/newsfirstlive-kannada/media/media_files/2025/09/06/mumbai-rdx-blast-accused-2025-09-06-14-55-56.jpg)
ಆರೋಪಿ ಅಶ್ವಿನಿ ಬಂಧಿಸಿದ ಪೊಲೀಸರು
ಗಣೇಶ ವಿಸರ್ಜನೆ ವೇಳೆ, ಮುಂಬೈ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಶ್ವಿನಿ ಎಂದು ಗುರುತಿಸಲಾಗಿದ್ದು, ಬಿಹಾರ ಮೂಲದವನಾಗಿದ್ದು, ಕಳೆದ ಐದು ವರ್ಷಗಳಿಂದ ನೋಯ್ಡಾದಲ್ಲಿ ವಾಸಿಸುತ್ತಿದ್ದಾನೆ.
ಆರೋಪಿಯನ್ನು ನೋಯ್ಡಾದ ಸೆಕ್ಟರ್ -113 ರಲ್ಲಿ ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಗುರುವಾರ ಆರೋಪಿ ಮುಂಬೈ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಹಾಕಿದ್ದು, ನಗರದಾದ್ಯಂತ ವಾಹನಗಳಲ್ಲಿ ಹೆಚ್ಚಿನ ಬಾಂಬ್‌ಗಳನ್ನು ಇರಿಸಲಾಗಿದೆ . 400 ಕೆಜಿ ಆರ್‌ಡಿಎಕ್ಸ್ ಒಳಗೊಂಡ ದೊಡ್ಡ ಪ್ರಮಾಣದ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದ. ಇದು ಒಂದು ಕೋಟಿ ಜನರನ್ನು ಈ ಸ್ಪೋಟಕ ಬಳಸಿ ಕೊಲ್ಲಬಹುದು ಎಂದು ವಾಟ್ಸಾಫ್ ನಲ್ಲಿ ಬೆದರಿಕೆ ಹಾಕಿದ್ದ.
ಆರೋಪಿ ಅಶ್ವಿನಿ ಬಿಹಾರ ಹಾಗೂ ನೋಯ್ಡಾದಲ್ಲಿ ಜ್ಯೋತಿಷ್ಯ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ವಾಟ್ಸಾಫ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದ ಪೋನ್ ನಂಬರ್ ಆಧಾರದ ಮೇಲೆ ತನಿಖೆ ನಡೆಸಿ, ತ್ವರಿತಗತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮುಂಬೈ ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ನೋಯ್ಡಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈಗ ಆರೋಪಿಯನ್ನು ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.