/newsfirstlive-kannada/media/media_files/2025/09/15/gwalior-nandini-murder-case-2025-09-15-14-47-39.jpg)
ಲೀವ್ ಇನ್ ಪಾರ್ಟನರ್ ನಂದಿನಿ ಕೊಂದ ಅರವಿಂದ್ !
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಅರವಿಂದ್ ಎಂಬ ಯುವಕ ಹಾಡಹಗಲೇ ತನ್ನ ಲಿವ್-ಇನ್ ಸಂಗಾತಿ ನಂದಿನಿಯನ್ನು ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾನೆ. ಇದು ಗ್ವಾಲಿಯರ್ ನಗರವನ್ನು ಬೆಚ್ಚಿಬೀಳಿಸಿದೆ .ಆರೋಪಿ ನಾಲ್ಕರಿಂದ ಐದು ಗುಂಡುಗಳನ್ನು ಹಾರಿಸಿದ್ದಾನೆ. ರೂಪ್ ಸಿಂಗ್ ಕ್ರೀಡಾಂಗಣದ ಮುಂದೆ ಈ ಘಟನೆ ನಡೆದಿದ್ದು, ಆರೋಪಿ ಅರವಿಂದ್ ತನ್ನ ಗೆಳತಿ ನಂದಿನಿಯನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಪಿಸ್ತೂಲ್ ಹೊರತೆಗೆದು ಆಕೆಯ ಮುಖಕ್ಕೆ ಹಲವಾರು ಗುಂಡು ಹಾರಿಸಿದ್ದಾನೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ದೃಶ್ಯ ಭಯಾನಕವಾಗಿತ್ತು. ಅತ್ಯಂತ ಹತ್ತಿರದಿಂದ ಮೂರು ಗುಂಡು ಹಾರಿಸಿದ ನಂತರ, ಅರವಿಂದ್ ರಕ್ತಸಿಕ್ತ ದೇಹದ ಪಕ್ಕದಲ್ಲಿ ಶಾಂತವಾಗಿ ಕುಳಿತು, ತನ್ನ ಬಂದೂಕನ್ನು ತೋರಿಸಿ ತನ್ನ ಹತ್ತಿರ ಬಂದ ಯಾರನ್ನಾದರೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಹಾಗಾಗಿ ಆ ಪ್ರದೇಶದಲ್ಲಿ ಭೀತಿ ಹರಡಿ, ದಾರಿಹೋಕರು ಹೆದರಿಕೆಯಿಂದ ಓಡಿಹೋಗಿದ್ದಾರೆ . ವಾಹನ ಸಂಚಾರ ಸಹ ಸ್ಥಗಿತಗೊಂಡಿದೆ. ಸದಾ ಜನರಿಂದ ಗಿಜಿಗುಡುವ ಪ್ರದೇಶದ ಕ್ಷಣಾರ್ಧದಲ್ಲಿ ನಿರ್ಜನ ಪ್ರದೇಶವಾಗಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲೇ ಪರಿಸ್ಥಿತಿ ಹದಗೆಟ್ಟಿದೆ. ಅರವಿಂದ್ ಪೊಲೀಸರತ್ತ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ, ಪೋಲಿಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಪ್ರದೇಶವನ್ನು ಸುತ್ತುವರೆದಿದ್ದಾರೆ. ಉದ್ವಿಗ್ನ ಘರ್ಷಣೆಯ ನಂತರ, ಪೊಲೀಸರು ಆರೋಪಿಯನ್ನು ಹಿಡಿದು, ಥಳಿಸಿ ಬಂಧಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದ್ದ ನಂದಿನಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿ ನಂದಿನಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊಲೆ ಆರೋಪಿ ಅರವಿಂದ್ ಮತ್ತು ಹತ್ಯೆಯಾದ ನಂದಿನಿ
ನಂದಿನಿ, ಧಾಟಿಯ ಪ್ರದೇಶದ ನಿವಾಸಿಯಾಗಿದ್ದು, ಅವರಿಗೆ ಒಂದು ಮಗುವೂ ಇದೆ ಎಂದು ಎಸ್‌ಎಸ್‌ಪಿ ಧರ್ಮವೀರ್ ಸಿಂಗ್ ಹೇಳಿದ್ದಾರೆ. ಅವರು ಈಗಾಗಲೇ ವಿವಾಹವಾಗಿದ್ದರು. 2022 ರಲ್ಲಿ ಅರವಿಂದ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದು ಇಬ್ಬರೂ ಸುಮಾರು ಮೂರು ವರ್ಷಗಳಿಂದ ವಿಚ್ಛೇದನವಿಲ್ಲದೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು.
ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಇಬ್ಬರ ನಡುವಿನ ವೈಮನಸ್ಸು ಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿವಾಹಿತನಾಗಿದ್ದು, ಅವನಿಗೆ ಇಬ್ಬರು ಮಕ್ಕಳು ಮತ್ತು ಹೆಂಡತಿಯೂ ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.