/newsfirstlive-kannada/media/media_files/2025/08/28/up-rampura-one-girl-with-two-boys-2025-08-28-13-06-49.jpg)
ವಿವಾಹಿತ ಮಹಿಳೆ, ಗಂಡ- ಪ್ರಿಯಕರ ಇಬ್ಬರ ಜೊತೆ ಇರುತ್ತೇನೆ ಎಂದಿದ್ದಾಳೆ!
ಆಗ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಿದ್ರು.. ಆದ್ರೀಗ ಗಂಡ ಹೆಂಡತಿ ಜಗಳ ಲವರ್ ಜೊತೆ ಓಡಿ ಹೋಗೋ ತನಕ ಅನ್ನೋ ಲೆವೆಲ್ಗೆ ಬಂದು ತಲುಪಿದೆ. ಈ ಮಾತು ನಾವ್ ಯಾಕೆ ಹೇಳಿದ್ವಿ ಅಂತ ಈ ನಿಜಘಟನೆಯನ್ನು ಓದಿದರೇ, ನಿಮಗೆ ಗೊತ್ತಾಗುತ್ತೆ.
ಇದೊಂದು 50-50 ಚಸ್ಕಾ ಮಸ್ಕಾ ಕಥೆ.. ಈ ಜೋಡಿ ಹಕ್ಕಿಗಳ ಮದುವೆಯಾಗಿ ಕೇವಲ ಒಂದು.. ಒಂದು ವರೆ ವರ್ಷ ಕಳೆದಿದೆಯಷ್ಟೇ. ಹೇಳಿ ಕೇಳಿ ಲವ್ ಮ್ಯಾರೇಜ್ ಬೇರೆ. ಅದ್ಯಾಕೋ ಗೊತ್ತಿಲ್ಲ ಇವರಿಬ್ಬರ ಮಧ್ಯೆ ನಿರಂತರ ಗಲಾಟೆ.. ಬೇಜಾರಲ್ಲಿ ಮನೆ ಬಿಟ್ಟು ಹೆಂಡ್ತಿ ಓಡೋಗಿದ್ಲು.. ಮತ್ತೆ ಬಂದು ಆಕೆ ಇಟ್ಟ ಬೇಡಿಕೆ ಕೇಳಿದ್ರೆ,, ಅಬ್ಬಬ್ಬಾ ನೀವು ಕೂಡ ಶಾಕ್ ಆಗ್ತೀರಾ..
‘ಗಂಡನೊಂದಿಗೆ 15 ದಿನ, ಪ್ರೇಮಿಯೊಂದಿಗೆ 15 ದಿನ ಇರ್ತೀನಿ’
ಪಂಚಾಯಿತಿ ಸಭೆಯಲ್ಲಿ ಆಕೆ ಇಟ್ಟ ಬೇಡಿಕೆ ಕೇಳಿ ಜನ ಶಾಕ್!
ಉತ್ತರ ಪ್ರದೇಶದ ರಾಂಪುರ.. ಇದೇ ಭಾಗದಲ್ಲಿ ಈ ದಂಪತಿ ವಾಸ ಮಾಡ್ತಿದ್ರು.. ಅಜೀಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆಯಷ್ಟೇ ಈಕೆ ತನ್ನ ಲವರ್ ಜೊತೆ ಓಡಿ ಹೋಗಿದ್ಲು.. ಗಂಡ ಪೊಲೀಸ್ ಸ್ಟೇಷನ್ ಮೆಟ್ಟಿಲಿರಿ ಕಂಪ್ಲೆಂಟ್ ಕೊಟ್ಟಿದ್ದ.. ಪೊಲೀಸರು ಹುಡುಕಿ ಕೊಟ್ಟಿದ್ರು. ಮನೆಗೆ ಬಂದ ಹೆಂಡ್ತಿಯನ್ನ ಏನು ಕೇಳದ ಗಂಡ, ಮಾರನೆ ದಿನ ಪಂಚಾಯ್ತಿ ಸೇರಿಸಿದ್ದ. ಹಾಗೆ ಊರಿನ ದೊಡ್ಡವರು ಮಾತನಾಡುತ್ತಿರುವಾಗ.. ಎದ್ದು ನಿಂತು ಆಕೆ ವಿಚಿತ್ರ ಮದುವೆ ಪ್ರಸ್ತಾಪ ಮಾಡಿದ್ದಾಳೆ. ನಾನಿ ಗಂಡನ ಜೊತೆಗೂ ಇರ್ತೀನಿ.. ಪ್ರಿಯಕರನ ಜೊತೆಗೂ ಇರ್ತೀನಿ.. ಅಂದು ಬಿಟ್ಲು.
50-50 ಸಂಸಾರ!
ಪಕ್ಕದ ಗ್ರಾಮ ತಾಂಡಾ ಮೂಲದ ವ್ಯಕ್ತಿಯ ಜೊತೆ ಪ್ರೀತಿ
ಒಂದು ವರ್ಷದಲ್ಲಿ ಒಟ್ಟು 9 ಬಾರಿ ಓಡಿಹೋಗಿದ್ದ ಮಹಿಳೆ
8 ದಿನಗಳ ಹಿಂದೆ 10ನೇ ಬಾರಿಗೆ ಲವರ್ ಜೊತೆ ಎಸ್ಕೇಪ್
ಕರೆತಂದ ಪೊಲೀಸರು, 1 ರಾತ್ರಿ ಗಂಡನ ಮನೆಯಲ್ಲಿ ವಾಸ
ಹೆಂಡತಿ ಮನವೊಲಿಸಲು ಪ್ರಿಯಕರನ ಮನೆಗೆ ಬಂದ ಪತಿ
ತನ್ನ ಮನೆಗೆ ಬರುವಂತೆ ಕೈಮುಗಿದು ಬೇಡಿಕೊಂಡಿದ್ದ ಗಂಡ
ವಿಶಿಷ್ಟ ಪ್ರಸ್ತಾವನೆ, ಇಬ್ಬರ ಜೊತೆಯಲ್ಲಿರೋ ಬಗ್ಗೆ ಪ್ರಸ್ತಾಪ
‘15 ದಿನ ಗಂಡನ ಮನೆಯಲ್ಲಿ, 15 ದಿನ ಪ್ರಿಯಕರನ ಮನೆಯಲ್ಲಿ’
ಗಂಡ ಇದ್ರೂ.. ಪಕ್ಕದ ಗ್ರಾಮ ತಾಂಡಾ ಮೂಲದ ವ್ಯಕ್ತಿಯನ್ನ ಪ್ರೀತಿಸಿತ್ತಿದ್ದಳು.. ಆತನೊಂದಿಗೆ ಕಳೆದೊಂದು ವರ್ಷದಲ್ಲಿ ಒಟ್ಟು 9 ಬಾರಿ ಓಡಿಹೋಗಿದ್ದಾಳೆ.. ಪ್ರತಿ ಬಾರಿಯೂ ಆಕೆಯನ್ನ ಮರಳಿ ಕರೆತರಲಾಗ್ತಿತಾದ್ರೂ, ಎಂಟು ದಿನಗಳ ಹಿಂದೆ ಮತ್ತೆ 10ನೇ ಬಾರಿಗೆ ಓಡಿ ಹೋಗಿದ್ಲು.. ಅಜೀಮ್ ನಗರ ಪೊಲೀಸರು ಮತ್ತೆ ಕರೆತಂದಿದ್ರ, ವಿವಾಹಿತ ಮಹಿಳೆ ಕೇವಲ ಒಂದು ರಾತ್ರಿ ಮಾತ್ರ ತನ್ನ ಗಂಡನ ಮನೆಯಲ್ಲಿದ್ದು, ಮರುದಿನ ಬೆಳಿಗ್ಗೆ ತನ್ನ ಪ್ರಿಯಕರನ ಬಳಿಗೆ ಮರಳಿದ್ದಾಳೆ. ಗಂಡ ತನ್ನ ಹೆಂಡತಿಯ ಮನವೊಲಿಸಲು ಪ್ರಿಯಕರನ ಮನೆಗೆ ತಲುಪಿದ್ದ, ಈ ವೇಳೆ ಅಲ್ಲಿ ರಾಜಿ-ಪಂಚಾಯ್ತಿ ನಡೆದಿದೆ. ಪಂಚಾಯತಿಯಲ್ಲಿ ಗಂಡ ತನ್ನ ಹೆಂಡತಿಯನ್ನ ಮನೆಗೆ ಬರುವಂತೆ ಕೈಮುಗಿದು ಬೇಡಿಕೊಂಡಿದ್ದಾನೆ. ಆದ್ರೆ, ಆ ಮಹಿಳೆ ವಿಶಿಷ್ಟ ಪ್ರಸ್ತಾವನೆ ಮಾಡಿದ್ದು, ನಾನು ಅವರಿಬ್ಬರ ಜೊತೆಗೂ ಇರಲು ಬಯಸುತ್ತೇನೆ. ನಾನು ತಿಂಗಳಿನಲ್ಲಿ 15 ದಿನಗಳು ನನ್ನ ಗಂಡನ ಮನೆಯಲ್ಲಿ ಮತ್ತು 15 ದಿನಗಳು ನನ್ನ ಪ್ರಿಯಕರನ ಮನೆಯಲ್ಲಿ ಕಳೆಯುತ್ತೇನೆ ಎಂದಿದ್ದಾಳೆ.
ಆ ಮಹಿಳೆಯ ಈ ಮಾತು ಕೇಳಿ ಪಂಚಾಯತ್‌ನ ಜನರು ಕೂಡ ಕೆಲ ಕಾಲ ಆಘಾತಕ್ಕೊಳಗಾದ್ರು. ಹೆಂಡತಿಯ ಈ ವರ್ತನೆ ಗಂಡನಿಗೆ ನಿರಾಶೆ ಉಂಟು ಮಾಡಿದ್ದು, ಆಕೆಗೆ ಕೈಮುಗಿದ ಗಂಡ, ನೀನು ನಿನ್ನ ಪ್ರೇಮಿಯೊಂದಿಗೆ ಇರು ಎಂದು ಹೇಳಿ ಬಂದು ಬಿಟ್ಟಿದ್ದಾನೆ. ಅದ್ಹೇನೆ ಇರಲಿ, ಹಳ್ಳಿ ಜನ.. ನಾನು ನಮ್ಮ ಜೀವನದಲ್ಲಿ ಅದೆಷ್ಟೋ ಪ್ರಕರಣ ನೋಡಿದ್ದೀವೆ. ಆದರೆ, ಇಲ್ಲಿಯವರೆಗೆ ಯಾರೂ ಅಂತಹ 50-50 ಸೂತ್ರದ ಬಗ್ಗೆ ನಾವು ಕೇಳಿಲ್ಲ ಅಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.