/newsfirstlive-kannada/media/media_files/2025/08/14/devil-cinema-of-darshan-022-2025-08-14-14-30-46.jpg)
ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಪೋಸ್ಟರ್
ನಟ ದರ್ಶನ್ ಅಭಿಮಾನಿಗಳ ಪಾಲಿಗೆ ಡಿ ಬಾಸ್ ಎಂದೇ ಖ್ಯಾತಿ. ಅಭಿಮಾನಿಗಳ ಅಚ್ಚುಮೆಚ್ಚಿನ ನಟ. ಕರ್ನಾಟಕದಾದ್ಯಂತ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿರುವವರು ನಟ ದರ್ಶನ್. ಅನೇಕ ಹಿಟ್ ಸಿನಿಮಾಗಳನ್ನು ನಟ ದರ್ಶನ್ ನೀಡಿದ್ದಾರೆ. ಮಾಸ್ ಸಿನಿಮಾಗಳ ಮೂಲಕ ಮಾಸ್ ಫ್ಯಾನ್ ಫಾಲೋಯಿಂಗ್ ಅನ್ನು ನಟ ದರ್ಶನ್ ಹೊಂದಿದ್ದಾರೆ. ಕರ್ನಾಟಕದ ತುತ್ತು ತುದಿಯ ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗೂ ನಟ ದರ್ಶನ್ ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಯಾವಾಗಲೂ ಕರ್ನಾಟಕದಲ್ಲಿ ನಟ ದರ್ಶನ್ ಹಾಗೂ ಉಳಿದ ಸ್ಟಾರ್ ನಟರ ಫ್ಯಾನ್ ಗಳ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ನಡೆಯುತ್ತಲೇ ಇರುತ್ತೆ. ಕೆಲವೆಡೆ ಬೀದಿ ರಂಪಾಟವೂ ನಡೆದಿದೆ.
ನಟ ದರ್ಶನ್ ಜೈಲಿಗೆ ಹೋಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ತನ್ನ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಕೇಸ್ ನಲ್ಲಿ ಜೈಲು ಪಾಲಾಗಿದ್ದರು. 2011ರ ಫೆಬ್ರವರಿ 9 ರಂದು ಹೆಂಡತಿ ವಿಜಯಲಕ್ಷ್ಮಿ , ತನ್ನ ಗಂಡ ದರ್ಶನ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬೆಂಗಳೂರಿನ ವಿಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕೇಸ್ ನಲ್ಲಿ ಪೊಲೀಸರು ಬಂಧಿಸಿ ನಟ ದರ್ಶನ್ ರನ್ನು ಜೈಲಿಗೆ ಕಳಿಸಿದ್ದರು.
ನಟ ದರ್ಶನ್ ಈ ಹಿಂದೆ ತನ್ನ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಕೇಸ್ ನಲ್ಲಿ ಜೈಲಿಗೆ ಹೋದಾಗಲೂ ನಟ ದರ್ಶನ್ ಸಿನಿಮಾ ಸಾರಥಿ ರೀಲೀಸ್ ಆಗಿತ್ತು. ನಟ ದರ್ಶನ್ ಜೈಲಿನಲ್ಲಿದ್ದಾಗಲೂ ಅಭಿಮಾನಿಗಳ ಸಾರಥಿ ಸಿನಿಮಾವನ್ನು ಕ್ಲಿಕ್ ಮಾಡಿದ್ದರು. ಸಾರಥಿ ಸಿನಿಮಾ ಕನ್ನಡ ಸಿನಿರಂಗದಲ್ಲಿ ಹಿಟ್ ಸಿನಿಮಾ ಆಗಿತ್ತು. ಅದು ನಟ ದರ್ಶನ್ ಗೆ ಸಿನಿಮಾ ರಂಗದಲ್ಲಿ ಮರು ಜನ್ಮ ನೀಡಲು ಕಾರಣವಾದ ಸಿನಿಮಾ.
ಹೆಂಡತಿ ವಿಜಯಲಕ್ಷ್ಮಿಗೆ ಹೊಡೆದು ನಟ ದರ್ಶನ್ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲು ಸೇರಿದ್ದರು. ಆಗ ನಟ ದರ್ಶನ್ ಜೊತೆಗೆ ಸೆಲ್ ಹಂಚಿಕೊಂಡಿದ್ದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶ್. ಜೈಲಿನ ಸೆಲ್ ನಲ್ಲಿ ತನ್ನ ಸಿನಿಮಾ ಏನಾಗುತ್ತೋ ಏನೋ ಎಂಬ ಚಿಂತೆಯಲ್ಲಿದ್ದ ನಟ ದರ್ಶನ್ ಗೆ ಧೈರ್ಯ ತುಂಬಿದ್ದು ಕಟ್ಟಾ ಜಗದೀಶ್. ಸಾರಥಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುತ್ತೆ. ಸಿನಿಮಾ ಹಿಟ್ ಆಗುತ್ತೆ. ಚಿಂತೆ ಮಾಡಬೇಡ, ಧೈರ್ಯವಾಗಿರು ಎಂದು ಕಟ್ಟಾ ಜಗದೀಶ್ , ನಟ ದರ್ಶನ್ ಗೆ ಹೇಳಿದ್ದರಂತೆ. ಅದರಂತೆ ಸಾರಥಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿತ್ತು. ಸಿನಿಮಾ ಹಿಟ್ ಆಗಿತ್ತು. ದರ್ಶನ್ ಸೆಲೆಬ್ರಿಟಿ ಅಭಿಮಾನಿಗಳು ದರ್ಶನ್ ಕೈ ಬಿಟ್ಟಿರಲಿಲ್ಲ. ಕರ್ನಾಟಕದ ಮಾಸ್ ಸಿನಿಮಾ ಫ್ಯಾನ್ ಗಳು ಸಿನಿಮಾವನ್ನು ಗೆಲ್ಲಿಸಿದ್ದರು. ಸಾರಥಿ ಸಿನಿಮಾ ಕ್ಲಾಸ್ ಅಲ್ಲ, ಮಾಸ್ ಸಿನಿಮಾ. ಹೀಗಾಗಿ ಮಾಸ್ ಸಿನಿಮಾಗಳ ಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸಿದ್ದರು.
ಅಂದು ಸಾರಥಿ, ಇಂದು ಡೆವಿಲ್ ಸಿನಿಮಾ
ಈಗ ನಟ ದರ್ಶನ್ ಮತ್ತೆ ಜೈಲು ಪಾಲಾಗುತ್ತಿದ್ದಾರೆ. ಈ ಭಾರಿ ದರ್ಶನ್ ಜೈಲು ಸೇರುವುದಕ್ಕೂ ಮುನ್ನ ಡೆವಿಲ್ ಸಿನಿಮಾ ಶೂಟಿಂಗ್ ಮುಗಿದಿದೆ. ಬೇಲ್ ಮೇಲೆ ಹೊರ ಬಂದ ಬಳಿಕ ಸಿನಿಮಾ ಶೂಟಿಂಗ್ ಅನ್ನು ದರ್ಶನ್ ಮಾಡಿ ಮುಗಿಸಿದ್ದಾರೆ. ಕರ್ನಾಟಕದ ವಿವಿಧೆಡೆ, ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲೂ ಡೆವಿಲ್ ಸಿನಿಮಾ ಶೂಟಿಂಗ್ ಅನ್ನು ದರ್ಶನ್ ಮಾಡಿದ್ದಾರೆ. ಮಿಲನ ಪ್ರಕಾಶ್ ಈ ಡೆವಿಲ್ ಸಿನಿಮಾದ ನಿರ್ಮಾಪಕರು. ಡೆವಿಲ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ. ಇವುಗಳೆಲ್ಲಾ ಮುಗಿದ ಬಳಿಕ ಡೆವಿಲ್ ಸಿನಿಮಾ ರೀಲೀಸ್ ಆಗಬಹುದು. ನಾಳೆ( ಆಗಸ್ಟ್ 15) ಡೆವಿಲ್ ಸಿನಿಮಾದ ಇದ್ದರೇ, ನೆಮ್ಮದಿಯಾಗಿರಬೇಕು ಅನ್ನೋ ಹಾಡು ಬಿಡುಗಡೆಯಾಗುತ್ತಿದೆ.
ಈ ಭಾರಿ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲುನಲ್ಲಿರುವಾಗ ಡೆವಿಲ್ ಸಿನಿಮಾ ರೀಲೀಸ್ ಮಾಡುತ್ತಾರಂತೆ. ಹೀಗಾಗಿ ಈ ಭಾರಿ ಜೈಲು ಸೇರಿದಾಗ ಡೆವಿಲ್ ಸಿನಿಮಾ ಹಿಟ್ ಆಗುತ್ತೋ ಇಲ್ಲವೋ ಎಂಬ ಕುತೂಹಲ ರಾಜ್ಯದ ಜನರಲ್ಲಿದೆ. ಕರ್ನಾಟಕದ ಉದ್ದಗಲಕ್ಕೂ ನಟ ದರ್ಶನ್ ಫ್ಯಾನ್ ಫಾಲೋಯಿಂಗ್ ಇರೋದರಿಂದ ಡೆವಿಲ್ ಸಿನಿಮಾ ಹಿಟ್ ಆಗುತ್ತೆ ಎಂಬ ನಿರೀಕ್ಷೆಯಲ್ಲಿ ದರ್ಶನ್ ಅಭಿಮಾನಿಗಳು ಇದ್ದಾರೆ.
ಇನ್ನೂ ಎರಡು ಸಿನಿಮಾಗಳ ಶೂಟಿಂಗ್ ಬಗ್ಗೆ ದರ್ಶನ್ ಪ್ಲ್ಯಾನ್ ಮಾಡಿದ್ದಾರಂತೆ. ಆದರೇ, ಸಿನಿಮಾಗಳ ಶೂಟಿಂಗ್ ಆರಂಭ ಮಾಡಿರಲಿಲ್ಲ. ಎರಡು ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದರು.
ಕೆವಿಎನ್ ಪ್ರೊಡಕ್ಷನ್ ನಲ್ಲಿ ಡಿ 58 ಸಿನಿಮಾ ಬಗ್ಗೆ ಚರ್ಚೆ ನಡೆದಿದೆ. ನಿರ್ದೇಶಕ ಪ್ರೇಮ್ ಈ ಸಿನಿಮಾ ನಿರ್ದೇಶನ ಮಾಡುವ ಪ್ಲ್ಯಾನ್ ಆಗಿತ್ತು.
ಡಿ 59 ಸಿನಿಮಾನವನ್ನು ತರುಣ್ ಸುಧೀರ್ ನಿರ್ದೇಶನ ಮಾಡುವ ಪ್ಲ್ಯಾನ್ ಕೂಡ ಆಗಿತ್ತು.
ಆದರೇ, ಈಗ ಜಾಮೀನು ರದ್ದಾದ ಕಾರಣದಿಂದ ನಟ ದರ್ಶನ್ ಮತ್ತೊಮ್ಮೆ ಜೈಲು ಪಾಲಾಗುತ್ತಿದ್ದಾರೆ. ಹೀಗಾಗಿ ದರ್ಶನ್ ಗಾಗಿ ಪ್ಲ್ಯಾನ್ ಮಾಡಿದ ಸಿನಿಮಾಗಳು ಮುಂದಿನ ಆರು ತಿಂಗಳವರೆಗೂ ಕಥೆಯ ರೂಪದಲ್ಲಷ್ಟೇ ಇರಬೇಕು. ಸಿನಿಮಾ ಶೂಟಿಂಗ್ ಮಾಡಲಾಗಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.