Advertisment

ಪ್ರೀತಿ ಕೊಂದ ಕೊಲೆಗಾರ ಮಹೇಂದ್ರ ರೆಡ್ಡಿ!! : ಪತಿ ಮಹೇಂದ್ರ ರೆಡ್ಡಿ ಮೇಲಿನ ಕೃತಿಕಾರ ಅತಿಯಾದ ನಂಬಿಕೆ, ಪ್ರೀತಿಯೇ ಮುಳುವು!

ಬೆಂಗಳೂರಿನ ವೈದ್ಯೆ ಕೃತಿಕಾ ಕೊಲೆ ಕೇಸ್ ನಲ್ಲಿ ಆರೋಪಿ ಮಹೇಂದ್ರ ರೆಡ್ಡಿ ಕೃತಿಕಾಳನ್ನು ಮಾತ್ರ ಕೊಲ್ಲಲಿಲ್ಲ. ಆಕೆಯ ಪ್ರೀತಿಯನ್ನು ಕೊಂದ ಕೊಲೆಗಾರ! ಡಾ.ಕೃತಿಕಾ ಪತಿ ಮಹೇಂದ್ರ ರೆಡ್ಡಿ ಮೇಲೆ ಭಾರಿ ನಂಬಿಕೆ, ಪ್ರೀತಿ ಇಟ್ಟುಕೊಂಡಿದ್ದಳು. ಅದನ್ನೇ ಮಹೇಂದ್ರ ಕೊಲೆ ಮಾಡಿಬಿಟ್ಟ!

author-image
Chandramohan
kruthika reddy

ಕೊಲೆಗಾರ ಮಹೇಂದ್ರ ರೆಡ್ಡಿ ಮತ್ತು ಪತ್ನಿ ಕೃತಿಕಾ

Advertisment


ಬೆಂಗಳೂರಿನಲ್ಲಿ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತಿವೆ. ಬಗೆದಷ್ಟು ಆರೋಪಿಯ ಕರಾಳ ಮುಖ ಬಯಲಾಗುತ್ತಿದೆ. ತನ್ನ ಪತ್ನಿಗೆ ಆರೋಪಿ ಮಹೇಂದ್ರ ರೆಡ್ಡಿ,  ನಂಬಿಸಿ ನಂಬಿಸಿ ಮೋಸ ಮಾಡುತ್ತಿದ್ದ ಅನ್ನೋ ಸತ್ಯ ಈಗ ಬಹಿರಂಗವಾಗುತ್ತಿದೆ. 
ಪತಿ, ಆರೋಪಿ ಮಹೇಂದ್ರ ರೆಡ್ಡಿ ಹಾಕಿದ ಗೆರೆಯನ್ನು ಕೃತಿಕಾ ದಾಟುತ್ತಿರಲಿಲ್ಲ.
ಅತಿಯಾಗಿ ಪತಿ ಮಹೇಂದ್ರ ರೆಡ್ಡಿಯನ್ನು ಕೃತಿಕಾ ಪ್ರೀತಿಸುತ್ತಿದ್ದರು. ಆದರೇ, ಆ ಪ್ರೀತಿಗೆ ಮಹೇಂದ್ರ ರೆಡ್ಡಿ ಮೋಸ ಮಾಡಿಬಿಟ್ಟ.
ಪತಿ ಹೇಳಿದ್ದನ್ನು  ಯಾವುದನ್ನೂ ಪ್ರಶ್ನಿಸದೆ ಕಣ್ಣುಮುಚ್ಚಿ ಕೃತಿಕಾ ನಂಬುತ್ತಿದ್ದರು. ಇದನ್ನೇ ಬಂಡವಾಳ ಮಾಡ್ಕೊಂಡು ಕೃತಿಕಾ ಎಮೋಷನ್ಸ್  ಜೊತೆ ಪತಿ ಮಹೇಂದ್ರ ರೆಡ್ಡಿ ಆಟವಾಡಿದ್ದಾನೆ. ಮಹೇಂದ್ರ ರೆಡ್ಡಿ ಕೃತಿಕಾಳನ್ನು ಮಾತ್ರ ಕೊಲ್ಲಲಿಲ್ಲ. ಆಕೆಯ ಪ್ರೀತಿಯನ್ನು ಕೊಲೆ  ಮಾಡಿಬಿಟ್ಟ. ಪ್ರೀತಿಯನ್ನು ಕೊಂದ ಕೊಲೆಗಾರ ಈ ಮಹೇಂದ್ರ ರೆಡ್ಡಿ. 

Advertisment

kruthika today 11



ಪತ್ನಿ ಕೃತಿಕಾ ರೆಡ್ಡಿ ದೇಹದಲ್ಲಿ ಶುಗರ್ ಲೆವನ್ ಡೌನ್ ಆಗಲು ಮಹೇಂದ್ರ ರೆಡ್ಡಿ  ಮೆಡಿಸಿನ್ ಕೊಡುತ್ತಿದ್ದ. ಬಳಿಕ ಕೃತಿಕಾಗೇ ಮೆಸೇಜ್ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ…ಪಡೆದುಕೊಳ್ಳುತ್ತಿದ್ದ.  ತಾನು ಕೊಟ್ಟ ಮೆಡಿಸಿನ್ ವರ್ಕೌಟ್ ಆಗುತ್ತಿದೆಯೇ  ಅನ್ನೋದನ್ನ ಕನ್ಫರ್ಮ್ ಮಾಡ್ಕೊಳ್ತಿದ್ದ. ಸುಸ್ತಾಗ್ತಿಯಾ..? ಏನಾಗ್ತಿದೆ, ಇವಾಗ ಹೇಗಿದ್ದೀಯಾ ಅಂಥ ಮೆಸೇಜ್ ಮಾಡುತ್ತಿದ್ದ.  ಕೃತಿಕಾ ಸುಸ್ತಾಗ್ತಿದೆ ಅಂದಾಕ್ಷಣ ಆರೋಪಿ ಮಹೇಂದ್ರ ರೆಡ್ಡಿ ಸಮಾಧಾನ ಮಾಡಿಕೊಳ್ಳುತ್ತಿದ್ದ. ತಾನು ಕೊಟ್ಟಿರೋ ಮೆಡಿಸಿನ್ ವರ್ಕ್ ಆಗ್ತಿದೆ ಅಂಥ ಮನಸ್ಸಿನಲ್ಲೇ ಖುಷಿಪಡುತ್ತಿದ್ದ. ಕೃತಿಕಾಗೆ ಮೆಡಿಸಿನ್ ಕೊಡಲು ಶುರು ಮಾಡಿದ ದಿನದಿಂದ ಎಲ್ಲವನ್ನು ಆರೋಪಿ ಮಹೇಂದ್ರ ರೆಡ್ಡಿ ಆಬ್ಸರ್ವ್ ಮಾಡುತ್ತಿದ್ದ. …ಕೃತಿಕಾಳ ಅತಿಯಾದ ನಂಬಿಕೆ, ಪ್ರೀತಿಯೇ ಆಕೆಯ ಸಾವಿಗೆ ಕಾರಣ ಆಗಿತ್ತು. ಕೃತಿಕಾ ಅತಿಯಾಗಿ ಪತಿ ಮಹೇಂದ್ರ ರೆಡ್ಡಿಯನ್ನು ನಂಬಿಬಿಟ್ಟಿದ್ದಳು. ಪತಿ ಮಹೇಂದ್ರ ರೆಡ್ಡಿ ಕೊಡುತ್ತಿದ್ದ ಯಾವುದೇ ಔಷಧಿ, ಇಂಜೆಕ್ಷನ್ ಗಳನ್ನು ಅನುಮಾನದಿಂದ ನೋಡಲೇ ಇಲ್ಲ. ಕೃತಿಕಾ ರೆಡ್ಡಿ ಕೂಡ ಡೆರ್ಮಟಾಲಜಿಸ್ಟ್ ಆಗಿದ್ದು, ವೈದ್ಯ ವಿಜ್ಞಾನದ ಬಗ್ಗೆ ನಾಲ್ಡೆಜ್ ಇತ್ತು. ಆದರೇ, ಪತಿ ಮಹೇಂದ್ರ ರೆಡ್ಡಿ ಕೊಡುತ್ತಿದ್ದ ಔಷಧಿಗಳು ಯಾವುವು?  ಅವು ಹೇಗೆ ತನ್ನ ಆರೋಗ್ಯಕ್ಕೆ ಸಂಬಂಧಿಸಿದ್ದು?  ತನ್ನ  ಆರೋಗ್ಯದ ಮೇಲೆ ನೆಗೆಟಿವ್ ಇಂಫ್ಯಾಕ್ಟ್ ಮಾಡುತ್ತಿವೆಯೇ ಎಂಬ ಅನುಮಾನದಿಂದ ನೋಡಲೇ ಇಲ್ಲ.  ಹೀಗೆ ಪತಿ ಕೊಡುತ್ತಿದ್ದ ಔಷಧಿ ಹಾಗೂ ಪತಿಯ ನಡವಳಿಕೆಯನ್ನು ಸ್ಪಲ್ಪ ಅನುಮಾನದಿಂದ ನೋಡಿದ್ದರೂ, ಡಾಕ್ಟರ್ ಕೃತಿಕಾ ಬದುಕುಳಿಯುತ್ತಿದ್ದರು. ಪತಿ ಮಹೇಂದ್ರ ರೆಡ್ಡಿ ಮೇಲಿನ ಅತಿಯಾದ ನಂಬಿಕೆ, ಪ್ರೀತಿ, ಪತಿ ಮಾಡುತ್ತಿರುವುದೆಲ್ಲಾ ನನ್ನ ಒಳ್ಳೆಯದ್ದಕ್ಕೆ ಎಂಬ  ನಂಬಿಕೆಯೇ ಆಕೆಯ ಜೀವವನ್ನು ಬಲಿ ತೆಗೆದುಕೊಂಡಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Dr Kruthika M Reddy
Advertisment
Advertisment
Advertisment