/newsfirstlive-kannada/media/media_files/2025/08/01/lpg-cylinder-price-2025-08-01-11-31-47.jpg)
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮಾತ್ರ 5 ರೂ. ಇಳಿಕೆ
ನಮ್ಮ ದೇಶದಲ್ಲಿ ಪ್ರತಿ ತಿಂಗಳ ಮೊದಲನೇ ತಾರೀಖು ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಆಗುತ್ತೆ. ನವಂಬರ್ 1 ರ ಇಂದು ಕೂಡ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿದೆ.
19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 5 ರೂಪಾಯಿ ಕಡಿಮೆಯಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1590 ರೂಪಾಯಿ ಆಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 15 ರೂಪಾಯಿ ಏರಿಕೆಯಾಗಿತ್ತು. ಈಗ 5 ರೂಪಾಯಿ ಕಡಿಮೆಯಾಗಿದೆ. ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 6.5 ರೂಪಾಯಿ ಕಡಿಮೆಯಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯಿಂದ ರೆಸ್ಟೋರೆಂಟ್, ಹೋಟೇಲ್, ಕ್ಯಾಟರಿಂಗ್ ಸರ್ವೀಸ್ ನೀಡುವವರಿಗೆ ಬೆಲೆ ಇಳಿಕೆಯ ಲಾಭ ಸಿಗಲಿದೆ.
ಆದರೇ, ಇಂದು ಗೃಹ ಬಳಕೆಯ 14.5 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
/filters:format(webp)/newsfirstlive-kannada/media/post_attachments/wp-content/uploads/2023/10/LPG_Cylinder_Price.jpg)
ಇನ್ನೂ ಇಂದು ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಮತ್ತೊಂದೆಡೆ ಏವಿಯೇಷನ್ ಟರ್ಬೈನ್ ಇಂಧನದ ಬೆಲೆ ಶೇ.1 ರಷ್ಟು ಏರಿಕೆಯಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us