/newsfirstlive-kannada/media/media_files/2025/08/28/tumakuru-suicide-case02-2025-08-28-16-12-58.jpg)
ಪ್ರಿಯಕರ ಚೇತನ್ ನಿಂದ ಮೋಸಹೋಗಿ ಆತ್ಮಹತ್ಯೆಗೆ ಶರಣಾದ ಅಶ್ವಿನಿ
ಪ್ಯಾರಾಮೆಡಿಕಲ್ ಓದಿದ್ದ ಯುವತಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಈಗ ಟ್ವಿಸ್ಟ್ ಸಿಕ್ಕಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿದ್ದನಕಟ್ಟೆ ಗ್ರಾಮದ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆಯ ಆತ್ಮಹತ್ಯೆಯ ಕಾರಣ ವಾಟ್ಸಾಫ್ ಚಾಟ್ ನಿಂದ ಬಹಿರಂಗವಾಗಿದೆ!. ಈಕೆಯ ವಾಟ್ಸಾಫ್ ಚಾಟ್ ನಲ್ಲಿ ಪ್ರೇಮದ ಕಥೆಯೇ ಬಹಿರಂಗವಾಗಿದೆ.
ಪ್ರಿಯಕರನ ಕಿರುಕುಳ ಹಾಗೂ ತನಗೆ ಕೈ ಕೊಟ್ಟು ಮತ್ತೊಬ್ಬ ಯುವತಿಯ ಜೊತೆ ಪ್ರಿಯಕರ ಸಂಬಂಧ ಬೆಳೆಸಿದ್ದೇ ಅಶ್ವಿನಿ ಆತ್ಮಹತ್ಯೆಗೆ ಕಾರಣ ಎಂಬುದು ಬಹಿರಂಗವಾಗಿದೆ.
ಅಶ್ವಿನಿ ಆತ್ಮಹತ್ಯೆ ಕೇಸ್ ಗೆ ವಾಟ್ಸಾಫ್ ಚಾಟ್ ನಿಂದ ಟ್ವಿಸ್ಟ್ ಸಿಕ್ಕಿದೆ. ಯುವತಿಯ ಮೊಬೈಲ್ ನಲ್ಲಿದ್ದ ವಾಟ್ಸಪ್ ನಲ್ಲಿ ಪ್ರೇಮ ಕಥೆಯ ವಿವರ ಇದೆ. ಪ್ರಿಯಕರನ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಪ್ರಾರಂಭದಲ್ಲಿ ಯು.ಡಿ.ಆರ್. ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಾಟ್ಸಾಪ್ ಮೇಸೆಜ್, ಆಡಿಯೋ ಆಧರಿಸಿ ಯುವತಿಯ ಪ್ರಿಯಕರನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಮೃತಳ ಅಶ್ವಿನಿ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಿಯಕರ ಚೇತನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದೇ ಆಗಸ್ಟ್ ತಿಂಗಳ 21 ರಂದು 20 ವರ್ಷದ ಅಶ್ವಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಹೊಟ್ಟೆ ನೋವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪೋಷಕರು ಶಂಕೆ ವ್ಯಕ್ತಪಡಿಸಿದ್ರು. ಈ ಹಿನ್ನಲೆಯಲ್ಲಿ ಚಿಕ್ಕನಾಯಕನಹಳ್ಳಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದರು.
ಮೃತ ಅಶ್ವಿನಿ ಹಾಗೂ ವಾಟ್ಸಾಫ್ ಚಾಟ್
ಆದರೇ, ಯುವತಿಯ ಮೊಬೈಲ್ ನ ವಾಟ್ಸಪ್ ನಲ್ಲಿ ಪ್ರೇಮದ ಕಥೆಯೇ ಇತ್ತು. ಪ್ರಿಯಕರನ ಜೊತೆ ವಾಟ್ಸಪ್ ನಲ್ಲಿ ಅಶ್ವಿನಿ ಚಾಟ್ ಮಾಡಿದ್ದಳು. ಸಿದ್ದನಕಟ್ಟೆ ಪಕ್ಕದ ಆಶ್ರಿಯಾಲ್ ಗ್ರಾಮದ ಚೇತನ್ ಎಂಬಾತನನ್ನ ಎರಡು ವರ್ಷಗಳಿಂದ ಅಶ್ವಿನಿ ಪ್ರೀತಿ ಮಾಡುತ್ತಿದ್ದಳು. ಆದರೇ, ಚೇತನ್ ಗೆ ಮತ್ತೊಬ್ಬ ಯುವತಿ ಜೊತೆ ಪ್ರೀತಿಯ ಸಂಬಂಧ ಇರೋದು ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ
ಚೇತನ್ ಹಾಗೂ ಅಶ್ವಿನಿ ಗಲಾಟೆ ಮಾಡಿಕೊಂಡಿದ್ದರು. ಈ ಬಗ್ಗೆ ಮೊಬೈಲ್ ವಾಟ್ಸಪ್ ನಲ್ಲಿ ಇಬ್ಬರು ಚಾಟ್ ಮಾಡಿದ್ದರು. ಆಡಿಯೋ ಕೂಡಾ ಚೇತನ್ ಗೆ ಕಳುಹಿಸಿದ್ದಳು. ನನಗಾದ ಮೋಸ ಯಾರಿಗೂ ಆಗಬಾರದು ಎಂದು ಅಶ್ವಿನಿ ಮೆಸೇಜ್ ಕಳುಹಿಸಿದ್ದಳು. ನಿನಗೆ ತಕ್ಕ ಪಾಠ ಕಲಿಸೋದಾಗಿ ವಾಟ್ಸಪ್ ನಲ್ಲಿ ಆಡಿಯೋ ಕಳುಹಿಸಿ ಅಶ್ವಿನಿ ಚಾಟ್ ಮಾಡಿದ್ದಳು. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಚೇತನ್ ಗೆ ಸೆಲ್ಫಿ ಪೋಟೋವನ್ನು ಅಶ್ವಿನಿ ಕಳುಹಿಸಿದ್ದಳು. ಸೀರೆಯಲ್ಲಿ ಕೊರಳಿಗೆ ನೇಣುಬಿಗಿದುಕೊಳ್ಳುತ್ತಿರುವ ಸೆಲ್ಫಿ ಪೋಟೋವನ್ನು ಅಶ್ವಿನಿ ಕಳುಹಿಸಿದ್ದಳು.
ಸದ್ಯ ಈ ಆತ್ಮಹತ್ಯೆ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಚಿಕ್ಕನಾಯಕನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ ಅನ್ನು ಅಶ್ವಿನಿ ವ್ಯಾಸಂಗ ಮಾಡಿದ್ದಳು. ತುಮಕೂರಿನ ಸರ್ಕಾರಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಶ್ವಿನಿ, ಸಿದ್ದನಕಟ್ಟೆಯ ಮನೆಯಲ್ಲಿದ್ದಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ