ಉತ್ತರಾಖಂಡ್ ನಲ್ಲಿ ಮೇಘಸ್ಪೋಟದಿಂದ ಕೊಚ್ಚಿ ಹೋದ ಮನೆಗಳು, 50 ಮಂದಿ ನಾಪತ್ತೆ

ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಜಿಲ್ಲೆಯ ಥರಾಲಿ ಗ್ರಾಮದಲ್ಲಿ ಮೇಘಸ್ಪೋಟ ಸಂಭವಿಸಿದೆ. ಬೆಟ್ಟದ ಮೇಲ್ಭಾಗದಿಂದ ಧೀಡೀರ್ ಪ್ರವಾಹದಂತೆ ನೀರು ಹರಿದು ಬಂದಿದೆ. ತಗ್ಗು ಪ್ರದೇಶದ ಮನೆಗಳನ್ನು ನೀರು ಅಪೋಶನ ತೆಗೆದುಕೊಂಡಿದೆ. ದುರಂತದಲ್ಲಿ 50 ಮಂದಿ ನಾಪತ್ತೆಯಾಗಿದ್ದಾರೆ.

author-image
Chandramohan
UTTARAKHAND CLOUD BURST
Advertisment

ಉತ್ತರಾಖಂಡ್ ರಾಜ್ಯದ ಕೇದಾರನಾಥ್ ಕಣಿವೆಯಲ್ಲಿ 2013ರ ಜೂನ್ ತಿಂಗಳಲ್ಲಿ ಧೀಡೀರ್  ಪ್ರವಾಹ ಬಂದಿದ್ದನ್ನು ಜನರು ಮರೆಯಲು ಸಾಧ್ಯವಿಲ್ಲ. ಈಗ ಅಂಥದ್ದೇ ಮತ್ತೊಂದು ಧೀಡೀರ್  ಪ್ರವಾಹ ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಜಿಲ್ಲೆಯ ಥರಾಲಿ ಗ್ರಾಮದಲ್ಲಿ ಬಂದಿದೆ. ಮೇಘಸ್ಪೋಟದಿಂದಾಗಿ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಬೆಟ್ಟದ ಮೇಲ್ಬಾಗದಿಂದ ಧೀಡೀರನೇ ಭಾರಿ ಮಳೆ ನೀರು ಪ್ರವಾಹದಂತೆ, ಮರದ ದಿಮ್ಮಿಗಳ ಜೊತೆ ಹರಿದು ಬಂದಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿದ್ದ ಥರಾಲಿ ಗ್ರಾಮದ ದೊಡ್ಡ ದೊಡ್ಡ ಮನೆಗಳೇ ಪ್ರವಾಹಕ್ಕೆ ಸಿಲುಕಿ ನೆಲಕ್ಕುರುಳಿ ಬಿದ್ದಿವೆ. ಮನೆಗಳ ಮೇಲೆ ಪ್ರವಾಹದ ನೀರು ಬಂದಿದೆ.   ಧೀಡೀರ್ ಪ್ರವಾಹದ ನೀರಿನ ಹೊಡೆತಕ್ಕೆ ಮನೆಗಳೇ ಕುಸಿದು ಬಿದ್ದಿವೆ. ಥರಾಲಿ ಗ್ರಾಮದ 50 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. 
ಖೀರ್ ಗಂಗಾ ನದಿಯ ದಡದಲ್ಲಿ ಮೇಘಸ್ಪೋಟ ಸಂಭವಿಸಿದೆ. ಥರಾಲಿ ಗ್ರಾಮವು ಖೀರ್ ಗಂಗಾ ನದಿಯ ದಡದಲ್ಲೇ ಇತ್ತು. 
ಬೆಟ್ಟದ ಮೇಲ್ಬಾಗದಿಂದ ಈ ಮೊದಲು ಸ್ಪಲ್ಪ ಪ್ರಮಾಣದಲ್ಲಿ ನೀರು ಹರಿಯುವ ಹಳ್ಳ ಇತ್ತು. ಆದರೇ, ಇಂದು ಅದೇ ಹಳ್ಳದ ಜಾಗದಲ್ಲಿ ಮೇಘ ಸ್ಪೋಟದಿಂದ ಪ್ರವಾಹದಂತೆ ನೀರು ಹರಿದು ಬಂದು, ಮನೆಗಳನ್ನೇ ಅಪೋಶನ ತೆಗೆದುಕೊಂಡಿದೆ. ಮನೆಗಳು ನೀರಿನ ಹೊಡೆತಕ್ಕೆ ಉರುಳಿಬಿದ್ದು, ಜನರು ನೀರಿನಲ್ಲಿ ಕೊಚ್ಚಿಕೊಂಡು  ಹೋಗಿದ್ದಾರೆ. ಧೀಡೀರ್ ಪ್ರವಾಹದ ಭಯಾನಕ ಘಟನೆಯನ್ನು ನೋಡಿದ ಜನರು ಕೂಗಿಕೊಳ್ಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. 


ಉತ್ತರಾಖಂಡ್ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ತಕ್ಷಣವೇ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ರೀಲಿಫ್ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಯುದ್ದೋಪಾದಿಯಲ್ಲಿ ನಡೆಸಬೇಕೆಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಸೂಚನೆ ನೀಡಿದ್ದಾರೆ. ಪರಿಸ್ಥಿತಿಯನ್ನು ಮಾನಿಟರ್ ಮಾಡುತ್ತಿದ್ದೇವೆ. ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಪುಷ್ಕರ್ ಸಿಂಗ್ ಧಾಮಿ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.  

flood, North india flood, Uttara pradesh flood, karnataka flood, Heavy rain , river overflowing, RIVER crosses danger mark. GANGA RIVER, Yamuna river.
Advertisment