ಕರ್ನಾಟಕದಲ್ಲಿ ಇಂದಿನಿಂದ ನಾಲ್ಕು ದಿನ ಮಳೆಯಾಗುವ ಮನ್ಸೂಚನೆ, ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮಳೆಯಾಗಬಹುದು?

ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಇಂದಿನಿಂದ ನಾಲ್ಕು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಆರೇಂಜ್ ಮತ್ತು ಯೆಲ್ಲೋ ಆಲರ್ಟ್ ನೀಡಲಾಗಿದೆ. ಬಯಲು ಸೀಮೆಯ ಜಿಲ್ಲೆಗಳಲ್ಲೂ ಮಳೆಯಾಗಲಿದೆ.

author-image
Chandramohan
karnataka rain222
Advertisment
  • ಇಂದಿನಿಂದ 4 ದಿನ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಮಳೆ ಆಲರ್ಟ್
  • ಕರಾವಳಿ ಜಿಲ್ಲೆಗಳಿಗೆ ಆರೇಂಜ್, ಯೆಲ್ಲೋ ಆಲರ್ಟ್ ನೀಡಿಕೆ
  • ಬಯಲು ಸೀಮೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಸಾಧಾರಣ, ಭಾರಿ ಮಳೆ ಮುನ್ಸೂಚನೆ

ಕರ್ನಾಟಕ ರಾಜ್ಯದಲ್ಲಿ ಇನ್ನೂ  ನಾಲ್ಕು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.   ರಾಜ್ಯದ ಕರಾವಳಿ  ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.  ಆಗಸ್ಟ್ 5 ಮತ್ತು 6 ರಂದು ದಕ್ಷಿಣ  ಕನ್ನಡ, ಉಡುಪಿ ಜಿಲ್ಲೆಗೆ ಯೆಲ್ಲೆ ಆಲರ್ಟ್ ನೀಡಲಾಗಿದೆ. ಯೆಲ್ಲೋ ಆಲರ್ಟ್ ಅಂದರೇ, ಸಾಧಾರಣ ಮಳೆಯಾಗುವ ಆಲರ್ಟ್ ಎಂದರ್ಥ.  ಇನ್ನೂ ಆಗಸ್ಟ್ 7 ಮತ್ತು 8 ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆರೇಂಜ್ ಆಲರ್ಟ್ ನೀಡಲಾಗಿದೆ.    ಆರೇಂಜ್ ಆಲರ್ಟ್ ಅಂದರೇ, 24 ಗಂಟೆ ಅವಧಿಯಲ್ಲಿ 115 ಮಿಲಿಮೀಟರ್ ನಿಂದ 204 ಮಿಲಿಮೀಟರ್ ವರೆಗೂ ಭಾರಿ ಮಳೆಯಾಗುವ ಮುನ್ಸೂಚನೆ ಎಂದರ್ಥ. 
ಉತ್ತರ ಕನ್ನಡ ಜಿಲ್ಲೆಗೆ ಆಗಸ್ಟ್ 5 ರಿಂದ ಆಗಸ್ಟ್ 8ರವರೆಗೆ ನಾಲ್ಕು ದಿನವೂ ಯೆಲ್ಲೋ ಆಲರ್ಟ್ ನೀಡಲಾಗಿದೆ. ಯೆಲ್ಲೋ ಆಲರ್ಟ್ ದಿನಗಳಂದು ಸಾಧಾರಣ ಮಳೆಯಾಗಲಿದೆ. 
ಆಗಸ್ಟ್ 5 ರಂದು ಬಯಲು ಸೀಮೆಯ ಜಿಲ್ಲೆಗಳಾದ ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗೆ ಆರೇಂಜ್ ಆಲರ್ಟ್ ನೀಡಲಾಗಿದೆ. ರಾಮನಗರ, ಮಂಡ್ಯ, ಹಾಸನ, ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಆಲರ್ಟ್ ನೀಡಲಾಗಿದೆ. 
ಆಗಸ್ಟ್ 6 ರಂದು ಹಾಸನ, ಮಂಡ್ಯ, ಮೈಸೂರು ಜಿಲ್ಲೆಗೆ ಆರೇಂಜ್ ಆಲರ್ಟ್ ನೀಡಲಾಗಿದೆ. ತುಮಕೂರು, ಕೊಡಗು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ  ಜಿಲ್ಲೆಗೆ ಯೆಲ್ಲೋ ಆಲರ್ಟ್ ನೀಡಲಾಗಿದೆ. 
ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಗುಡುಗು ಸಿಡಿಲು ಮಿಂಚಿನೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. 
ಇನ್ನೂ ಉತ್ತರ ಒಳನಾಡಿನ ಜಿಲ್ಲೆಗಳಿಗೂ ಆಗಸ್ಟ್ 5 ರಿಂದ ಆಗಸ್ಟ್ 8ರವರೆಗೆ  ಯೆಲ್ಲೋ ಆಲರ್ಟ್ ನೀಡಲಾಗಿದೆ. 

ಕಳೆದ 24 ಗಂಟೆ ಅವಧಿಯಲ್ಲಿ ಗುಬ್ಬಿ ತಾಲ್ಲೂಕಿನಲ್ಲಿ 158 ಮಿ.ಮೀ. ಮಳೆ

ಇನ್ನೂ ಕಳೆದ 24 ಗಂಟೆ ಅವಧಿಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಅತ್ಯಧಿಕ ಮಳೆಯಾಗಿದೆ. ಶಿವಪುರ ಗ್ರಾಮದಲ್ಲಿ 158 ಮಿ.ಮೀಟರ್ ನಷ್ಟು ಭಾರಿ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ. ಆಗಸ್ಟ್ 4 ಬೆಳಿಗ್ಗೆ 8.30 ರಿಂದ ಆಗಸ್ಟ್ 5ರ ಬೆಳಿಗ್ಗೆ 8.30 ರವರೆಗಿನ ಗಂಟೆಯನ್ನು 24 ಗಂಟೆ  ಎಂದು ಹವಾಮಾನ ಇಲಾಖೆ ಪರಿಗಣಿಸುತ್ತೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KARNATAKA RAIN, RAIN, HEAVY RAIN, KARNATAKA FLOOD, YELLOW ALER, ORANGE ALERT, MET FORECAST, COASTAL KARNATAKA, INTERIOR KARNATAKA, NORTH KARNATAKA
Advertisment