/newsfirstlive-kannada/media/media_files/2025/09/05/mumbai-on-high-alert-2025-09-05-14-26-32.jpg)
ಮುಂಬೈನಲ್ಲಿ ಆರ್‌ಡಿಎಕ್ಸ್ ಬಳಸಿ ಸ್ಪೋಟದ ಬೆದರಿಕೆ
ಮುಂಬೈನಲ್ಲಿ ನಾಳೆ ಗಣೇಶ ವಿಸರ್ಜನೆ ಹಿನ್ನಲೆ ಬಾಂಬ್ ಬೆದರಿಕೆ ಬಂದಿದೆ. 400 ಕೆಜಿ ಆರ್‌ಡಿಎಕ್ಸ್ 34 ವಾಹನಗಳಲ್ಲಿದೆ, ಮುಂಬೈನಲ್ಲಿ ಬಾಂಬ್ ಇಟ್ಟಿರೋದಾಗಿ ಎಚ್ಚರಿಕೆಯ ಸಂದೇಶ ಬಂದಿದೆ. ಮುಂಬೈನಲ್ಲಿ 34 ವಾಹನಗಳಲ್ಲಿ ಮಾನವ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ಬಂದಿದೆ. ಲಷ್ಕರ್-ಎ-ಜಿಹಾದಿ ಎಂಬ ಸಂಘಟನೆಯಿಂದ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮುಂಬೈನ ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬೆದರಿಕೆಯ ಸಂದೇಶ ಬಂದಿದೆ . ಲಷ್ಕರ್-ಎ-ಜಿಹಾದಿ ಎಂದು ಕರೆದುಕೊಳ್ಳುವ ಸಂಘಟನೆಯ 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಬೆದರಿಕೆಯ ಸಂದೇಶದಲ್ಲಿ ಹೇಳಿದ್ದಾರೆ.
ಉಗ್ರರು ಸ್ಫೋಟಕ್ಕಾಗಿ 400 ಕೆಜಿ ಆರ್‌ಡಿಎಕ್ಸ್ ಬಳಸುತ್ತಿದ್ದಾರೆ ಎಂದು ಹೇಳಿರುವ ಹಿನ್ನಲೆಯಲ್ಲಿ ಪೊಲೀಸರಿಂದ ಮುಂಬೈ ಸೇರಿ ಇಡೀ ಮಹಾರಾಷ್ಟ್ರ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆಯ ಬಗ್ಗೆ ಪ್ರತಿಯೊಂದು ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ನಾಳೆ ಮುಂಬೈನಲ್ಲಿ ಗಣೇಶ ವಿಸರ್ಜನೆ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು , ಅನಂತರ ಚತುರ್ದಶಿ ಇರುವುದರಿಂದ, ಲಕ್ಷಾಂತರ ಜನ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.