/newsfirstlive-kannada/media/media_files/2025/09/22/maruthi-bagli-02-2025-09-22-14-17-34.jpg)
ಮಾರುತಿ ಬಾಗ್ಲಿ ಬಳಿ ಆದಾಯ ಮೀರಿದ ಆಸ್ತಿ ಗಳಿಕೆ ಪತ್ತೆ
ಬೆಂಗಳೂರಿನ ಟೌನ್ ಪ್ಲ್ಯಾನಿಂಗ್ ಆಫೀಸರ್ ಮಾರುತಿ ಬಾಗ್ಲಿಯ ಆಕ್ರಮಗಳ ಪಟ್ಟಿ ದೊಡ್ಡದಿದೆ. ಅಕ್ರಮವಾಗಿ ಬಡ್ತಿ ಪಡೆದಿರುವ ಮಾರುತಿ ಬಾಗ್ಲಿ ಅನೇಕ ಆಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಮಾರುತಿ ಬಾಗ್ಲಿ ಮನೆ ಮೇಲೆ ರೇಡ್ ಮಾಡಿದ್ದರು. ಆ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಆದಾಯ ಮೀರಿದ ಆಸ್ತಿ ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿದೆ. ಮಾರುತಿ ಬಾಗ್ಲಿಯ ವಿರುದ್ಧದ ಪ್ರಮುಖ ಆರೋಪಗಳೆಂದರೇ,
ಅಧಿಕಾರಿಗಳ ವರ್ಗಾವಣೆ ದಂಧೆ
ಭೂಉಪಯೋಗ ಬದಲಾವಣೆ ದಂಧೆ
ಮೈಸೂರಿನ ಮುಡಾ ಹಗರಣ
ಕರ್ನಾಟಕ ನಗರಾಭಿವೃದ್ಧಿ ಇಲಾಖೆಯಡಿಯ ಕಾಂಟ್ರಾಕ್ಟರ್‌ಗಳಿಂದ ಹಫ್ತಾ ವಸೂಲಿ ಮಾಡಿದ ಆರೋಪ ಇದೆ. ಕರ್ತವ್ಯ ನಿಷ್ಠ ಅಧಿಕಾರಿಗಳನ್ನು ಮನಸೋ ಇಚ್ಛೆ ವರ್ಗಾವಣೆ ಮಾಡಿಸಿ ಕಿರುಕುಳ ನೀಡಿದ್ದಾನೆ. ನಿರ್ದೇಶಕ ತಿಪ್ಪೇಸ್ವಾಮಿ ಜೊತೆ ಸೇರಿ ಇಲಾಖೆ ಅಧಿಕಾರಿ, ನೌಕರರಿಗೆ ಕಿರುಕುಳದ ಆರೋಪ ಇದೆ. ಮುಡಾ ಹಗರಣದ ವೇಳೆ ಮೈಸೂರಿನಿಂದ ಬೆಂಗಳೂರಿಗೆ ಹಲವಾರು ಫೈಲ್ಸ್​ಗಳನ್ನು ಸಾಗಿಸಿರುವ ಆರೋಪ ಇದೆ. ನೂರಾರು ಕೋಟಿ ಬೇನಾಮಿ ಆಸ್ತಿ ಮಾಡಿರುವ ಬಗ್ಗೆಯೂ ಈತನ ಮೇಲೆ ದೂರು ದಾಖಲಾಗಿದೆ .
ಲೋಕಾಯುಕ್ತ ವರದಿಯಲ್ಲೇನಿದೆ..?
4.31 ಕೋಟಿ ರೂ ಆದಾಯ ಮೀರಿದ ಆಸ್ತಿ ಗಳಿಕೆ!
ಮಾರುತಿ ಬಾಗ್ಲಿ ಆದಾಯಕ್ಕಿಂತ ನಂಬಲಸಾಧ್ಯ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿ ಮಾರುತಿ ಬಾಗ್ಲಿ ಆದಾಯ ಮೀರಿದ ಆಸ್ತಿಯ ಮೌಲ್ಯ 4,72,76,000 ರೂಪಾಯಿ. ಆದಾಯ ಮೀರಿದ ಆಸ್ತಿಯ ಪ್ರಮಾಣ 178.40% ರಷ್ಟಿದೆ. ಇವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರಡಿ ದೂರು ದಾಖಲಿಸಲಾಗಿದೆ . ಸದ್ಯ ಬಾಗ್ಲಿ ಅಕ್ರಮ ಆಸ್ತಿ ಗಳಿಕೆ ಕೇಸ್ ತನಿಖಾ ಹಂತದಲ್ಲಿದೆ. ಇಲ್ಲಿಯವರೆಗೆ ತನಿಖೆ ವೇಳೆಯಲ್ಲಿ ಬಾಗ್ಲಿಯ ಅಕ್ರಮ ಆಸ್ತಿ 4,31,14,650 ರೂಪಾಯಿ ಕಂಡು ಬಂದಿದೆ . ಶೇ. 172.45 ರಷ್ಟು ಅಕ್ರಮ ಆಸ್ತಿ ಗಳಿಸಿರೋದುಬೆಳಕಿಗೆ ಬಂದಿದೆ. ಪ್ರಾಥಮಿಕ ವರದಿಯಲ್ಲೇ ಇಷ್ಟೆಲ್ಲಾ ಅಕ್ರಮ ಕಂಡು ಬಂದಿದೆ. ಬಾಗ್ಲಿಯನ್ನ ಅದೇ ಸ್ಥಾನದಲ್ಲಿ ಮುಂದುವರೆಸಿದ್ರೆ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗಲಿದೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಸಾಕ್ಷಿ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ಆ ಸ್ಥಳದಿಂದ ಬೇರೆಡೆಗೆ ವರ್ಗಾವಣೆ ಮಾಡುವಂತೆ ಲೋಕಾಯುಕ್ತ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಲೋಕಾಯುಕ್ತ ವರದಿ ಬೆನ್ನಲ್ಲೇ ಮಾರುತಿ ಬಾಗ್ಲಿ ವರ್ಗಾವಣೆ ಮಾಡಲಾಗಿದೆ. ಲೋಕಾಯುಕ್ತ ರಿಪೋರ್ಟ್​ ನಿಂದ ಮಾರುತಿ ಬಾಗ್ಲಿಯನ್ನು ಬೇರೆಡೆಗೆ ಎತ್ತಂಗಡಿ ಮಾಡಲಾಗಿದೆ.
ಮಾರುತಿ ಬಾಗ್ಲಿಯನ್ನು ಸದ್ಯ ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಗೆ ವರ್ಗಾವಣೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.