/newsfirstlive-kannada/media/media_files/2025/09/22/sunkadakatte-rekha-murder-2025-09-22-18-51-39.jpg)
ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ರೇಖಾ ಹತ್ಯೆಗೈದ ಲೋಕೇಶ್
ಅವರಿಬ್ಬರು ಪ್ರೇಮಿಗಳು.. ಪ್ರೀತಿ ಕಡಲಲ್ಲಿ ತೇಲಾಡ್ತಾ.. ಮದುವೆ ಅನ್ನೋ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ರೂ.. ಆದ್ರೆ ಅದೇ ಪ್ರೀತಿ ಪ್ರೇಯಸಿಯ ಇಡೀ ದೇಹವನ್ನ ಛಿದ್ರಗೊಳಿಸಿ ಬಿಟ್ಟಿದೆ.. ಪ್ರೇಮಿ ಬೀಸಿದ ಚಾಕುವಿಗೆ ಅವಳು ಪ್ರಾಣವನ್ನೇ ಬಿಟ್ಟಿದ್ದಾಳೆ.. ಯಾಕೆ ಹೀಗಾಯ್ತು ಅಂದಾಗ ಅಲ್ಲೊಂದು ಬೇರೆಯೇ ಕಥೆ ತೆರೆದುಕೊಂಡಿದೆ..
ಹಾ.. ಕಾಯುವೆ ನಾನು ರೆಪ್ಪೆಯ ಹಾಗೇ ಜನವು ಪೂರ್ತಿ ನಿನ್ನನ್ನೇ ಅಂತ ಕೈ ಕೈ ಹಿಡಿದು ಸುತ್ತಾಡ್ತಾ ಹಾಡ್ತಿದ್ದ ಪ್ರೇಮಿ.. ಪ್ರೇಯಸಿಯ ದೇಹವನ್ನೇ 9 ಬಾರಿ ಚಾಕುವಿನಿಂದ ಸೀಳಿ ಕೊಂದೇ ಬಿಟ್ಟಿದ್ದಾನೆ.. ಇವಳೇ ಆ ನತದೃಷ್ಟೇ..
ಹೆಸರು ರೇಖಾ.. ವಯಸ್ಸು 35.. ಮೂಲತಃ ತುಮಕೂರು ಜಿಲ್ಲೆಯ ಶಿರಾ ನಿವಾಸಿ.. ಇವತ್ತು ತನ್ನ ಹನ್ನೆರಡು ವರ್ಷದ ಮಗಳ ಜೊತೆಗೆ ಸುಂಕದ ಕಟ್ಟೆ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಚಾಕು ಹಿಡಿದು ಬಂದ ಪ್ರೇಮಿ ಲೋಕೇಶ್ ಅಲಿಯಾಸ್ ಲೋಹಿತಾಶ್ವ 9 ಬಾರಿ ಚುಚ್ಚಿ ಚುಚ್ಚಿ ಹಲ್ಲೆ ನಡೆಸಿದ್ದಾನೆ.. ಅಷ್ಟಕ್ಕೂ ಹೀಗೆ ಚುಚ್ಚಿ ಸಾಯಿಸೋಕ್ಕೆ ಕಾರಣವಾದ್ರೂ ಏನು ಅನ್ನೋದನ್ನ ನೋಡೋದಾದ್ರೆ?
ಪ್ರೀತಿ ಕೊಂದ ಕೊಲೆಗಾರ
ಮೃತ ರೇಖಾಗೆ ಮೊದಲೇ ಮದುವೆ ಆಗಿ ಮಗಳು ಇದ್ದಾಳೆ
ಕೊಲೆಗಾರ ಲೋಕೇಶ್​ಗೂ ಮದುವೆ ಆಗಿ ಡಿವೋರ್ಸ್​​​
ಹೀಗಿರುವಾಗ ರೇಖಾಗೆ, ಲೋಕೇಶ್​ ಪರಿಚಯ, ಮದುವೆ
ಶಿರಾದಿಂದ ಬೆಂಗಳೂರಿಗೆ ಬಂದು ಕಂಪನಿಯಲ್ಲಿ ಕೆಲಸ
ಪತಿ ಲೋಕೇಶ್​ಗೆ ತನ್ನ ಕಂಪನಿಯಲ್ಲಿ ಕೆಲಸ ಕೊಡಿಸಿದ್ಲು
ರೇಖಾಗೆ ಬೇರೆ ಸಂಬಂಧ ಇದೆ ಅಂತ ಅನುಮಾನ ಇತ್ತು
ಇವತ್ತು ಬೆಳಗ್ಗೆ ಗಲಾಟೆ ಮಾಡಿ, ಚಾಕು ಇರಿದು ಬಿಟ್ಟಿದ್ದಾನೆ
ಅಂದಹಾಗೆ ಮೃತ ರೇಖಾಗೆ ಈಗಾಗ್ಲೇ ಒಂದು ಮದುವೆ ಆಗಿ 12 ವರ್ಷದ ಮಗಳು, ಮತ್ತೊಬ್ಬ ಮಗನಿದ್ದಾನೆ.. ಅತ್ತ ಕೊಲೆಗಾರ ಲೋಕೇಶ್​​ಗೂ ಈಗಾಗ್ಲೇ ಒಂದು ಮದುವೆ ಆಗಿ ಡಿವೋರ್ಸ್​​ ಆಗಿತ್ತಂತೆ.. ಹೀಗಿರುವಾಗ ರೇಖಾಗೆ ಲೋಕೇಶ್​​ ಪರಿಚಯ ಆಗಿ ಇಬ್ಬರೂ ಕೆಲ ತಿಂಗಳ ಹಿಂದೆ ಮದುವೆನೂ ಆಗಿದ್ರು.. ಬಳಿಕ ಶಿರಾದಿಂದ ಬೆಂಗಳೂರಿಗೆ ಬಂದಿದ್ದ ರೇಖಾ, ಖಾಸಗಿ ಕಂಪನಿಯಲ್ಲಿ ಕೆಲ್ಸ ಮಾಡ್ತಾ ಪತಿ ಲೋಕೇಶ್​ಗೂ ಅದೇ ಕಂಪನಿಯಲ್ಲಿ ಡ್ರೈವರ್​​ ಕೆಲ್ಸನೂ ಕೊಡಿಸಿದ್ಲಂತೆ.. ಹೀಗಿರುವಾಗ ಲೋಹಿತಾಶ್ವನಿಗೆ ರೇಖಾ ಮೇಲೆ ಅನುಮಾನ ಬಂದಿತ್ತಂತೆ.. ಈಕೆಗೆ ಇನ್ನೊರ್ವನ ಜೊತೆಗೆ ಸಂಬಂಧ ಇದೆ ಅಂತ ಆಕೆಯನ್ನ ಫಾಲೋ ಮಾಡ್ತಿದ್ದ ಲೋಹಿತಾಶ್ವ, ಇವತ್ತು ಬೆಳಗ್ಗೆ ಬಸ್​ ಸ್ಯಾಂಡ್​ಬಳಿ ಬಂದು ಗಲಾಟೆ ಮಾಡಿ ಚಾಕು ಇರಿದ್ದಾನೆ ಅನ್ನೋ ಮಾಹಿತಿ ಇದೆ.
ಸದ್ಯ ಹಲ್ಲೆಗೊಳಗಾಗಿದ್ದ ರೇಖಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.. ಪ್ರೀತಿ ಕೊಂದ ಕೊಲೆಗಾರ ಲೋಕೇಶ್ ಅಲಿಯಾಸ್ ಲೋಹಿತಾಶ್ವ ಎಸ್ಕೇಪ್​ ಆಗಿದ್ದು, ಪ್ರಕರಣ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ..
ರೇಖಾಳನ್ನು ಈ ಕೊಲೆಗಾರ ಲೋಕೇಶ್ ಅಲಿಯಾಸ್ ಲೋಹಿತಾಶ್ವ ದೇವಾಲಯದಲ್ಲಿ ಮದುವೆ ಕೂಡ ಆಗಿದ್ದ. ಇಬ್ಬರೂ ಸುಂಕದಕಟ್ಟೆ ಬಳಿ ಮನೆ ಮಾಡಿಕೊಂಡು ಜೊತೆಯಾಗಿ ವಾಸ ಮಾಡುತ್ತಿದ್ದರು. ಪ್ರೇಯಸಿ, ತನ್ನ ಬಾಳಿನಲ್ಲಿ ಬಂದರೂ, ಲೋಕೇಶ್ ಗೆ ಸಮಾಧಾನ ಇರಲಿಲ್ಲ. ರೇಖಾ ಮೇಲೆ ಬೇರೆಯವರನ್ನು ಲವ್ ಮಾಡುತ್ತಿರಬಹುದು ಎಂಬ ಅನುಮಾನ ಲೋಕೇಶ್ ಗೆ ಬಂದಿದೆ. ಈ ಅನುಮಾನದಲ್ಲೇ 9 ಭಾರಿ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.