/newsfirstlive-kannada/media/media_files/2025/09/20/actor-mohan-lal-2025-09-20-18-57-56.jpg)
ಮಲಯಾಳಂ ನಟ ಮೋಹನ್ ಲಾಲ್ ಗೆ ಪ್ರಶಸ್ತಿ ಘೋಷಣೆ
ಮಲಯಾಳಂ ಸಿನಿಮಾ ನಟ ಮೋಹನ್ ಲಾಲ್ ಅವರಿಗೆ 2023ರ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯು ಪ್ರಶಸ್ತಿಯನ್ನು ಘೋಷಿಸಿದೆ.
ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಮೋಹನ್ ಲಾಲ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ-2023 ಅನ್ನು ಘೋಷಿಸುತ್ತಿದೆ.
ಮೋಹನ್ ಲಾಲ್ ಅವರ ಸಿನಿಮಾ ಜರ್ನಿ ಹೊಸ ತಲೆಮಾರುಗಳಿಗೆ ಸ್ಪೂರ್ತಿ ನೀಡುತ್ತಿದೆ. ದಂತಕಥೆಯ ನಟ, ನಿರ್ದೇಶಕ, ನಿರ್ಮಾಪಕರಾಗಿ ಭಾರತೀಯ ಸಿನಿಮಾ ರಂಗಕ್ಕೆ ಅವರ ಕೊಡುಗೆಯನ್ನು ಗೌರವಿಸಲಾಗುತ್ತಿದೆ. ಮೋಹನ್ ಲಾಲ್ ಅವರ ಅಸಾಧಾರಣ ಪ್ರತಿಭೆ, ಹಾರ್ಡ್ ವರ್ಕ್ ಭಾರತೀಯ ಸಿನಿಮಾ ಇತಿಹಾಸದಲ್ಲಿ ಗೋಲ್ಡನ್ ಸ್ಟಾಂಡರ್ಡ್ ಆಗಿದೆ. ಸೆಪ್ಟೆಂಬರ್ 23, 2025 ರಂದು 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತೆ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಹೇಳಿದೆ.
Shri Mohanlal Ji epitomises excellence and versatility. With a rich body of work spanning decades, he stands as a leading light of Malayalam cinema, theatre and is deeply passionate about the culture of Kerala. He has also delivered remarkable performances in Telugu, Tamil,… https://t.co/4MWI1oFJsJpic.twitter.com/P0DkKg1FWL
— Narendra Modi (@narendramodi) September 20, 2025
ಕಳೆದ ವರ್ಷ ಬಂಗಾಳಿ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.
ಮೋಹನ್ ಲಾಲ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿದಕ್ಕೆ ಪ್ರಧಾನಿ ಮೋದಿ ಮೋಹನ್ ಲಾಲ್ ಅವರನ್ನು ಅಭಿನಂದಿಸಿದ್ದಾರೆ.
ಮೋಹನ್ ಲಾಲ್ ಅವರ ಕೆಲಸಗಳು ಮುಂದಿನ ತಲೆಮಾರಿಗೂ ಸ್ಪೂರ್ತಿ. ಮಲಯಾಳಂ ಸಿನಿಮಾ, ನಾಟಕ ರಂಗ ಹಾಗೂ ಮಲಯಾಳಂ ಸಂಸ್ಕೃತಿಯಲ್ಲಿ ಮೋಹನ್ ಲಾಲ್ ಪ್ರಜ್ವಲಿಸುವ ಬೆಳಕು ಎಂದು ಮೋಹನ್ ಲಾಲ್ ಅವರನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಜೊತೆಗೆ ಹಿಂದಿ, ತೆಲುಗು, ಕನ್ನಡ ಸಿನಿಮಾ ರಂಗದಲ್ಲೂ ಅಸಾಧಾರಣ ಸಾಧನೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.