Advertisment

RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋದಿ ಭಾಗಿ: RSS ನಿಷೇಧಿಸಿದ್ದರೂ ಕಹಿ ಭಾವನೆ ಹೊಂದಿಲ್ಲ ಎಂದ ಮೋದಿ

ಭಾರತದಲ್ಲಿ ಹಿಂದೂಗಳ ಸಂಘಟನೆ, ಏಳಿಗೆಯ ಉದ್ದೇಶದಿಂದ ಆರ್‌ಎಸ್ಎಸ್ 1925 ರಲ್ಲಿ ಜನ್ಮತಾಳಿತು. ಈಗ ಆರ್‌ಎಸ್‌ಎಸ್ ಗೆ ಶತಮಾನೋತ್ಸವದ ಸಂಭ್ರಮ. ದೆಹಲಿ, ನಾಗಪುರ ಸೇರಿದಂತೆ ದೇಶದೆಲ್ಲೆಡೆ ಶತಮಾನೋತ್ಸವ ಆಚರಿಸಲಾಗುತ್ತಿದೆ. ದೆಹಲಿಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ.

author-image
Chandramohan
RSS CENTENARY PROGRAMME

RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋದಿ ಭಾಗಿ

Advertisment
  • RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋದಿ ಭಾಗಿ
  • RSS ಬ್ಯಾನ್ ಮಾಡಿದ್ದರೂ, ಕಹಿ ಭಾವನೆ ಹೊಂದಿಲ್ಲ ಎಂದ ಮೋದಿ
  • ಆರ್‌ಎಸ್‌ಎಸ್ ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಡಿದೆ-ಮೋದಿ

ಬಿಜೆಪಿಯ ಮಾತೃ ಸಂಘಟನೆ ಆರ್‌.ಎಸ್‌.ಎಸ್‌.ಗೆ  ಈಗ ಶತಮಾನೋತ್ಸವದ ಸಂಭ್ರಮ. ದೇಶಾದ್ಯಂತ ಇಂದು ಆರ್‌.ಎಸ್.ಎಸ್. ಶತಮಾನೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಾತಂತ್ರ್ಯ ಪೂರ್ವದಲ್ಲಿ 1925 ರಲ್ಲಿ ಆರ್‌ಎಸ್ಎಸ್ ಅರ್ಥಾತ್‌ ರಾಷ್ಟ್ರೀಯ ಸ್ವಯಂಸೇವಕ ಸಂಘ ಆರಂಭವಾಯಿತು. ಹಿಂದೂಗಳ ಸಂಘಟನೆ, ಏಳಿಗೆಯ ಉದ್ದೇಶ, ಗುರಿಯೊಂದಿಗೆ ಆರ್‌.ಎಸ್‌.ಎಸ್.ಆರಂಭವಾಯಿತು. ಅನೇಕ ಏಳುಬೀಳುಗಳನ್ನು ಕಂಡಿರುವ ಆರ್‌.ಎಸ್‌.ಎಸ್. ಈಗ ದೇಶದಲ್ಲಿ ಅತ್ಯಂತ ಪ್ರಭಾವಶಾಲಿ ಸಂಘಟನೆಯಾಗಿ ಬೆಳೆದಿದೆ. ದೇಶದಲ್ಲಿ ಕೋಟ್ಯಾಂತರ ಆರ್‌.ಎಸ್‌.ಎಸ್.ಸ್ವಯಂಸೇವಕರಿದ್ದಾರೆ. ದೇಶದ ಪ್ರಧಾನಿ, ಉಪರಾಷ್ಟ್ರಪತಿ, ಕೇಂದ್ರ ಗೃಹ ಸಚಿವ ಸೇರಿದಂತೆ ಕ್ಯಾಬಿನೆಟ್‌ನ ಬಹುತೇಕ ಸಚಿವರು ಆರ್‌.ಎಸ್‌.ಎಸ್‌. ಸ್ವಯಂಸೇವಕರು ಆಗಿದ್ದವರು. ಆರ್‌.ಎಸ್‌.ಎಸ್. ಪ್ರಚಾರಕ್‌ ಆಗಿದ್ದ ಮೋದಿಯೇ ಈಗ ದೇಶದ ಪ್ರಧಾನಮಂತ್ರಿ.  ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ಆರ್‌ಎಸ್ಎಸ್ ಶಾಖೆಗಳ ಸಂಖ್ಯೆ ಏರಿಕೆಯಾಗಿದೆ. ಆರ್‌.ಎಸ್‌.ಎಸ್‌. ಸ್ವಯಂಸೇವಕರಾಗಲು ಜನರು ಮುಗಿಬೀಳುತ್ತಿದ್ದಾರೆ. 
ಭಾರತ ಚೀನಾದ ವಿರುದ್ಧ ಯುದ್ದದಲ್ಲಿ ಭಾಗಿಯಾದಾಗ, ಆರ್‌.ಎಸ್‌.ಎಸ್. ಸ್ವಯಂ ಸೇವಕರು ಗಡಿಗೆ ಹೋಗಿ, ಭಾರತೀಯ ಸೈನಿಕರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ಸ್ವಯಂಸೇವಕರಿಗೆ  1963ರ ದೆಹಲಿಯ ರಾಜಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ ನಲ್ಲಿ  ಭಾಗಿಯಾಗಲು ನೆಹರು ಸರ್ಕಾರವೇ ಅವಕಾಶ ನೀಡಿತ್ತು. ಯುದ್ಧ, ಭೂಕಂಪ, ಪ್ರವಾಹದಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್‌.ಎಸ್.ಎಸ್. ಸ್ವಯಂ ಸೇವಕರು ದೇಶದ ಜನರ ರಕ್ಷಣೆಗೆ, ನೆರವಿಗೆ ಧಾವಿಸಿದ್ದಾರೆ.  ಇಂಥ ಆರ್‌ಎಸ್ಎಸ್ ಅನ್ನು ದೇಶದಲ್ಲಿ ಇದುವರೆಗೂ 3 ಭಾರಿ ಬ್ಯಾನ್ ಕೂಡ ಮಾಡಲಾಗಿತ್ತು. ಮತ್ತೆ ಫೀನಿಕ್ಸ್ ಪಕ್ಷಿಯಂತೆ ಆರ್‌ಎಸ್ಎಸ್‌ ಎದ್ದು ಬಂದಿದೆ.  ಮಹಾತ್ಮಗಾಂಧೀಜಿ ಹತ್ಯೆ ಬಳಿಕ, ತುರ್ತು ಪರಿಸ್ಥಿತಿ ವೇಳೆ ಹಾಗೂ ಬಾಬ್ರಿ ಮಸೀದಿ ಧ್ವಂಸದ ಬಳಿಕ ದೇಶದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಲಾಗಿತ್ತು. ಆರ್‌ಎಸ್‌ಎಸ್ ಒಂದು ಸಾಂಸ್ಕೃತಿಕ ಸಂಘಟನೆ.  ಆದರೇ, ರಿಜಿಸ್ಟರ್ ಸಂಘಟನೆಯಾಗಿಲ್ಲ. ಆರ್‌ಎಸ್‌ಎಸ್ ನಿಂದ ಜನ್ಮ ತಾಳೆದ ರಾಜಕೀಯ ಸಂಘಟನೆಯೇ ಭಾರತೀಯ ಜನತಾ ಪಕ್ಷ. ಬಿಜೆಪಿಗೂ ಮೊದಲು ಜನಸಂಘ 1947 ರಿಂದಲೂ ಇತ್ತು. ಮೋರಾರ್ಜಿ ದೇಸಾಯಿ ಸರ್ಕಾರದ ಅವಧಿಯಲ್ಲಿ  ಸರ್ಕಾರದ ಸಚಿವರು ಆರ್‌ಎಸ್‌ಎಸ್ ಸದಸ್ಯರೂ ಆಗಿದ್ದಾರೆ. ಜನಸಂಘದ ಸದಸ್ಯರೂ ಆಗಿದ್ದಾರೆ.  ಈ ದ್ವಿಸದಸ್ಯದ ಬದಲು ಯಾವುದಾದರೊಂದು ಸದಸ್ಯತ್ವ ಪಡೆಯಬೇಕೆಂಬ ಒತ್ತಾಯ ಕೇಳಿ ಬಂತು. ಆಗ ಸರ್ಕಾರದಲ್ಲಿ ಸಚಿವರಾಗಿದ್ದವರು, ತಮಗೆ ಆರ್‌ಎಸ್‌ಎಸ್ ಸದಸ್ಯತ್ವವೇ ಮುಖ್ಯ ಎಂದು ಸರ್ಕಾರದಿಂದ ಹೊರ ಬಂದರು. ವಾಜಪೇಯಿ, ಅಡ್ವಾಣಿ ಸೇರಿದಂತೆ ಅನೇಕರು 1980ರಲ್ಲಿ ಬಿಜೆಪಿ ಸ್ಥಾಪಿಸಿದ್ದರು. ಅದೇ ಈಗ ದೇಶದಲ್ಲಿ ಬಲಿಷ್ಠ ಪಕ್ಷವಾಗಿ ಬೆಳೆದು ನಿಂತಿದೆ. 

Advertisment

ಈಗ ಆರ್‌.ಎಸ್‌.ಎಸ್.ಗೆ ಶತಮಾನೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ಒಂದು ಕಾಲದಲ್ಲಿ ಆರ್‌ಎಸ್‌ಎಸ್  ಪ್ರಚಾರಕ್ ಆಗಿದ್ದ ನರೇಂದ್ರ ಮೋದಿ  ಭಾಗವಹಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. 
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಅಥವಾ ನಿಷೇಧಿಸುವ ಪ್ರಯತ್ನಗಳನ್ನು ಎದುರಿಸುತ್ತಿದ್ದರೂ ಸಹ, ಸಂಘಟನೆಯು ಎಂದಿಗೂ ಕಹಿ ಭಾವನೆಯನ್ನು ಹೊಂದಿರಲಿಲ್ಲ ಎಂದು ಹೇಳಿದರು.

"ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಪ್ರಯತ್ನಗಳು, ಅವರನ್ನು ನಿಷೇಧಿಸುವ ಪ್ರಯತ್ನಗಳು ಮತ್ತು ಇತರ ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ, ಅದು ಎಂದಿಗೂ ಕಹಿ ಭಾವನೆಯನ್ನು ಹೊಂದಿರಲಿಲ್ಲ, ಏಕೆಂದರೆ ನಾವು ಒಳ್ಳೆಯದು ಮತ್ತು ಕೆಟ್ಟದ್ದನ್ನು ಸ್ವೀಕರಿಸುವ ಸಮಾಜದ ಭಾಗವಾಗಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು.

"ಸಂಘವು ಬ್ರಿಟಿಷರ ದೌರ್ಜನ್ಯಗಳ ವಿರುದ್ಧ ಹೋರಾಡಿದೆ. ಅವರ ಏಕೈಕ ಹಿತಾಸಕ್ತಿ ಯಾವಾಗಲೂ ರಾಷ್ಟ್ರದ ಮೇಲಿನ ಪ್ರೀತಿ" ಎಂದು ಅವರು ಸಂಘದ ಐತಿಹಾಸಿಕ ಕೊಡುಗೆಗಳನ್ನು ಮೋದಿ ಪ್ರಸ್ತಾಪಿಸಿದ್ದರು.

Advertisment

"ಆರ್‌ಎಸ್‌ಎಸ್‌ನ ಚೈತನ್ಯವನ್ನು ಹತ್ತಿಕ್ಕಲು ಮತ್ತು ಅವರ ವಿರುದ್ಧ ಆರೋಪಗಳನ್ನು ಹೊರಿಸಲು ಅನೇಕ ಪ್ರಯತ್ನಗಳು ನಡೆದಿವೆ. ಸುಳ್ಳು ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ. ಆದರೂ, ಆರ್‌ಎಸ್‌ಎಸ್ ಎಂದಿಗೂ ಸೇಡಿನ ಉದ್ದೇಶದಿಂದ ಹೋರಾಡಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

ಆರ್‌ಎಸ್‌ಎಸ್ ಮುಖವಾಣಿ ದಿ ಆರ್ಗನೈಸರ್ ಪ್ರಕಾರ, 1948 ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ, ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ನಂತರ ಎರಡನೇ ಸರಸಂಘಚಾಲಕ್ ಆಗಿ ನೇಮಕಗೊಂಡ ಎಂ.ಎಸ್. ಗೋಲ್ವಾಲ್ಕರ್ ಅವರನ್ನು ಫೆಬ್ರವರಿ 1 ರ ಮಧ್ಯರಾತ್ರಿ ಬಂಧಿಸಲಾಯಿತು .  ಫೆಬ್ರವರಿ 4 ರಂದು ಸಂಘಟನೆಯನ್ನು ನಿಷೇಧಿಸಲಾಯಿತು. ಸ್ವಯಂಸೇವಕರಿಂದ ಗುರೂಜಿ ಎಂದೂ ಪೂಜಿಸಲ್ಪಡುವ ಹೆಡ್ಗೆವಾರ್ 1940 ರಲ್ಲಿ ನಿಧನರಾದರು, ನಂತರ ಶ್ರೀ ಗುರೂಜಿ ಎಂದೂ ಕರೆಯಲ್ಪಡುವ ಗೋಲ್ವಾಲ್ಕರ್ ನಾಯಕತ್ವ ವಹಿಸಿಕೊಂಡರು.

"ಗುರೂಜಿಯನ್ನು ಸುಳ್ಳು ಆರೋಪಗಳ ಮೇಲೆ ಜೈಲಿಗೆ ಹಾಕಲಾಯಿತು ಮತ್ತು ಜೈಲು ನಲ್ಲಿ ಕಂಬಿಗಳ ಹಿಂದೆ ಚಿತ್ರಹಿಂಸೆಯನ್ನೂ ನೀಡಿದ್ದರು. ಆದರೂ, ಅವರು ಬಿಡುಗಡೆಯಾದಾಗ, ಒಬ್ಬ ವ್ಯಕ್ತಿಯು ಆಕಸ್ಮಿಕವಾಗಿ ನಾಲಿಗೆ ಕಚ್ಚಿದಾಗ ತನ್ನ ಹಲ್ಲುಗಳನ್ನು ಕೀಳುವುದಿಲ್ಲ, ಹಾಗೆಯೇ ಒಬ್ಬ ವ್ಯಕ್ತಿಯು ತನ್ನ ಸ್ವಂತ ಸಮಾಜದ ವಿರುದ್ಧ ತಿರುಗಿ ಬೀಳಬಾರದು ಎಂದು ಎಲ್ಲರಿಗೂ ನೆನಪಿಸಿದರು" ಎಂದು ಪ್ರಧಾನಿ ಮೋದಿ ಆರ್‌ಎಸ್‌ಎಸ್ ನಾಯಕ  ಎಂ.ಎಸ್. ಗೋಲ್ವಾಲ್ಕರ್ ರನ್ನು  ನೆನಪಿಸಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
MODI AT RSS CENTENARY CELEBRATION
Advertisment
Advertisment
Advertisment