/newsfirstlive-kannada/media/media_files/2025/08/21/rini-george-allegations022-2025-08-21-13-16-45.jpg)
ಮಲಯಾಳಂ ನಟಿ ರಿನಿ ಜಾರ್ಜ್
ಮಲಯಾಳಂ ನಟಿ ರಿನಿ ಜಾರ್ಜ್ ಅವರು ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕಯೊಬ್ಬರು ಕಳೆದ ಮೂರು ವರ್ಷಗಳಿಂದ ತನಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ನನನ್ನು ಅವರು ಪಂಚತಾರಾ ಹೋಟೆಲ್‌ಗೆ ಆಹ್ವಾನಿಸುತ್ತಿದ್ದಾರೆ . ಹಲವಾರು ದೂರುಗಳ ಹೊರತಾಗಿಯೂ ಪಕ್ಷ ಆ ನಾಯಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಆರೋಪಿಯ ಹೆಸರು ಅಥವಾ ಅವರ ಪಕ್ಷದ ಹೆಸರನ್ನು ಬಹಿರಂಗಪಡಿಸಲು ನಟಿ ರಿನಿ ಜಾರ್ಜ್ ನಿರಾಕರಿಸಿದರು, ಆದರೆ ಕೇರಳದ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ಅವರೇ ರಿನಿ ಜಾರ್ಜ್ ಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದೆ.
ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಳನ್ನು ಸಹ ನಡೆಸಿದ್ದಾರೆ. ರಾಹುಲ್ ಮಂಕೂಟ್ಟಿಲ್ ಅಥವಾ ಕಾಂಗ್ರೆಸ್‌ನಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ . ಆದರೆ ಪಕ್ಷದ ನಾಯಕತ್ವ ಈ ಬಗ್ಗೆ ವರದಿಯನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ. ನಟಿ ರಿನಿ ಜಾರ್ಜ್ ಆನ್‌ಲೈನ್ ಸಂದರ್ಶನವೊಂದರಲ್ಲಿ ಆರೋಪಗಳನ್ನು ಮಾಡಿದ್ದಾರೆ, ಅದು ವೈರಲ್ ಆಗಿದೆ.
"ನಾನು ಸಾಮಾಜಿಕ ಮಾಧ್ಯಮದ ಮೂಲಕ ರಾಜಕಾರಣಿಯನ್ನು ಸಂಪರ್ಕಿಸಿದೆ. ಅವರ ಅನುಚಿತ ನಡವಳಿಕೆಯು ಮೂರು ವರ್ಷಗಳ ಹಿಂದೆ, ನಾನು ಮೊದಲು ಅವರಿಂದ ಆಕ್ಷೇಪಾರ್ಹ ಸಂದೇಶಗಳನ್ನು ಸ್ವೀಕರಿಸಿದಾಗಿನಿಂದ ಪ್ರಾರಂಭವಾಯಿತು" ಎಂದು ಶ್ರೀಮತಿ ರಿನಿ ಜಾರ್ಜ್ ಹೇಳಿಕೊಂಡಿದ್ದಾರೆ. ನಾಯಕರೊಬ್ಬರು ಪಂಚತಾರಾ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸುವುದಾಗಿ ಹೇಳಿದ್ದರು. ಫೈವ್ ಸ್ಟಾರ್ ಹೋಟೇಲ್‌ಗೆ ಭೇಟಿ ನೀಡಲು ಕೇಳಿಕೊಂಡರು ಎಂದು ರಿನಿ ಜಾರ್ಜ್ ಆರೋಪಿಸಿದ್ದಾರೆ.
ರಿನಿ ಜಾರ್ಜ್
ಇದಲ್ಲದೆ, ಸಂಬಂಧಪಟ್ಟ ಪಕ್ಷದ ಹಿರಿಯ ನಾಯಕರು ತಮ್ಮ ದೂರುಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ರಿನಿ ಜಾರ್ಜ್ ಆರೋಪಿಸಿದರು. ಜೊತೆಗೆ ಆ ನಾಯಕನಿಗೆ ಅವರ ಪಕ್ಷದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗುತ್ತಿದೆ.
ನೀನು ಹೋಗಿ ಯಾರಿಗಾದರೂ ಹೇಳಬಹುದು, ಯಾರು ಗಮನ ಕೊಡಲ್ಲ ಎಂದು ಆ ನಾಯಕ, ತಮಗೆ ಹೇಳಿದ್ದರು ಎಂದು ನಟಿ ರಿನಿ ಜಾರ್ಜ್ ಹೇಳಿದ್ದಾರೆ.
"ಅವರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಇಮೇಜ್ ಛಿದ್ರಗೊಂಡಿದೆ. ನನ್ನ ದೂರಿನ ನಂತರವೂ, ಅವನಿಗೆ ಪಕ್ಷದೊಳಗೆ ಹಲವಾರು ಪ್ರಮುಖ ಸ್ಥಾನಗಳನ್ನು ನೀಡಲಾಯಿತು" ಎಂದು ರಿನಿ ಜಾರ್ಜ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್
ಭದ್ರತಾ ಕಾರಣಗಳು ಮತ್ತು "ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯ ಕೊರತೆ" ಯಿಂದಾಗಿ ತಾನು ದೂರನ್ನು ಮುಂದುವರಿಸುತ್ತಿಲ್ಲ ಎಂದು ನಟಿ ಹೇಳಿದರು. "ಭಾಗಿಯಾಗಿರುವ ರಾಜಕೀಯ ಪಕ್ಷವನ್ನು ಮುಜುಗರಕ್ಕೀಡು ಮಾಡಲು ತಾನು ಬಯಸುವುದಿಲ್ಲ" ಎಂದು ಅವರು ಹೇಳಿದರು, ಆದರೆ ಆ ನಾಯಕ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಲಾದ ಇತರ ಮಹಿಳೆಯರನ್ನು ಬೆಂಬಲಿಸಲು ಮಾತನಾಡುತ್ತಿದ್ದೇನೆ ಎಂದು ರಿನಿ ಜಾರ್ಜ್ ಹೇಳಿದರು.
ರಾಹುಲ್ ಮಂಕೂಟ್ಟಿಲ್ ವಿರುದ್ಧ ಬರಹಗಾರ್ತಿ ಹನಿ ಭಾಸ್ಕರನ್ ಕೂಡ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಶಾಸಕ ರಾಹುಲ್ ಮಂಕೂಟ್ಟಿಲ್, ಸದ್ಯ ಕೇರಳ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಕೂಡ ಆಗಿದ್ದಾರೆ.
ರಾಹುಲ್ ಮಂಕೂಟ್ಟಿಲ್ , ಬೇರೆ ನಾಯಕರ ಹೆಂಡತಿಯರು ಮತ್ತು ಹೆಣ್ಣು ಮಕ್ಕಳಿಗೂ ಇದೇ ರೀತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ರಿನಿ ಜಾರ್ಜ್ ಆರೋಪಿಸಿದ್ದಾರೆ.
ಈಗ ಬೇರೆ ಬೇರೆ ಮಹಿಳೆಯರಿಗೆ ಈ ರೀತಿಯಾಗಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಾಗಿರುವುದರಿಂದ ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ , ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದೊಳಗೆ ಒತ್ತಡ ಹೆಚ್ಚಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ತಮ್ಮ ವಿರುದ್ದ ಗಂಭೀರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ರಾಹುಲ್ ಮಂಕೂಟ್ಟಿಲ್ ಯುವ ಕಾಂಗ್ರೆಸ್ ರಾಜ್ಯ ಘಟಕದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೂ ರಿಜಿ ಜಾರ್ಜ್ ನನ್ನು ಹೆಸರು ಹೇಳಿ ಆರೋಪ ಮಾಡಿಲ್ಲ. ಆಕೆ ನನ್ನ ಸ್ನೇಹಿತೆ ಎಂದು ರಾಹುಲ್ ಮಂಕೂಟ್ಟಿಲ್ ಹೇಳಿದ್ದಾರೆ. ಎಲ್‌ಡಿಎಫ್ ಸರ್ಕಾರದ ವಿರುದ್ಧದ ಆರೋಪಗಳಿಂದ ಗಮನ ಬೇರೆಡೆ ಸೆಳೆಯಲು ಈ ಆರೋಪ ಮಾಡಲಾಗುತ್ತಿದೆ ಎಂದು ರಾಹುಲ್ ಮಂಕೂಟ್ಟಿಲ್ ಹೇಳಿದ್ದಾರೆ. ನನ್ನ ವಿರುದ್ಧ ಯಾವುದೇ ಮಹಿಳೆಯರೂ ಪೊಲೀಸ್ ದೂರು ಕೊಟ್ಟಿಲ್ಲ. ಪಕ್ಷವು ಕೂಡ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಹೇಳಿಲ್ಲ. ಈ ಎಲ್ಲ ಆರೋಪಗಳನ್ನು ವೈಯಕ್ತಿಕವಾಗಿ ಎದುರಿಸುವೆ ಎಂದು ರಾಹುಲ್ ಮಂಕೂಟ್ಟಿಲ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ