/newsfirstlive-kannada/media/media_files/2025/08/02/artificial-inteligence01-2025-08-02-15-29-30.jpg)
ಇದು ಡಿಜಿಟಲ್ ಜಗತ್ತು. ಸೋಷಿಯಲ್​​ ಮೀಡಿಯಾ, ಇಮೇಲ್, ಇಂಟರ್ನೆಟ್ ಹುಡುಕಾಟ, ಸ್ಮಾರ್ಟ್ ಗ್ಯಾಜೆಟ್, ಪ್ರಯಾಣ, ಬ್ಯಾಂಕಿಂಗ್, ಮನರಂಜನೆ, ಶಾಪಿಂಗ್, ಸಂವಹನ ಯಾವುದೇ ಕ್ಷೇತ್ರವಾಗಲಿ ಎಲ್ಲವೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ಡಿಪೆಂಡ್​​ ಆಗಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೂಡ ಈ ಎಲ್ಲಾ ಕ್ಷೇತ್ರಗಳಿಗೆ ಎಂಟ್ರಿ ನೀಡಿದೆ.
ಇನ್ನು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​ನಲ್ಲಿ ಪರಿಣಿತಿ ಹೊಂದಿದವರಿಗೆ ಅಪಾರ ಉದ್ಯೋಗ ಅವಕಾಶಗಳು ಇವೆ. ಅತ್ಯಂತ ವೇಗವಾಗಿ ಬೆಳೆಯುತ್ತಿರೋ ಕೃತಕ ಬುದ್ಧಿಮತ್ತೆಯಲ್ಲೇ ಈಗ ಸರ್ಟಿಫಿಕೇಟ್​ ಕೋರ್ಸ್​ ಮಾಡಬಹುದಾಗಿದೆ.
AI ಈಗ ಎಲ್ಲಾ ಕ್ಷೇತ್ರಗಳ ಅವಿಭಾಜ್ಯ ಅಂಗ. ಹಾಗೇ ಇದರಲ್ಲಿ ವೃತ್ತಿ ಅವಕಾಶಗಳು ಹೆಚ್ಚಿರೋ ಕಾರಣ Artificial Intelligence ಕಲಿಯುವ ಪ್ರವೃತ್ತಿ ಕೂಡ ಹೆಚ್ಚುತ್ತಿದೆ. ಇದೇ ನಿಟ್ಟಿನಲ್ಲಿ ಆಕಾಂಕ್ಷಿಗಳಿಗೆ ನೆರವಾಗುವ ದೃಷ್ಟಿಯಿಂದ ಶಿಕ್ಷಣ ಸಚಿವಾಲಯ ಕೃತಕ ಬುದ್ಧಿಮತ್ತೆಯಲ್ಲಿ ಹಲವಾರು ಉಚಿತ ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಈ ಕೋರ್ಸ್​ ಕಲಿಯೋಕೆ ಒಂದು ರೂಪಾಯಿಯನ್ನೂ ಪಾವತಿಸಬೇಕಾಗಿಲ್ಲ.ಇನ್ನೂ ಈ ಕೋರ್ಸ್‌ಗಳು ಶಿಕ್ಷಣ ಸಚಿವಾಲಯದ SWAYAM ಪೋರ್ಟಲ್‌ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವೃತ್ತಿಪರರು ಈ ಕೋರ್ಸ್‌ಗಳನ್ನು ಕಲಿಯಬಹುದು.
ಈ ಬಗ್ಗೆ ಕಂಪ್ಲೀಟ್​ ಡೀಟೈಲ್ಸ್​ ಹೀಗಿದೆ ನೋಡಿ..!
ಪೈಥಾನ್ ಬಳಸಿಕೊಂಡು AI/ML ಕೋರ್ಸ್​ ಕಲಿಯೋದು. ಈ ಕೋರ್ಸ್ ಕಲಿಯೋರು ಪೈಥಾನ್ ಅನ್ನು ಪ್ರೋಗ್ರಾಮಿಂಗ್ ಭಾಷೆಯಾಗಿ ಬಳಸಿ ಎಐ ಮತ್ತು ಮಿಷನ್​ ಲರ್ನಿಂಗ್​ ಕಲಿಯಬಹುದು.
ಮತ್ತೊಂದು ಕೋರ್ಸ್​ AI ಜೊತೆ ಕ್ರಿಕೆಟ್ ವಿಶ್ಲೇಷಣೆ.. ಕ್ರಿಕೆಟ್‌ನಲ್ಲಿ ಡೇಟಾ ವಿಜ್ಞಾನವನ್ನು ಹೇಗೆ ಬಳಸಲಾಗುತ್ತದೆ ಎಂದು ಈ ಕೋರ್ಸ್​ನಲ್ಲಿ ಕಲಿಯಬಹುದು. ಡೇಟಾ ಸಂಗ್ರಹಣೆ, ಸಿದ್ಧತೆ, ಸ್ಟ್ರೈಕ್ ರೇಟ್ ಮತ್ತು BASRA ಸೂಚ್ಯಂಕದಂತಹ ಕಾರ್ಯಕ್ಷಮತೆ ಬಗ್ಗೆ ಕಲಿಯೋದು ಇದರ ಮುಖ್ಯ ಉದ್ದೇಶ.
ಶಿಕ್ಷಕರಿಗಾಗಿ ಒಂದು ಎಐ ಕೋರ್ಸ್​ ಡಿಸೈನ್​ ಮಾಡಲಾಗಿದೆ. ಬೋಧನೆ, ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯಲ್ಲಿ AI ಅನ್ನು ಹೇಗೆ ಬಳಸಬಹುದು ಎಂದು ಈ ಕೋರ್ಸ್​ನಲ್ಲಿ ಹೇಳಿಕೊಡಲಾಗುತ್ತದೆ.
ಇನ್ನೂ ಭೌತಶಾಸ್ತ್ರದಲ್ಲಿ AI ಮತ್ತು ರಸಾಯನಶಾಸ್ತ್ರದಲ್ಲಿ AI ಹಾಗೂ ಲೆಕ್ಕಪತ್ರ ನಿರ್ವಹಣೆಯಲ್ಲಿ AI ಅನ್ನೋ ಕೋರ್ಸ್​ಗಳನ್ನು ಶುರು ಮಾಡಲಾಗಿದೆ. ಪದವಿಪೂರ್ವ ವಿಜ್ಞಾನ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಈ ಕೋರ್ಸ್​ಗಳನ್ನು ಶುರು ಮಾಡಿದ್ದು, ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಎಐ ಹೇಗೆ ಪರಿಣಾಮಕಾರಿ ಬಳಸಬಹುದು ಎಂದು ಟ್ರೈನಿಂಗ್​ ನೀಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us