/newsfirstlive-kannada/media/media_files/2026/02/20/nandini-products-and-case-against-doctor-2026-02-20-12-39-46.jpg)
ನಂದಿನಿ ಉತ್ಪನ್ನಗಳ ಮೇಲೆ ಗಂಭೀರ ಆರೋಪ ಮಾಡಿದ್ದ ಬೆಂಗಳೂರು ನಗರದ ವೈದ್ಯೆ ವಿರುದ್ಧ ಕೆಎಂಎಫ್ ಈಗ ಕಾನೂನು ಸಮರ ಆರಂಭಿಸಿದೆ. ವೈದ್ಯೆ ವಿರುದ್ಧ ಕೆಎಂಎಫ್ ಈಗ ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿರುವ ಡಾ. ಶರಣ್ಯ ಪದ್ಮಜಾ ಅವರ ಮೇಲೆ ದೂರು ನೀಡಲಾಗಿದೆ.
ನಂದಿನಿ ಉತ್ಪನ್ನಗಳು ವಿಷಕಾರಿ. ನಂದಿನಿ ಉತ್ಪನ್ನ ಸೇವನೆಯಿಂದ ಕ್ಯಾನ್ಸರ್ ಬರುತ್ತೆ ಎಂದು ವೈದ್ಯೆ ಹೇಳಿದ್ದರು. ನಂದಿನಿ ಉತ್ಪನ್ನ ಸೇವಿಸುವುದರಿಂದ ಅಪಾಯಕಾರಿ ರೋಗಗಳು ಬರುತ್ತೆ ಎಂದು ವೈದ್ಯೆ ಶರಣ್ಯ ಹೇಳಿದ್ದರು. ನಂದಿನಿ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರ ಎಂದು ವಿಡಿಯೋ ಮಾಡಿ ವೈದ್ಯೆ ಶರಣ್ಯ ಬಿಡುಗಡೆ ಮಾಡಿದ್ದರು. ಈ ಹೇಳಿಕೆಯ ವಿರುದ್ಧ ಕೆಎಂಎಫ್ ಈಗ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರಿನ ಆಧಾರದ ಡಾ.ಶರಣ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಫೆಬ್ರವರಿ 8ನೇ ತಾರೀಖು ಸೋಶಿಯಲ್ ಮೀಡಿಯಾದಲ್ಲಿ ಡಾ ಶರಣ್ಯ ವಿಡಿಯೋ ಮಾಡಿದ್ದಾರೆ. ಆ ವೀಡಿಯೋದಲ್ಲಿ ನಂದಿನಿ ಉತ್ಪನ್ನಗಳ ಕುರಿತು ಸುಳ್ಳು ಮಾಹಿತಿ ನೀಡಿ ಮಾತಾಡಿದ್ದಾರೆ. ನಂದಿನಿ ಕ್ರೀಮ್ ಬನ್, ಸ್ಟ್ರಾಬೆರಿ ಫ್ಲೇವರ್ ಮಿಲ್ಕ್, ಸ್ಪಾಶ್ ಪಾನೀಯಗಳು ಟಾಕ್ಸಿಕ್ ಹಾಗೂ ಕೆಮಿಕಲ್ಗಳಿಂದ ಕೂಡಿದೆ ಎಂದಿದ್ದಾರೆ. ಇವುಗಳನ್ನ ದಿನನಿತ್ಯ ಸೇವಿಸಿದ್ರೆ ಆಟೋಇಮ್ಯೂನ್ ಡಿಸೀಸ್ ಬರುತ್ತೆ ಎಂದಿದ್ದಾರೆ. ಸ್ಟಿರಾಯ್ಡ್ ನಂತಹ ಡ್ರಗ್ ಗಳನ್ನ ನೀಡಬೇಕಾಗುತ್ತದೆ. ದೀರ್ಘಕಾಲ ಇದನ್ನು ಸೇವಿಸಿದ್ದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಟ್ರಾಬೆರಿ ಫ್ಲೇವರ್ ಮಿಲ್ಕ್ ನಲ್ಲಿ ನೈಸರ್ಗಿಕ ಸ್ಟ್ರಾಬೆರಿ ಇರಲ್ಲ, ಆರ್ಟಿಫಿಶಿಯಲ್ ಕಲರ್ಸ್ ಹಾಕಿರ್ತಾರೆ ಎಂದಿದ್ದಾರೆ. ಹಾಗಾಗಿ, FSSAI ಹೇಗೆ ಅನುಮತಿ ಕೊಡ್ತಾರೆ ಎಂದು ಪ್ರಶ್ನಿಸಿದ್ದಾರೆ?. ಲಾಭಕ್ಕಾಗಿ ಕೆ.ಎಂ.ಎಫ್ ಈ ರೀತಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಬಾರದು ಎಂದಿದ್ದಾರೆ. ಇದು ಸುಳ್ಳು ಆರೋಪ... FSSAI ಪರೀಕ್ಷೆ ಮಾಡಿದ ನಂತರವೇ ಮಾರುಕಟ್ಟೆಗೆ ಉತ್ಪನ್ನಗಳು ಬರುತ್ತೆ. ನಂದಿನಿ ಬ್ರ್ಯಾಂಡ್ ಆರೋಗ್ಯಕರವಾಗಿದೆ. ಸುಳ್ಳು ಮಾಹಿತಿ ಹಬ್ಬಿಸಿದವರ ವಿರುದ್ಧ ಕ್ರಮ ಆಗಬೇಕು ಎಂದು ದೂರು ನೀಡಲಾಗಿದೆ. ಕೆಎಂಎಫ್ ಅಧಿಕಾರಿ ಪದ್ಮಾವತಿ ಎಂಬುವವರು ಡಾ.ಶರಣ್ಯ ವಿರುದ್ಧ ಕೆಎಂಎಫ್ ಪರವಾಗಿ ಲಿಖಿತ ದೂರು ನೀಡಿದ್ದಾರೆ.
/filters:format(webp)/newsfirstlive-kannada/media/media_files/2026/02/20/nandini-products-2026-02-20-12-40-13.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us