Advertisment

10 ವರ್ಷದ ಮಗಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ತಾಯಿ: ಅಂಥದ್ದೇನಾಗಿತ್ತು?

ಶಿವಮೊಗ್ಗದಲ್ಲಿ ತಾಯಿಯೊಬ್ಬಳು ತನ್ನ 10 ವರ್ಷದ ಮಗಳನ್ನು ಕೊಂದು ತಾನು ನೇಣಿಗೆ ಕೊರಳೊಡ್ಡಿದ್ದಾಳೆ. ಪತಿ ರಾಮಣ್ಣ ಮನೆಗೆ ಬಂದಾಗ ಬಾಗಿಲು ತೆಗೆದಿಲ್ಲ. ಬಾಗಿಲು ಒಡೆದು ಒಳ ಹೋಗಿ ನೋಡಿದಾಗ, ತಾಯಿ, ಮಗಳು ಇಬ್ಬರು ಸಾವನ್ನಪ್ಪಿದ್ದರು. ಅಂಥದ್ದೇನಾಗಿತ್ತು ಅಂತ ಅಂದರೇ, ಈ ಸ್ಟೋರಿ ಓದಿ.

author-image
Chandramohan
SHIVAMOGGA SUICIDE02

ತಾಯಿ ಶೃತಿ ಹಾಗೂ ಮಗಳು ಪೂರ್ವಿಕಾ

Advertisment
  • ಶಿವಮೊಗ್ಗದಲ್ಲೊಂದು ದಾರುಣ ಘಟನೆ
  • ಮಗಳನ್ನು ಕೊಂದು ತಾನು ನೇಣಿಗೆ ಶರಣಾದ ತಾಯಿ ಶೃತಿ
  • ತಾಯಿ ಶೃತಿಗೆ ಮಾನಸಿಕ ಅಸ್ವಸ್ಥತೆ ಇತ್ತು ಎಂದ ಸ್ಥಳೀಯರು

10 ವರ್ಷದ ಮಗಳನ್ನು ಕೊಂದು ನೇಣಿಗೆ ಕೊರಳೊಡ್ಡಿದ ತಾಯಿ: ಅಂಥದ್ದೇನಾಗಿತ್ತು? 
ಕಣ್ಣಿಗೆ ಕಾಣೋ ದೇವ್ರು ಅಂದ್ರೆ ಅಮ್ಮಾ.. ಆದ್ರೆ, ಇದು ಕಲಿಯುಗ ಅಲ್ವಾ? ಹೆತ್ತವಳೇ ಕೊಲೆಗಾತಿ ಆದ್ರೂ ಏನ್ ಆಶ್ಚರ್ಯ ಇಲ್ಲ.. ಈ ಕಥೆಯಲ್ಲೂ ಆಗಿದ್ದೂ ಅದೇ.. ಅಮ್ಮ ಅಂದ ಮುದ್ದು ಮಗಳನ್ನ ಕೊಂದು ಇಲ್ಲೊಬ್ಬಳು ತಾಯಿ ಪಾಪಿ ಪಟ್ಟ ಪಡೆದುಕೊಂಡಿದ್ದಾಳೆ. ಮಗಳ ನೆತ್ತರ ಹರಿಸಿ ಆಕೆ ಹೆಣದ ಮೇಲೆಯೇ ತಾನೂ ಸಾವಿನ ಮನೆ ಸೇರಿಕೊಂಡಿದ್ದಾಳೆ. 

Advertisment

ದುರಂತ ಕಣ್ರೀ.. ಇದು ಮಹಾ ದುರಂತ.. ಇಲ್ಲಿ ನಡೆದಿರೋದು ನಿಜಕ್ಕೂ ಘೋರ ದುರಂತ.. ಅಕಟಕಟಕ.. ಈ ದೃಶ್ಯಗಳನ್ನ ಬರೀ ಗಣ್ಣಲ್ಲಿ ನೋಡೋಕೆ ಸಾಧ್ಯವೇ ಇಲ್ಲ ಬಿಡಿ.. ಇದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನರ್ಸ್​ ಕ್ವಾರ್ಟಸ್.. ಇಲ್ಲೇ ಕಂಡು ಕೇಳರಿಯದ ದುರಂತವೊಂದು ನಡೆದೋಗಿದೆ. 
 ಜನ್ಮ ಕೊಟ್ಟವಳೇ ಕೊಂದಳು.. ತಾನೂ ಆತ್ಮಹತ್ಯೆ ಮಾಡ್ಕೊಂಡ್ಳು!
ಮಗಳ ತಲೆಗೆ ಚಚ್ಚಿ.. ನೇಣಿಗೆ ಶರಣಾದಳು ಈ ಮಹಾತಾಯಿ..!
ಹೌದು.. 38 ವರ್ಷದ ಈ ಶೃತಿ.. ಇಲ್ಲಿ ಕಾಣ್ತಿದ್ದಾಳಲ್ಲ.. ಈ ಮುದ್ದು ಮುಖದ ಚೆಲುವೆ.. 10 ವರ್ಷದ ಪೂರ್ವಿಕಾಳ ತಾಯಿ.. ವಿಪರ್ಯಾಸ ಏನಂದ್ರೆ, ಈಗ ಇಬ್ಬರೂ ಬದುಕಿಲ್ಲ.. ಈ ಪಾಪಿ ತಾಯಿಯೇ ಮಗಳನ್ನ ಚೆಚ್ಚಿ.. ಚೆಚ್ಚಿ ಕೊಂದು.. ಅದೇ ಹೆಣದ ಮೇಲೆ ಸೂಸೈಡ್ ಮಾಡ್ಕೊಂಡು ಆಕೆಯೂ ಈ ಜಗತ್ತು ಬಿಟ್ಟು ಬಾರದೂರಿಗೆ ಪಯಣಿಸಿದ್ದಾಳೆ.. 
ಮಗಳ ಕೊಲೆ.. ತಾಯಿ ಸೂಸೈಡ್!
ರಾಮಣ್ಣ ಹಾಗೂ ಶೃತಿ.. ಇಬ್ಬರೂ ಗಂಡ - ಹೆಂಡತಿ
10 ವರ್ಷದ ಪೂರ್ವಿಕಾಳೇ ಈ ದಂಪತಿಯ ಮಗಳು
ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ ರಾಮಣ್ಣ
ನೈಟ್ ಶಿಫ್ಟ್​ ಕಾರಣ, ರಾಮಣ್ಣ ಮನೆಗೆ ಬಂದಿರಲಿಲ್ಲ
ಬೆಳಗ್ಗೆ ಮನೆಗೆ ಬಂದಾಗ ಯಾರೂ ಬಾಗಿಲು ತೆಗೆದಿಲ್ಲ
ಗಾಬರಿಗೊಂಡು ಮನೆ ಕಿಟಿಕಿಯಲ್ಲಿ ನೋಡಿದಾಗ ಶಾಕ್
ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಪ್ರವೇಶ
ರಾಮಣ್ಣ ಹಾಗೂ ಶೃತಿ.. ಇಬ್ಬರೂ ಗಂಡ ಹೆಂಡತಿ.. ಈ ದಂಪತಿಯ ಮಗಳೇ ಈ 10 ವರ್ಷದ ಪೂರ್ವಿಕಾ.. ಮೆಗ್ಗಾನ್ ಆಸ್ಪತ್ರೆಯಲ್ಲಿ ರಾಮಣ್ಣ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ನೈಟ್ ಶಿಫ್ಟ್​ ಇದ್ದಿದ್ದರಿಂದ ರಾತ್ರಿ ಅವ್ರು ಮನೆಯಲ್ಲಿ ಇರ್ಲಿಲ್ಲ.. ಬೆಳಗ್ಗೆ ಮನೆಗೆ ಬಂದಾಗ ಯಾರೂ ಬಾಗಿಲು ತೆಗೆದಿಲ್ಲ.. ಈ ವೇಳೆ ಗಾಬರಿಗೊಂಡ ರಾಮಣ್ಣ, ಕಿಟಕಿ ತೆಗೆದು ನೋಡಿದಾಗ ಅಕ್ಷರಷಃ ಶಾಕ್ ಆಗಿದ್ದಾರೆ. ಸ್ಥಳೀಯರ ಸಹಾಯದಿಂದ ರಾಮಣ್ಣ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. 

ಆಗ ಕಂಡಿದ್ದು ನಿಜಕ್ಕೂ ಘೋರ ದೃಶ್ಯಗಳು.. ಪೂರ್ವಿಕಾ ತಲೆ ಹೊಡೆದ ಸ್ಥಿತಿಯಲ್ಲಿ ಮೃತದೇಹ ಸಿಕ್ರೆ.. ಅದೇ ಮೃತದೇಹದ ಮೇಲೆಯೇ ಶೃತಿ ಸೂಸೈಡ್ ಮಾಡ್ಕೊಂಡಿದ್ರು.. ಸದ್ಯ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.. 

ಇನ್ನು, ಸ್ಥಳೀಯರ ಮಾಹಿತಿ ಪ್ರಕಾರ, ಶೃತಿ ಮಾನಸಿಕ ಅಸ್ವಸ್ಥೆಯಾಗಿದ್ದರಂತೆ. ಹೀಗಾಗಿ ನಿತ್ಯ ಗಲಾಟೆ ಮಾಡ್ತಿದ್ರು.. ನಿನ್ನೆಯೂ ಆಕೆ ಗಲಾಟೆ ಮಾಡಿದ್ದಾಳೆ.. ಆ ವೇಳೆ ಈ ರೀತಿ ದುರಂತ ನಡೆದು ಹೋಗಿದೆ ಅನ್ನೋದು ಅವರ ಮಾತು.. 

ಈ ಘಟನೆ ನಿಜಕ್ಕೂ ಮಹಾದುರಂತವೇ ಸರಿ.. ಹೆತ್ತ ತಾಯಿಯೊಬ್ಬಳು, ತನ್ನ ಕರುಳ ಬಳ್ಳಿಗೆ ಕೊಳ್ಳಿ ಇಡ್ತಾಳೆ ಅಂದ್ರೆ.. ನಿಜಕ್ಕೂ ದುರಂತ.. ಏನೇ ಹೇಳಿ.. ಎಲ್ಲದ್ದಕ್ಕೂ ಸಾವೇ ಪರಿಹಾರ ಅಲ್ಲ.. ಜನ ಹೇಳೋ ಪ್ರಕಾರ ಆಕೆಗೆ ಮಾನಸಿಕ ಸ್ಥಿತಿ ಸರಿ ಇರ್ಲಿಲ್ಲವಂತೆ.. ಈ ಮಧ್ಯೆ ಏನೂ ಅರಿಯದ ಆ ಪುಟ್ಟ ಕಂದನ ಸಾವು ನ್ಯಾಯಾನಾ ಹೇಳಿ? 

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Mother kills daughter then suicide
Advertisment
Advertisment
Advertisment