Advertisment

ಗೌತಮ್ ಅದಾನಿ ಹಿಂದಿಕ್ಕಿ ಮತ್ತೆ ದೇಶದ ನಂಬರ್ ಒನ್ ಶ್ರೀಮಂತ ಸ್ಥಾನಕ್ಕೇರಿದ ಮುಖೇಶ್ ಅಂಬಾನಿ

ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿ-2025 ರಲ್ಲಿ ಮುಖೇಶ್ ಅಂಬಾನಿ ಮತ್ತೊಮ್ಮೆ ಭಾರತದ ನಂಬರ್ ಒನ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಗೌತಮ್ ಅದಾನಿ 2ನೇ ಸ್ಥಾನಕ್ಕೆ ಇಳಿದಿದ್ದಾರೆ. ಎಚ್‌ಸಿಎಲ್ ಕಂಪನಿಯ ರೋಶಿನಿ ನಾಡರ್ ಮಲ್ಹೋತ್ರಾ 3ನೇ ಸ್ಥಾನದಲ್ಲಿದ್ದಾರೆ.

author-image
Chandramohan
india richest persons list

ಮುಖೇಶ್ ಅಂಬಾನಿ, ಗೌತಮ್ ಅದಾನಿ, ರೋಶಿನಿ ನಾಡರ್ ಮಲ್ಹೋತ್ರಾ

Advertisment
  • ಮತ್ತೆ ದೇಶದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಮುಖೇಶ್ ಅಂಬಾನಿ
  • ಗೌತಮ್ ಅದಾನಿಗೆ 2ನೇ ಸ್ಥಾನ, ರೋಶಿನಿ ನಾಡರ್ ಗೆ 3ನೇ ಸ್ಥಾನ
  • ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿ-2025 ಬಿಡುಗಡೆ

ಮುಖೇಶ್ ಅಂಬಾನಿ ಮತ್ತು ಕುಟುಂಬ ಮತ್ತೊಮ್ಮೆ ಭಾರತದ ನಂಬರ್ ಒನ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಉದ್ಯಮಿ ಗೌತಮ್ ಅದಾನಿಯನ್ನು ಹಿಂದಿಕ್ಕಿ ಮುಖೇಶ್ ಅಂಬಾನಿ ಕುಟುಂಬ ದೇಶದ ಶ್ರೀಮಂತಿಕೆಯಲ್ಲಿ ನಂಬರ್ ಒನ್ ಸ್ಥಾನವನ್ನು ಮತ್ತೆ ತನ್ನದಾಗಿಸಿಕೊಂಡಿದೆ. ಅದಾನಿ ಗ್ರೂಪ್‌ನ ಗೌತಮ್ ಅದಾನಿ 2ನೇ ಸ್ಥಾನಕ್ಕೆ ಇಳಿದಿದ್ದಾರೆ. ಮುಖೇಶ್ ಅಂಬಾನಿ ಮತ್ತು ಕುಟುಂಬದ ಬಳಿ 9.55 ಲಕ್ಷ ರೋಟಿ ರೂಪಾಯಿ ಸಂಪತ್ತು ಇದ್ದರೇ, ಗೌತಮ್ ಅದಾನಿ ಹೊಂದಿರುವ ಸಂಪತ್ತಿನ ಮೌಲ್ಯ 8.15 ಲಕ್ಷ ಕೋಟಿ ರೂಪಾಯಿ ಆಗಿದೆ. 
ಇನ್ನೂ ಮೂರನೇ ಸ್ಥಾನದಲ್ಲಿ HCL ಕಂಪನಿಯ ರೋಶಿನಿ ನಾಡರ್ ಮಲ್ಹೋತ್ರಾ ಇದ್ದಾರೆ. ರೋಶಿನಿ ನಾಡರ್ ಮಲ್ಹೋತ್ರಾ  ಅವರು 2.84 ಲಕ್ಷ ಕೋಟಿ ರೂಪಾಯಿ ಸಂಪತ್ತು  ಅನ್ನು ಹೊಂದಿದ್ದಾರೆ ಎಂದು M3M ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿ-2025 ಹೇಳಿದೆ. 
ಇನ್ನೂ ದೇಶದ ನಾಲ್ಕನೇ ಶ್ರೀಮಂತರಾಗಿ ಸೈರಸ್‌ ಪೂನಾವಾಲಾ ಮತ್ತು ಕುಟುಂಬ ಹೊರಹೊಮ್ಮಿದೆ. ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಮಾಲೀಕರಾಗಿರುವ ಸೈರಸ್ ಪೂನಾವಾಲಾ ಮತ್ತು ಫ್ಯಾಮಿಲಿಯು 2.46 ಲಕ್ಷ ಕೋಟಿ ರೂಪಾಯಿ ಸಂಪತ್ತು  ಅನ್ನು ಹೊಂದಿದೆ. ದೇಶದ ಐದನೇ ಶ್ರೀಮಂತರಾಗಿ ಆದಿತ್ಯ ಬಿರ್ಲಾ ಕಂಪನಿಯ  ಕುಮಾರ ಮಂಗಳಂ ಬಿರ್ಲಾ ಮತ್ತು ಕುಟುಂಬ ಆಯ್ಕೆಯಾಗಿದೆ. ಬಿರ್ಲಾ ಕುಟುಂಬವು 2.32 ಲಕ್ಷ ಕೋಟಿ ರೂಪಾಯಿ ಸಂಪತ್ತು ಹೊಂದಿದೆ. 

Advertisment


ಇನ್ನೂ ದೇಶದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ ಓದಿ.

1. ಮುಖೇಶ್ ಅಂಬಾನಿ ಮತ್ತು ಕುಟುಂಬ: 9,55,410 ಕೋಟಿ ರೂಪಾಯಿ

2. ಗೌತಮ್ ಅದಾನಿ ಮತ್ತು ಕುಟುಂಬ : 8,14,720 ಕೋಟಿ ರೂಪಾಯಿ

3. ರೋಶಿನಿ ನಾಡರ್ ಮಲ್ಹೋತ್ರಾ ಮತ್ತು ಕುಟುಂಬ: 2,84,120 ಕೋಟಿ ರೂಪಾಯಿ

4. ಸೈರಸ್ ಎಸ್‌ ಪೂನಾವಾಲ ಮತ್ತು ಕುಟುಂಬ  : 2,46,460 ಕೋಟಿ ರೂಪಾಯಿ

5. ಕುಮಾರ ಮಂಗಳಂ ಬಿರ್ಲಾ ಮತ್ತು ಕುಟುಂಬ : 2,32,850 ಕೋಟಿ ರೂಪಾಯಿ

6. ನೀರಜ್ ಬಜಾಜ್ ಅಂಡ್ ಕುಟುಂಬ : 2,32,680 ಕೋಟಿ ರೂಪಾಯಿ

7. ದಿಲೀಪ್ ಸಾಂಘ್ವಿ : 2,30,560 ಕೋಟಿ ರೂಪಾಯಿ

8. ಅಜೀಂ ಪ್ರೇಮ್‌ಜೀ ಮತ್ತು ಕುಟುಂಬ  : 2,21,250 ಕೋಟಿ ರೂಪಾಯಿ

9. ಗೋಪಿಚಂದ್ ಹಿಂದೂಜಾ ಮತ್ತು ಕುಟುಂಬ : 1,85,310  ಕೋಟಿ ರೂಪಾಯಿ

10. ರಾಧಾಕೃಷ್ಣ ಧಾಮಾನಿ ಮತ್ತು ಕುಟುಂಬ : 1,82,980 ಕೋಟಿ ರೂಪಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

hurun india rich list 2025
Advertisment
Advertisment
Advertisment