ರಾತ್ರಿ ಮಲಗುವುದಕ್ಕೂ ಮೊದಲು ಈ ಹಣ್ಣನ್ನು ತಿನ್ನಿ.. ಕಿವಿ ಫ್ರೂಟ್​ನಿಂದ ಏನೆಲ್ಲ ಪ್ರಯೋಜನಗಳಿವೆ?

ಅನೇಕ ಆರೋಗ್ಯದ ಉಪಯೋಗಗಳನ್ನು ಈ ಹಣ್ಣು ಹೊಂದಿದ್ದರಿಂದ ಪೌಷ್ಟಿಕ ಹಣ್ಣು ಎಂದು ಹೇಳಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

author-image
Bhimappa
Kiwi_Fruit
Advertisment

ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲ ಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪತ್ತಿನ ಅಧಿಕ ಮಾಡುತ್ತದೆ. ಹೀಗಾಗಿ ಇದು ಸೋಂಕು ಹಾಗೂ ಕಾಯಿಲೆಗಳೊಂದಿಗೆ ಹೋರಾಡಿ ನಮ್ಮನ್ನು ಆರೋಗ್ಯಯುತವಾಗಿ ಇಡುತ್ತದೆ. ನಿತ್ಯ ಮಲಗುವುದಕ್ಕೂ ಮೊದಲು ಒಂದು ಕಿವಿ ಹಣ್ಣು ತಿನ್ನುವುದರಿಂದ ಶೀತ, ಜ್ವರದಂತಹಗಳನ್ನ ದೂರ ಮಾಡಬಹುದು. 

ಕಿವಿ ಹಣ್ಣಿನಲ್ಲಿ ಫೈಬರ್​ ಅಂಶ ದೊಡ್ಡ ಮಟ್ಟದಲ್ಲೇ ಇರುತ್ತದೆ. ಇದೇ ಜೀರ್ಣ ಕ್ರಿಯೆಗೆ ಎಷ್ಟೋ ಅನುಕೂಲವಾಗುತ್ತದೆ. ಕಿವಿ ಹಣ್ಣಿನಲ್ಲಿರುವ ಆಕ್ಟಿನಿಡಿನ್ ಎಂಜೈಮ್ ಪ್ರೊಟೈನ್ಸ್​ (Actinidin enzyme proteins) ದೇಹದಲ್ಲಿ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಸಮಸ್ಯೆಗಳನ್ನು ದೂರ ಮಾಡುತ್ತದೆ. 

ಇನ್ನು ಈ ಹಣ್ಣಿನಲ್ಲಿ ಪೋಟ್ಯಾಷಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿ ಆಗುತ್ತದೆ. ಹಣ್ಣಿನಲ್ಲಿರುವ ಆಂಟಿಆಕ್ಸೈಡೆಂಟ್ಸ್​ ಕೊಲೆಸ್ಟ್ರಾಲ್ (Antioxidants are cholesterol) ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನ ಕಡಿಮೆಗೊಳಿಸುತ್ತದೆ. 

ಇದನ್ನೂ ಓದಿ: ಹಾವು ಕಚ್ಚಿದ ತಕ್ಷಣ ಈ ತಪ್ಪು ಮಾಡಿದ್ರೆ ಪ್ರಾಣವೇ ಹೋಗುತ್ತೆ.. ಜೀವ ಉಳಿಸಿಕೊಳ್ಳಲು ಏನು ಮಾಡಬೇಕು?

Kiwi_Fruits

ಚರ್ಮದ ಆರೋಗ್ಯವನ್ನು ಉತ್ತೇಜಿಸುವಲ್ಲಿಯೂ ಕಿವಿ ಹಣ್ಣು ಬೇಕಾಗುತ್ತದೆ. ಕಿವಿ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಇತರೆ ಹಾನಿಯಿಂದ ರಕ್ಷಣೆ ಮಾಡುತ್ತವೆ. ನಮ್ಮಲ್ಲಿ ಯೌವನಯುತ ಚರ್ಮವನ್ನು ಕಾಪಾಡಿಕೊಳ್ಳಬಹುದು. 

ಗರ್ಭಿಣಿ ಸಮಯದಲ್ಲಿ ಮಹಿಳೆಯರು ಈ ಹಣ್ಣನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಫೋಲೇಟ್ ಹೊಂದಿರುತ್ತದೆ, ಇದು ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಮುಖ್ಯವಾಗಿದೆ. ಕಿವಿ ಹಣ್ಣನ್ನು ಹಾಗೆಯೇ ತಿನ್ನಬಹುದು. ಸಲಾಡ್‌ಗಳು, ಸಿಹಿತಿಂಡಿಗಳು ಹಾಗೂ ಜೂಸ್ ಮಾಡಿಯೂ ಕುಡಿಯಬಹುದು. 

ಅನೇಕ ಆರೋಗ್ಯದ ಉಪಯೋಗಗಳನ್ನು ಈ ಹಣ್ಣು ಹೊಂದಿದ್ದರಿಂದ ಪೌಷ್ಟಿಕ ಹಣ್ಣು ಎಂದು ಹೇಳಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ದೃಷ್ಟಿ ಕೂಡ ಸುಧಾರಿಸುತ್ತದೆ. ಈ ಎಲ್ಲವೂ ಈ ಒಂದು ಹಣ್ಣಿನಿಂದ ಸಿಗುತ್ತದೆ ಎನ್ನುವುದು ವಿಶೇಷ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kiwi Fruit
Advertisment