದ ವಿಡಿಯೋಗಳಿಂದ ಹೆಚ್ಚು ಜನಪ್ರಿಯರಾಗಿದ್ರು. ಅವರ ಈ ಶೈಲಿ ಅನೇಕ ವೀಕ್ಷಕರಿಗೆ ಸಹಜ ಹಾಗೂ ಹತ್ತಿರ ಎನಿಸಿತ್ತು. ಕ್ಯಾಮರಾ ಮುಂದೆ ಅವರ ಸಹಜ ಶೈಲಿ, ಹಾಸ್ಯಪ್ರಜ್ಞೆ ಮತ್ತು ಸರಳತೆಯನ್ನು ಅನೇಕರು ಮೆಚ್ಚಿಕೊಂಡಿದ್ರು.
/filters:format(webp)/newsfirstlive-kannada/media/media_files/2026/02/10/social-media-influencer-chinnu-papu-death-1-2026-02-10-18-05-16.jpg)
ವೈಯಕ್ತಿಕ ಜೀವನ.. ಇತ್ತೀಚಿನ ವಿಚ್ಛೇದನ!
ಪ್ರೀತಿಸಿ ಮದುವೆಯಾಗಿದ್ದ ರೇಷ್ಮಾ ಅಲಿಯಾಸ್​ ಚಿನ್ನು ಪಾಪು
ತಿಂಗಳ ಹಿಂದಷ್ಟೇ ವಿವಾಹ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು
ನಾಲ್ಕು ವರ್ಷದ ಮಗನಿದ್ದು, ರೇಷ್ಮಾ ಪೋಷಕರು ಜೊತೆಗಿದೆ
ನಿನ್ನೆ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಆಸ್ಪತ್ರೆಯಲ್ಲಿ ದೃಢಪಡಿಸಿದ ನಂತರ ಚಿನ್ನು ಪೋಷಕರಿಗೆ ಮಾಹಿತಿ
(ರೇಷ್ಮಾ ಅಲಿಯಾಸ್​ ಚಿನ್ನು ಪಾಪು ಪ್ರೀತಿಸಿ ಮದುವೆಯಾಗಿದ್ರು. ಆದ್ರೆ, ಕೇವಲ ಒಂದು ತಿಂಗಳ ಹಿಂದೆಯಷ್ಟೇ ಅವರ ವಿವಾಹ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಅವರಿಗೆ ನಾಲ್ಕು ವರ್ಷದ ಮಗನಿದ್ದು, ಸದ್ಯ ಆತ ಅಡೂರ್‌ನಲ್ಲಿರೋ ತನ್ನ ಅಜ್ಜ-ಅಜ್ಜಿ ಅಂದ್ರೆ ರೇಷ್ಮಾ ಪೋಷಕರಾದ ಗಂಗಾಧರನ್ ಮತ್ತು ಶೈಲಜಾ ಜೊತೆಗಿದ್ದಾನೆ. ನಿನ್ನೆ ಮಧ್ಯಾಹ್ನ, ಚಿನ್ನು ಪಾಪು ಕಾಸರಗೋಡಿನ ತಮ್ಮ ಬಾಡಿಗೆ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ಪತ್ರೆಯಲ್ಲಿ ಅವರ ಸಾವನ್ನ ದೃಢಪಡಿಸಿದ ನಂತರ, ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ.)
ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅವರ ಇತ್ತೀಚಿನ ವಿಚ್ಛೇದನ ಅಥವಾ ಬೇರೆ ಯಾವುದಾದ್ರೂ ವೈಯಕ್ತಿಕ ಸಮಸ್ಯೆ ಈ ದುರಂತಕ್ಕೆ ಕಾರಣವಾಯಿತೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. ತನಿಖೆ ಬಳಿಕ ಹೆಚ್ಚಿ ವಿವರ ಸಿಗೋ ನಿರೀಕ್ಷೆಯಿದೆ.
ನ್ಯೂಸ್ ಫಸ್ಟ್​ ಬ್ಯುರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us