ಹಾಸ್ಯ ನಟ ಕಪಿಲ್ ಶರ್ಮಾಗೆ ಬೆದರಿಕೆ, ಕೋಲ್ಕತ್ತಾ ಮೂಲದ ವ್ಯಕ್ತಿ ಬಂಧನ..!

ಕಾಮಿಡಿಯನ್ ಕಪಿಲ್ ಶರ್ಮಾ, ಪಾತಕಿಗಳಾದ ಗೋಲ್ಡಿ ಬ್ರಾರ್‌, ರೋಹಿತ್ ಗೋದಾರ ಹೆಸರಿನಲ್ಲಿ ಜೀವ ಬೆದರಿಕೆ ಹಾಕಲಾಗಿತ್ತು. ಬರೋಬ್ಬರಿ 1 ಕೋಟಿ ರೂಪಾಯಿ ಹಣ ನೀಡುವಂತೆ ಡಿಮ್ಯಾಂಡ್ ಮಾಡಲಾಗಿತ್ತು. ಈ ಕೇಸ್‌ ಅನ್ನು ಮುಂಬೈ ಪೊಲೀಸರು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

author-image
Chandramohan
Kapil sharma show

ಕಾಮಿಡಿಯನ್ ಕಪಿಲ್ ಶರ್ಮಾಗೆ ಜೀವ ಬೆದರಿಕೆ ಕೇಸ್‌

Advertisment
  • ಕಾಮಿಡಿಯನ್ ಕಪಿಲ್ ಶರ್ಮಾಗೆ ಜೀವ ಬೆದರಿಕೆ ಕೇಸ್‌
  • ಕೋಲ್ಕತ್ತಾದಲ್ಲಿ ಓರ್ವ ಆರೋಪಿ ಬಂಧಿಸಿದ ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್‌
  • ದೀಲೀಪ್ ಚೌಧರಿ ಎಂಬ ಆರೋಪಿ ಬಂಧಿಸಿದ ಪೊಲೀಸರು

ಖ್ಯಾತ ಕಾಮಿಡಿಯನ್  ಕಪಿಲ್ ಶರ್ಮಾ ಅವರಿಗೆ ಬಂದಿದ್ದ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈ  ಕ್ರೈಂ ವಿಭಾಗದ ಪೊಲೀಸರು ಕೋಲ್ಕತ್ತಾ ಮೂಲದ ದಿಲೀಪ್ ಚೌಧರಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಕುಖ್ಯಾತ ದರೋಡೆಕೋರರಾದ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಹೆಸರಿನಲ್ಲಿ ಬೆದರಿಕೆ ಹಾಕಿ ಕಪಿಲ್ ಶರ್ಮಾ ಬಳಿ  ₹ 1 ಕೋಟಿಗೆ ಬೇಡಿಕೆ ಇಟ್ಟಿದ್ದ.
ಆರೋಪಿ, ದಿಲೀಫ್ ಚೌಧರಿ,  ಕಪಿಲ್ ಶರ್ಮಾಗೆ ಸೆಪ್ಟೆಂಬರ್ 22 ಹಾಗು 23 ರಂದು 7 ಬಾರಿ ಕರೆ ಮಾಡಿದ್ದಾನೆ. ಈ ಕೇಸ್ ತನಿಖೆಗಾಗಿ  ಸೆಪ್ಟೆಂಬರ್ 30ರ ವರೆಗೆ ಆರೋಪಿಯನ್ನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಆರೋಪಿಗಳಿಗೆ ದರೋಡೆಕೋರರೊಂದಿಗೆ ನೇರ ಸಂಪರ್ಕವಿದೆಯೇ ಅಥವಾ ಅವರ ಹೆಸರುಗಳನ್ನು ಬಳಸಿಕೊಂಡು ಹಣ ಸುಲಿಗೆ ಮಾಡಿ ಭಯ ಹುಟ್ಟಿಸುತ್ತಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 
ಇದಲ್ಲದೆ, ಮಹಾರಾಷ್ಪ್ರ ನವ ನಿರ್ಮಾಣ ಸೇನೆಯು  ಕಪಿಲ್ ಶರ್ಮಾರ  'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ಗೆ ಎಚ್ಚರಿಕೆ ನೀಡಿದೆ. ಈ ಕಾರ್ಯಕ್ರಮದಲ್ಕಿ ಸೆಲೆಬ್ರಿಟಿ ಆತಿಥಿಯೊಬ್ಬರು ಮುಂಬೈ ಬದಲು ಬಾಂಬೆ ಎಂದು ಕರೆದಿದ್ದಕ್ಕೆ NNS ಪಕ್ಷದ ಚಲನಚಿತ್ರ ವಿಭಾಗದ ಮುಖ್ಯಸ್ಥರೂ ಆಗಿರುವ ಎಂಎನ್‌ಎಸ್ ನಾಯಕಿ ಅಮೇಯಾ ಖೋಪ್ಕರ್, ಕಪಿಲ್ ಶರ್ಮಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ. 

Kapil sharma show 02




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

kapil sharma comedy show
Advertisment