/newsfirstlive-kannada/media/media_files/2025/08/01/lokayukuta-kalakappa-raid222-2025-08-01-16-25-40.jpg)
ಕರ್ನಾಟಕ ರೂರಲ್ ಇನ್ಪ್ರಾಸ್ಟ್ರಕ್ಟರ್ ಡೆವಲಪ್ ಮೆಂಟ್ ಲಿಮಿಟೆಡ್(ಕೆಆರ್‌ಐಡಿಎಲ್) ನಲ್ಲಿ ಸಾಮಾನ್ಯ ಕ್ಲರ್ಕ್ ಆಗಿದ್ದ ಕಳಕಪ್ಪ ನಿಡಗುಂದಿಯ ತಿಂಗಳ ಸಂಬಳ 15 ಸಾವಿರ ರೂಪಾಯಿ. ಆದರೇ, ಕಳಕಪ್ಪ ನಿಡಗುಂದಿ ಬರೋಬ್ಬರಿ 30 ಕೋಟಿ ರೂಪಾಯಿ ಸಂಪತ್ತಿನ ಒಡೆಯ. ಕಳಕಪ್ಪ ನಿಡಗುಂದಿಯ ಬಳಿ 24 ಮನೆಗಳಿವೆ. 50 ಸೈಟ್ ಗಳಿವೆ. ಇನ್ನೂ ಕೃಷಿ ಜಮೀನು ಬರೋಬ್ಬರಿ 40 ಎಕರೆ ಭೂಮಿ ಇದೆ. ಸರ್ಕಾರಿ ಇಲಾಖೆಯಲ್ಲಿ ಸಾಮಾನ್ಯ ಕ್ಲರ್ಕ್ ಒಬ್ಬ ತನ್ನ ತಿಂಗಳ ಸಂಬಳವನ್ನೇ ನಂಬಿಕೊಂಡು ಇಷ್ಟೆಲ್ಲಾ ಸಂಪಾದಿಸಲು ಸಾಧ್ಯವೇ? ಖಂಡಿತ ಇಲ್ಲ. ಆದರೇ, ಕಳಕಪ್ಪ ನಿಡಗುಂದಿ ಕೆಆರ್‌ಐಡಿಎಲ್ ನಲ್ಲಿ ಸಾಕಷ್ಟು ಆಕ್ರಮ ನಡೆಸಿಯೇ ಭಾರಿ ಮೊತ್ತದ ಆಸ್ತಿಪಾಸ್ತಿ ಸಂಪಾದಿಸಿದ್ದಾನೆ. ಲೋಕಾಯುಕ್ತ ಅಧಿಕಾರಿಗಳು ಕೊಪ್ಪಳದಲ್ಲಿ ಕಳಕಪ್ಪ ನಿಡಗುಂದಿಯ ಮನೆ ಮೇಲೆ ದಾಳಿ ನಡೆಸಿದಾಗ, ಬ್ರಹ್ಮಾಂಡ ಭ್ರಷ್ಟಾಚಾರಿಯ ಬಣ್ಣ ಬಯಲಾಗಿದೆ. ಕ್ಲರ್ಕ್ ಕಳಕಪ್ಪ ಸಾಮಾನ್ಯ ವ್ಯಕ್ತಿಯಲ್ಲ, 100 ಕೋಟಿ ರೂಪಾಯಿ ಒಡೆಯ ಎಂಬ ಸತ್ಯ ಲೋಕಾಯುಕ್ತ ಅಧಿಕಾರಿಗಳಿಗೆ ದಾಳಿ ಬಳಿಕ ಗೊತ್ತಾಗಿದೆ.
ಈ ಕಳಕಪ್ಪ ನಿಡಗುಂದಿ ಕರ್ನಾಟಕ ಗ್ರಾಮೀಣಾ ಮೂಲಸೌಕರ್ಯ ಅಭಿವೃದ್ದಿ ನಿಗಮದಲ್ಲಿ ಹೊರ ಗುತ್ತಿಗೆ ನೌಕರನಾಗಿದ್ದ. ಬಳಿಕ ಕಚೇರಿ ಸಹಾಯಕನಾಗಿಯೂ ಕೆಲಸ ಮಾಡಿದ್ದಾನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬಂಡಿ ಗ್ರಾಮದ ಕಳಕಪ್ಪ ನಿಡಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವೇಳೆ ಆದಾಯ ಮೀರಿ ಆಕ್ರಮ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ಪತ್ತೆಯಾಗಿವೆ.
ಇನ್ನೂ ಈ ಕಳಕಪ್ಪ ನಿಡಗುಂದಿ ಬಳಿ ನಾಲ್ಕು ವಾಹನಗಳಿವೆ. 350 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. 1.5 ಕೆಜಿ ಬೆಳ್ಳಿ ಆಭರಣಗಳು ಕೂಡ ಪತ್ತೆಯಾಗಿವೆ. ಇವೆಲ್ಲಾವನ್ನೂ ಈಗ ಲೋಕಾಯುಕ್ತ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ. ತನ್ನ ಹೆಂಡತಿ, ಸೋದರನ ಹೆಸರಿನಲ್ಲಿ ಕಳಕಪ್ಪ ನಿಡಗುಂದಿ ಆಸ್ತಿಪಾಸ್ತಿ ಖರೀದಿಸಿದ್ದಾನೆ. ಆಸ್ತಿ ಖರೀದಿಯ ದಾಖಲೆ ಪತ್ರಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಕಳಕಪ್ಪ ನಿಡಗುಂದಿಯು ಕೆಆರ್‌ಐಡಿಎಲ್ ನಿವೃತ್ತ ಇಂಜಿನಿಯರ್ ಚಿಂಚೋಳಕರ್ ಜೊತೆ ಸೇರಿ ಕೆಆರ್‌ಐಡಿಎಲ್‌ನ 96 ಪೂರ್ಣವಾಗದ ಪ್ರಾಜೆಕ್ಟ್ ಗಳ 72 ಕೋಟಿ ರೂಪಾಯಿ ಹಣವನ್ನು ಬೇರೆಡೆಗೆ ವರ್ಗಾಯಿಸಿದ ಆರೋಪ ಇದೆ. ಕೆಆರ್‌ಐಡಿಎಲ್ ನಲ್ಲಿ ಭಾರಿ ಭ್ರಷ್ಟಾಚಾರ ನಡೆಸಿ 100 ಕೋಟಿ ರೂಪಾಯಿ ಆಸ್ತಿಪಾಸ್ತಿಯನ್ನು ಕ್ಲರ್ಕ್ ಕಳಕಪ್ಪ ನಿಡಗುಂದಿ ಸಂಪಾದಿಸಿಕೊಂಡಿದ್ದಾನೆ. ಕೆಆರ್‌ಐಡಿಎಲ್ ನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ 96 ಪೂರ್ಣವಾಗದ ಯೋಜನೆಗಳ ಹಣವನ್ನ ಕಬಳಿಸಿದ್ದಾನೆ. ಈ ಬಗ್ಗೆಯೂ ಕೆಆರ್‌ಐಡಿಎಲ್ ಉನ್ನತಾಧಿಕಾರಿಗಳು ತನಿಖೆ ನಡೆಸಬೇಕಾಗಿದೆ.
ಕೆಆರ್‌ಐಡಿಎಲ್ ಕಳಕಪ್ಪ ನಿಡಗುಂದಿಯ ಪಾಲಿಗೆ ಬೇಡಿದ್ದನ್ನು ಕೊಡುವ ಕಾಮಧೇನು, ಕಲ್ಪವೃಕ್ಷ ಆಗಿತ್ತು. ಈ ಕಳಕಪ್ಪ ಕೆಆರ್‌ಐಡಿಎಲ್ ಗೆ ಸಾಮಾನ್ಯ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿದ್ದ. ಬಳಿಕ ಕ್ಲರ್ಕ್ ಕೆಲಸವನ್ನು ಮಾಡುತ್ತಿದ್ದ. ಆದರೇ ಕೆಆರ್‌ಐಡಿಎಲ್ ನಲ್ಲಿ ಹಣವನ್ನ ಗ್ರಾಮೀಣಾ ಭಾಗದ ಮೂಲಸೌಕರ್ಯ ಯೋಜನೆಗಳಿಗೆ ಬಿಡುಗಡೆ ಮಾಡದೇ, ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡೇ ಕೋಟಿಗಟ್ಟಲೇ ಆಸ್ತಿಯನ್ನು ಸಂಪಾದಿಸಿಕೊಂಡಿದ್ದಾನೆ. ಈಗ ಕೊನೆಗೂ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾನೆ.