/newsfirstlive-kannada/media/media_files/2025/09/09/haveri-cows03-2025-09-09-14-30-44.jpg)
ಗ್ರಾಮದ ಮೂಕಪ್ಪಸ್ವಾಮಿ ಎತ್ತುಗಳು
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಮಲಗುಂದ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಗ್ರಾಮದ ಹೊರವಲಯದಲ್ಲಿ ಕೋಣಕಲ್ಲು ಭರಮಪ್ಪ ಕಲ್ಲು ಇತ್ತು. ಅದರೆ ಕಲ್ಲು ಅಡಿಯಲ್ಲಿ ಸಾಕಷ್ಟು ನಿಧಿ ಇದೆ ಅನ್ನೋ ಸುದ್ದಿ ಇರೋ ಹಿನ್ನೆಲೆ ನಿಧಿಗಳ್ಳರು ಕೋಣಕಲ್ಲು ಭರಮ್ಮಪ್ಪ ದೇವರ ಕಲ್ಲು ಅಗೆದು ಹಾಕಿದ್ದರು. ಈಗ ಗ್ರಾಮಕ್ಕೆ ಬಂದ ವೃಷಭ ರೂಪಿ ಶನೇಶ್ವರ ಮೂಕಪ್ಪ ಸ್ವಾಮೀಗಳು ನಿಧಿಗಳ್ಳರನ್ನ ಪತ್ತೆ ಮಾಡಿದ್ದಾರೆ. ಇದೊಂದು ಮೂಕಪ್ಪಸ್ವಾಮಿಗಳ ಪವಾಡ ಅಂತಿದ್ದಾರೆ ಗ್ರಾಮದ ಜನರು. ಮೂಕಪ್ಪ ಸ್ವಾಮಿಗಳು ಅಂದರೇ, ಎತ್ತುಗಳು.
ಸತ್ಯ ಒಪ್ಪಿಕೊಂಡರು ನಿಧಿಗಳ್ಳರು!
ಮೂಕಪ್ಪಸ್ವಾಮಿಗಳು ನಿಧಿಗಳ್ಳರ ಮನೆಯನ್ನ ತೋರಿಸಿ ಪವಾಡ ಸೃಷ್ಟಿ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಇರೋ ಕೋಣಕಲ್ಲ ಭರಮಪ್ಪ ದೇವರ ಪುರಾತನ ಕಲ್ಲು ಅನ್ನು ಅಗೆದು ನಿಧಿ ಹುಡುಕಾಟ ಮಾಡಿದ್ದರು. ಶ್ಯಾಡಗುಪ್ಪಿ ಮೂಕಪ್ಪಸ್ವಾಮಿ ಬಳಿ ಗ್ರಾಮದ ಜನರು ಕಳ್ಳರನ್ನ ಪತ್ತೆ ಮಾಡುವಂತೆ ಮನವಿ ಮಾಡಿದ್ದರು. ವೃಷಭ ರೂಪಿ ಮೂಕಪ್ಪಸ್ವಾಮಿ ನಿಧಿ ಆಸೆಗಾಗಿ ಭೂಮಿ ಅಗೆದು ನಿಧಿಗಳ್ಳರ ಮನೆಯನ್ನ ಪತ್ತೆ ಮಾಡಿದೆ. ಗ್ರಾಮದ ರೇಣಕಾಸ್ವಾಮಿ ಹಿರೇಮಠ ಮತ್ತು ಮೌಲಾಲಿ ಮುಜಾವರ್ ಎಂಬುವರ ಮನೆಯನ್ನ ಮೂಕಪ್ಪಸ್ವಾಮಿ (ಎತ್ತುಗಳು) ತೋರಿಸಿವೆ. ಕೋಣಕಲ್ಲು ಭರಮಪ್ಪ ದೇವರ ಕಲ್ಲಿನಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದವರ ಮನೆಯನ್ನು ಮೂಕಪ್ಪಸ್ವಾಮಿ ತೋರಿಸಿದೆ. ನಿಧಿಗಳ್ಳತನ ಮಾಡಿದ ರೇಣಕಾಸ್ವಾಮಿ ಹಾಗೂ ಮೌಲಾಲಿ ಇಬ್ಬರು ನಿಧಿಗಳ್ಳತನ ಮಾಡಲು ಹೋಗಿದ್ದು ನಿಜ ಎಂದು ಮೂಕಪ್ಪಸ್ವಾಮಿ ಮುಂದೆ ಒಪ್ಪಿಕೊಂಡಿದ್ದಾರೆ.
ನಿಧಿ ಅಗೆದ ನಂತರ ಗ್ರಾಮದಲ್ಲಿ ಮೂರು ಸಾವು! ಸಮಸ್ಯೆಗಳ ಸರಮಾಲೆ!
ಕೋಣಕಲ್ಲು ಭರಮಪ್ಪ ಕಲ್ಲು ಅಗೆದ ನಂತರ ಗ್ರಾಮದಲ್ಲಿ ಸಮಸ್ಯೆ ಹೆಚ್ಚಾಗಿತ್ತು. ಗ್ರಾಮದಲ್ಲಿ ಮೂರಕ್ಕೂ ಅಧಿಕ ಯುವಕರು ಸಾವನ್ನಪ್ಪಿದ್ದರು. ಜೊತೆಗೆ ದೇವರಿಗೆ ದಿಗ್ಭಂಧನ ಹಾಕಿದ್ದರು. ಗ್ರಾಮದ ಜನರು ಮೂಕಪ್ಪಸ್ವಾಮಿ ಬಳಿ ಮನವಿ ಮಾಡಿಕೊಂಡರು. ಊರಿಗೆ ಶಾಂತಿ ಹೋಮ ಕಾರ್ಯಕ್ರಮಕ್ಕೆ ಬಂದಾಗ ನಿಧಿಗಳ್ಳರ ಪತ್ತೆ ಮಾಡುವಂತೆ ಪಟ್ಟು ಹಿಡಿದಿದ್ದರು. ಮೂಕಪ್ಪಸ್ವಾಮಿ ಸಹಾಯದಿಂದ ನಿಧಿಗಳ್ಳರನ್ನ ಹಿಡಿದು ಗ್ರಾಮಸ್ಥರು ನಿಧಿಗಳ್ಳರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಐದು ಜನರ ಮೇಲೆ ದೂರು ದಾಖಲಾಗಿದ್ದು, ರೇಣಕಾಸ್ವಾಮಿ ಹಿರೇಮಠ, ಮೌಲಾಲಿ ಮುಜಾವರ್, ಆನಂದ ಊರಣಕರ, ಪ್ರವೀಣ ಸಾಲಿಮಠ, ಮಹಾಂತೇಶ ಬೆಲ್ಲದ ಹಾಗೂ ನಿರಂಜನ ಪೂಜಾರ ಆರೋಪಿಗಳು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ