/newsfirstlive-kannada/media/media_files/2025/08/02/jagadeesh_spp-2025-08-02-17-39-46.jpg)
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್ ಜಗದೀಶ್ ಅವರು ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸ್ಪೆಷಲ್ ಪ್ರಾಸಿಕ್ಯೂಟರ್ ಬಿ.ಎನ್ ಜಗದೀಶ್ ಅವರು, ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವನ ಪರ್ಯಾಂತ ಜೈಲಿನಲ್ಲೇ ಇರುವಂತ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಮುಂದೆ ನಮ್ಮ ವಾದ ಒಬ್ಬ ಅಮಾಯಕ ಮಹಿಳೆಯ ಮೇಲೆ ಒಬ್ಬ ಪ್ರಬಲ ವ್ಯಕ್ತಿ ಮಾಡಿದ ಕೃತ್ಯದ ಬಗ್ಗೆ ಮನವಿ ಮಾಡಿಕೊಂಡಿದ್ದೇವು. ಈ ಬಗ್ಗೆ ವಿವರವಾದ ವರದಿ ಕೋರ್ಟ್ಗೆ ಸಲ್ಲಿಕೆ ಮಾಡಿದೇವು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಶಿಕ್ಷೆ ಜೊತೆಗೆ ಎಷ್ಟು ಲಕ್ಷ ರೂಪಾಯಿ ದಂಡ ಕಟ್ಟಬೇಕು.. ಮುಂದಿನ ಕಾನೂನು ಹೋರಾಟಗಳೇನು?
ಕೋರ್ಟ್ನಲ್ಲಿ ವಾದ ಮಾಡುವಾಗ ಪ್ರಜ್ವಲ್ ರೇವಣ್ಣ ಕಡೆಯವರು ಮಹಿಳೆ ಸಂಸಾರ ಹೊಂದಿದ್ದಾರೆ. ಎಲ್ಲ ಚೆನ್ನಾಗಿದ್ದಾರೆ ಎಂದು ಅವರು ವಾದ ಮಂಡಿಸಿರುವುದು ಸರಿ ಎನಿಸಲಿಲ್ಲ. ಇದು ದುರದೃಷ್ಟಕರ ವಾದ ಆಗಿದೆ. ಇಲ್ಲಿ ಮಹಿಳೆಯನ್ನು ಕೇವಲವಾಗಿ ನೋಡಬಾರದಿತ್ತು. ಈ ಕೃತ್ಯವನ್ನು ನಾವು ಕೇವಲವಾಗಿ ನೋಡಲ್ಲ. ಮಹಿಳೆಗೆ ಆಗಿರುವಂತ ಅನ್ಯಾಯ, ಹಿಂಸೆ, ಅವಮಾನ ಅವರಿಗೆ ಗೊತ್ತಿರುತ್ತದೆ ಎಂದು ಹೇಳಿದ್ದಾರೆ.
ಸದ್ಯ ಕೋರ್ಟ್ ನೀಡಿರುವ ಶಿಕ್ಷೆಯಂತೆ ಜೀವನ ಪರ್ಯಾಂತ ಜೈಲಿನಲ್ಲೇ ಇರಬೇಕು. 376 (2) ಎನ್ ಪ್ರಕಾರ ಪೂರ್ಣ ಜೀವವಾಧಿ ಶಿಕ್ಷೆ ಅಂದರೆ (14 ವರ್ಷ ಅಲ್ಲ) ಸಾಯುವವರೆಗೂ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಇರಬೇಕು ಎಂದು ಹೇಳಿದ್ದಾರೆ. ಸಂಪೂರ್ಣ ಜೀವನದ ಉದ್ದಕ್ಕೂ ಜೈಲಿನಲ್ಲೇ ಇರಬೇಕು. ಎಲ್ಲ ಕಾಲಂಗಳು ಪ್ರತ್ಯೇಕ, ಪ್ರತ್ಯೇಕ ಶಿಕ್ಷೆ, ದಂಡ ವಿಧಿಸಿದೆ. ಒಟ್ಟು 11 ಲಕ್ಷದ 50 ಸಾವಿರ ರೂಪಾಯಿಗಳನ್ನ ದಂಡ ಹಾಕಲಾಗಿದೆ. ಇಷ್ಟೊಂದು ಮೊತ್ತವನ್ನು ಪ್ರಜ್ವಲ್ ರೇವಣ್ಣ ಅವರು ಕಟ್ಟಬೇಕು. ಇದರಲ್ಲಿ ಸಂತ್ರಸ್ತೆಗೆ ಹಣ ನೀಡಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ