/newsfirstlive-kannada/media/media_files/2025/08/03/hc_mahadevappa-2025-08-03-23-02-54.jpg)
ಮಂಡ್ಯ: ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಜಲಾಶಯ, ಕನ್ನಂಬಾಡಿ ಕಟ್ಟುವುದಕ್ಕೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಅವರು ಹೇಳಿದ್ದರು. ಈ ಸಂಬಂಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ದಾಖಲೆಗಳ ಸಮೇತ ಸಚಿವ ಹೆಚ್.ಸಿ ಮಹದೇವಪ್ಪ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಅವರು ತಾವು ನೀಡಿರುವ ಹೇಳಿಕೆ ಕುರಿತು ಎಕ್ಸ್ ಎಕೌಂಟ್ನಲ್ಲಿ ದಾಖಲೆಗಳ ಸಮೇತ ಸ್ಪಷ್ಟನೆ ಕೊಟ್ಟಿದ್ದಾರೆ. ಟಿಪ್ಪು ಸುಲ್ತಾನ್ಗೆ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ಕಟ್ಟುವ ಆಲೋಚನೆ ಇತ್ತು. ಡ್ಯಾಂಗಾಗಿ ಅವರು ಕೆಲಸ ಮಾಡಿದ್ದರು ಎನ್ನುವುದಕ್ಕೆ ಈಗಲೂ ಕೃಷ್ಣ ರಾಜ ಸಾಗರ ಜಲಾಶಯದಲ್ಲಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಅವರು ಅಡಿಗಲ್ಲು ಹಾಕಿದ್ದು ಎನ್ನುವುದಕ್ಕೆ ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಸಾಕ್ಷಿ ಕಾಣಬಹುದು. ದಯಮಾಡಿ ನಮ್ಮ ಬಂಧುಗಳು ಅದನ್ನು ಗಮನಿಸಲು ಕೋರುತ್ತೇನೆ. ಇದೇ ವೇಳೆ ತಮ್ಮ ಟ್ವೀಟರ್ನಲ್ಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರಿಗೂ ಈ ಅಡಿಗಲ್ಲಿನ ಫೋಟೋವನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:KRS ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್- ಸಚಿವ ಹೆಚ್.ಸಿ. ಮಹದೇವಪ್ಪ
ಸಚಿವ ಹೆಚ್.ಸಿ ಮಹದೇವಪ್ಪ ಎಲ್ಲಿ, ಏನು ಹೇಳಿದ್ದರು?
ಶ್ರೀರಂಗಪಟ್ಟಣದಲ್ಲಿ ಇವತ್ತು ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಚಿವ ಹೆಚ್.ಸಿ ಮಹದೇವಪ್ಪ ಅವರು ಉದ್ಘಾಟಿಸಿದ್ದರು. ಇದೇ ವೇಳೆ ಮಾತನಾಡಿದ್ದ ಅವರು, ಕನ್ನಂಬಾಡಿ ಕಟ್ಟೋದಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು. ಆದರೆ, ಈಗ ಅದನ್ನು ಹೇಳಲು ಯಾರಿಗೂ ಧೈರ್ಯ ಇಲ್ಲ. ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ಕಾಣಬಹುದು ಎಂದು ಹೇಳಿದ್ದರು.
ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಟಿಪ್ಪು ಮಸೀದಿ ಇದೆ, ಪಕ್ಕದಲ್ಲಿ ದೇವಸ್ಥಾನ ಇದೆ. ಈಕಡೆ ಅಲ್ಲವೋ ಅಕ್ಬರ್ ಅಂತಾರೆ, ಆಕಡೆ ಗಂಟೆ ಟಣ್, ಟಣ್ ಅನ್ನುತ್ತೆ. ಎರಡನ್ನು ಕೇಳುತ್ತಿದ್ದರು ಅವರು. ದೇವದಾಸಿ ಪದ್ಧತಿಯನ್ನು ರದ್ದು ಮಾಡಿದ್ದರು. ಶೋಷಿತ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ದೂಡಲಾಗುತ್ತಿತ್ತು. ಆ ಕಾಲದಲ್ಲೇ ದೇವದಾಸಿ ಪದ್ಧತಿ ರದ್ದು ಮಾಡಿದ್ದು ಟಿಪ್ಪು ಸುಲ್ತಾನ್ ಎಂದು ಹೇಳಿದ್ದರು.
ಮಾನ್ಯ @CTRavi_BJP ಅವರೇ
— Dr H C Mahadevappa(Buddha Basava Ambedkar Parivar) (@CMahadevappa) August 3, 2025
ಈ ವಿವರಣೆಯು ಈಗಲೂ KRS ನಲ್ಲೇ ಇದೆ.
ಸುಮ್ಮನೇ ಧರ್ಮದ ಕಾರಣಕ್ಕಾಗಿ ರಾಜಕೀಯ ಮಾಡುವ ಬದಲು ಕನ್ನಡವನ್ನು ಓದುವುದನ್ನು ಕಲಿಯಿರಿ ಮತ್ತು ಪದಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಿರಿ https://t.co/8tMALUy6Q6pic.twitter.com/vPAXmNr81d
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ