Advertisment

ಮಾಲೇಗಾಂವ್ ಸ್ಪೋಟ ನಿರಾಪರಾಧಿ ಶ್ರೀಕಾಂತ್ ಪುರೋಹಿತ್‌ಗೆ ಮತ್ತೆ ಸೇನೆಯಲ್ಲಿ ಹುದ್ದೆ: ಕರ್ನಲ್ ಹುದ್ದೆಗೆ ಬಡ್ತಿ ನೀಡಿದ ಸೇನೆ

ಮಾಲೇಗಾಂವ್ ಸ್ಪೋಟ ಕೇಸ್ ನಲ್ಲಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ, ಇತ್ತೀಚೆಗೆ ಎನ್‌ಐಎ ಕೋರ್ಟ್ ತೀರ್ಪು ನೀಡಿತ್ತು. ಇದಾದ ಬಳಿಕ ಶ್ರೀಕಾಂತ್ ಪುರೋಹಿತ್ ಸೇನೆಯ ಸೇವೆಗೆ ಮರು ಸೇರ್ಪಡೆಯಾಗಿದ್ದಾರೆ. ಈಗ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಗಿದೆ.

author-image
Chandramohan
SRIKANTH PUROHIT PROMOTION

ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಶ್ರೀಕಾಂತ್ ಪುರೋಹಿತ್ ಗೆ ಬಡ್ತಿ

Advertisment
  • ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಶ್ರೀಕಾಂತ್ ಪುರೋಹಿತ್ ಗೆ ಬಡ್ತಿ
  • ಇಂದು ಸೇನೆಯಲ್ಲಿ ಬಡ್ತಿ ಪಡೆದು ಕರ್ನಲ್ ಬ್ಯಾಡ್ಜ್ ಧರಿಸಿದ ಶ್ರೀಕಾಂತ್ ಪುರೋಹಿತ್‌

ಮಹಾರಾಷ್ಟ್ರದ ಮಾಲೇಗಾಂವ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿಯಾಗಿದ್ದು, ಇತ್ತೀಚೆಗಷ್ಟೇ ಎನ್‌ಐಎ ವಿಶೇಷ ಕೋರ್ಟ್ ನಿಂದ ಖುಲಾಸೆಗೊಂಡ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್‌ಗೆ ಭಾರತೀಯ ಸೇನೆಯಲ್ಲಿ ಮತ್ತೆ ಹುದ್ದೆ ನೀಡಲಾಗಿದೆ. ಜೊತೆಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಗಿದೆ.  ಇಂದು ಕರ್ನಲ್ ಶ್ರೀಕಾಂತ್ ಪುರೋಹಿತ್ ಕರ್ನಲ್ ಬ್ಯಾಡ್ಜ್ ಧರಿಸುವ ಪೋಟೋ ಬಿಡುಗಡೆ ಮಾಡಲಾಗಿದೆ. ಕರ್ನಲ್ ಶ್ರೀಕಾಂತ್ ಪುರೋಹಿತ್ ಮುಖದಲ್ಲಿ ಮತ್ತೆ ನಗು ಮೂಢಿದೆ. 
ಮಾಲೇಗಾಂವ್ ಬಾಂಬ್ ಸ್ಪೋಟ ಪ್ರಕರಣವನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲಾಗಿತ್ತು. ಮಾಲೇಗಾಂವ್‌ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ವಾಸಿಸುವ ಟೌನ್. ಮಾಲೇಗಾಂವ್ ನಲ್ಲಿ 2008ರ ಸೆಪ್ಟೆಂಬರ್‌  28 ರಂದು ಬಾಂಬ್ ಸ್ಪೋಟ ನಡೆದು 6 ಮಂದಿ ಸಾವನ್ನಪ್ಪಿದ್ದರು. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 
ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಮನೆಯಲ್ಲೇ ಆರ್‌ಡಿಎಕ್ಸ್ ಇತ್ತು ಎಂದು ಆರೋಪ ಮಾಡಲಾಗಿತ್ತು. ಆದರೇ, ಅದಕ್ಕೆ ಯಾವುದೇ ಸಾಕ್ಷ್ಯ  ಇಲ್ಲ ಎಂದು ಎನ್‌ಐಎ ಕೋರ್ಟ್ ತೀರ್ಪು ನೀಡಿದೆ. 
ಈ ಬಾಂಬ್ ಸ್ಪೋಟ ಕೇಸ್ ನಲ್ಲಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಕೂಡ ಆರೋಪಿಯಾಗಿದ್ದರು.  ಇತ್ತೀಚೆಗೆ ಎನ್‌ಐಎ ವಿಶೇಷ ಕೋರ್ಟ್, ಕೇವಲ ಅನುಮಾನವೇ  ಸಾಕ್ಷಿ, ಆಧಾರವಾಗಲ್ಲ ಎಂದು ಹೇಳಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ 7 ಮಂದಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಇದಾದ ಬಳಿಕ ಈಗ ಶ್ರೀಕಾಂತ್ ಪುರೋಹಿತ್ ಗೆ ಭಾರತೀಯ ಸೇನೆಯಲ್ಲಿ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಗಿದೆ. ಸ್ಪೋಟ ಸಂಭವಿಸಿದ್ದಾಗ, ಶ್ರೀಕಾಂತ್ ಪುರೋಹಿತ್, ಮಿಲಿಟರಿ ಇಂಟಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮಾಲೇಗಾಂವ್ ಬಾಂಬ್ ಸ್ಪೋಟ ಕೇಸ್ ನಲ್ಲಿ ಶ್ರೀಕಾಂತ್ ಪುರೋಹಿತ್ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. 

Advertisment



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

MALEGAON BOMB BLAST CASE
Advertisment
Advertisment
Advertisment