/newsfirstlive-kannada/media/media_files/2026/01/20/russian-women-killed-in-goa-2026-01-20-13-58-27.jpg)
ರಷ್ಯಾದ ಇಬ್ಬರು ಸುಂದರಿಯರ ಕೊಂದ ಅಲೆಕ್ಸೆಯ್ ಲಿಯೊನೋವ್
ರಷ್ಯಾದ ಪ್ರಜೆಯಾದ ಅಲೆಕ್ಸೆಯ್ ಲಿಯೊನೊವ್ ಗೋವಾದಲ್ಲಿ ತನ್ನ ಇಬ್ಬರು ಮಹಿಳಾ ಸ್ನೇಹಿತರನ್ನು ಎರವಲು ಪಡೆದ ಹಣ ಮತ್ತು 100 ರೂ. ಮೌಲ್ಯದ 'ರಬ್ಬರ್ ಕಿರೀಟ'ಕ್ಕಾಗಿ ಕೊಂದಿದ್ದಾನೆ ಎಂದು ಗೋವಾ ಪೊಲೀಸ್ ಹಿರಿಯ ಮೂಲಗಳು ತಿಳಿಸಿವೆ. ಎಲೆನಾ ವನೀವಾ ಮತ್ತು ಎಲೆನಾ ಕಸ್ತನೋವಾ ಎಂದು ಗುರುತಿಸಲಾದ ಇಬ್ಬರು ಮಹಿಳೆಯರು ಕೂಡ ರಷ್ಯಾದ ಪ್ರಜೆಗಳು.
ಮೂಲಗಳ ಪ್ರಕಾರ, ಮಹಿಳೆಯರಲ್ಲಿ ಒಬ್ಬರು ರಷ್ಯಾದ ವ್ಯಕ್ತಿಯಿಂದ ಹಣವನ್ನು ಎರವಲು ಪಡೆದಿದ್ದರೆ, ಇನ್ನೊಬ್ಬರು ಆರೋಪಿಯಿಂದ 100 ರೂ. ಮೌಲ್ಯದ 'ರಬ್ಬರ್ ಕಿರೀಟ'ವನ್ನು ಎರವಲು ಪಡೆದಿದ್ದರು . ಆದರೇ, ಅದನ್ನು ಅವರಿಬ್ಬರೂ ಅವನಿಗೆ ಹಿಂತಿರುಗಿಸಲಿಲ್ಲ. ಇದರಿಂದ ಪ್ರಚೋದಿಸಲ್ಪಟ್ಟ ಅವರು ಜನವರಿ 14 ಮತ್ತು 15 ರಂದು ಎರಡು ವಿಭಿನ್ನ ದಿನಗಳಲ್ಲಿ ತಮ್ಮ ಕೋಣೆಗಳಲ್ಲಿ ಇಬ್ಬರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಕೊಲೆಗಳು "ಪೂರ್ವ ಯೋಜಿತವಲ್ಲ" ಆದರೆ "ಪ್ರಚೋದಿತ ಕೊಲೆಗಳು" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಲೆಕ್ಸೆಯ್ "ಅತಿಯಾದ ಗೀಳು" ಹೊಂದಿದ್ದನು . ಇಬ್ಬರು ಮಹಿಳೆಯರ ಭಾರಿ ಹಚ್ಚಿಕೊಂಡಿದ್ದ. ಸುಲಭವಾಗಿ ಪ್ರಚೋದಿಸಲ್ಪಡಬಹುದಾದ ವ್ಯಕ್ತಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us