/newsfirstlive-kannada/media/media_files/2025/09/23/up-kanpura-girl-murdeer-2025-09-23-18-15-12.jpg)
ಕೊಲೆಯಾದ ಆಕಾಂಕ್ಷ ಹಾಗೂ ಆರೋಪಿ ಸೂರಜ್
ಪ್ರೀತಿ ಪ್ರೇಮದ ಆರಂಭ ಅದೆಷ್ಟೆ ಮಧುರವಾಗಿದ್ರೂ ಅಂತ್ಯ ಭೀಕರವಾಗಿಯೇ ಇರುತ್ತೆ.. ಬೆರಳಣಿಕೆ ಪ್ರೇಮ ಕಾವ್ಯಗಳಷ್ಟೆ ಮಾಧುರ್ಯವಾಗಿರುತ್ತೆ.. ಬಿಟ್ರೆ ಉಳಿದೆದ್ದಲ್ಲವೂ ಕೂಡ ದಾರುಣವೇ.. ಹುಡುಗ ಹುಡುಗಿ ಇನ್​ಸ್ಟಾದಲ್ಲಿ ಸ್ನೇಹ ಬೆಳೆಸಿದ್ರು.. ಸ್ನೇಹ ಪ್ರೀತಿಯಾಗಿ ಹೆತ್ತವರು ಬಿಟ್ಟು ಆಕೆ ಅವನೊಟ್ಟಿಗಿದ್ಳು.. ಆದ್ರೆ ವಾಟ್ಸಪ್​​ನಲ್ಲಿ ಕಂಡ ಆ ರಹಸ್ಯ ಆ ಜೀವಕ್ಕೆ ಮುಳುವಾಗಿ ಹೋಗಿತ್ತು.. ಅರಸಿ ಬಂದ ಪ್ರೀತಿಯೇ ಆಕೆಯನ್ನ ಯುಮನಾ ನದಿಯಲ್ಲಿ ಹೆಣವಾಗಿ ತೇಲುವಂತೆ ಮಾಡಿತ್ತು. ಈ ಸುಂದರಿಗೆ ಆಗಿದ್ದೇನು? ಪ್ರೀತಿ ಬಯಸಿ ಹೋದವಳನ್ನ ಕೊಂದಿದ್ಯಾರು? ಕೊಲೆಗಾರ ಬಲೆಗೆ ಬಿದ್ದಿದ್ದು ಹೇಗೆ? ಅಂತಾನೇ ಹೇಳ್ತೀವಿ ನೋಡಿ..
ಪ್ರೀತಿ ಮಾಯೆ ಹುಷಾರು.. ಕಣ್ಣೀರು ಮಾರೋ ಬಜಾರು.. ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟಂಗೆ ಕತ್ತಿಗೆ ಅಂತಾರೆ... ಆದ್ರೆ ಈ ಸಾಲು ಎಷ್ಟು ಸತ್ಯ ಅಂದ್ರೆ ಪ್ರೀತಿ ಪ್ರೇಮ ಅಂತ ಹೋದವರಲ್ಲಿ ಶೇ 90 ರಷ್ಟು ಜನರ ಬದುಕು ಬರ್ಬಾದ್​ ಆಗಿರೋರೆ.. ಆಸೆ ಕನಸು ಇಟ್ಕೊಂಡು ಪ್ರೀತಿ ಬಯಸಿ ಹೋಗಿರ್ತಾರೆ.. ಆದ್ರೆ ಅದನ್ನ ಜೀವನದ ಕೊನೆ ಕ್ಷಣದತನಕ ಉಳಿಸಕೊಂಡವರು ಕೆಲವೇ ಕೆಲವರು ಮಾತ್ರ. ಯಾಕಂದ್ರೆ ಈಗಿನ ಕಾಲದ ಸಂಬಂಧಲ್ಲಿ ನಂಬಿಕೆ ಅನ್ನೋದೆ ಇಲ್ಲ.. ಈ ಜೆನ್​​ ಜಿ ಜಮಾನದಲ್ಲಂತೂ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ... ಪ್ರೀತಿ ಅರ್ಥವೇ ಗೊತ್ತಿಲ್ಲದ ಚೈಲ್ಡ್ ಚಪಾತಿಗಳೆಲ್ಲ ಪ್ರೀತಿ ಪ್ರೇಮ ಅಂತ ಜೀವನ ಹಾಳು ಮಾಡ್ಕೊಂಡಿರೋ ಉದಾಹರಣೆ ಕಮ್ಮಿ ಏನಿಲ್ಲ.. ಇವತ್ತು ನಾವು ಹೇಳೋ ಸ್ಟೋರಿ ಏನು ಅದಕ್ಕೆ ಹೊರತಾಗಿಲ್ಲ
ಕೊಲೆಯಾದ ಆಕಾಂಕ್ಷ
ನೋಡ್ರಿ.. ಗೊಂಬೆ ದಂತದ ಗೊಂಬೆ ಇದ್ದಂಗ ಇಲ್ವಾ.. ವಯಸ್ಸು ಇನ್ನೂ 25 ಕೂಡ ದಾಟಿಲ್ಲ ಕಣ್ರಿ.. ಇನ್ನೂ ಜೀವನದ ಅರ್ಧ ಆಯಸ್ಸು ಬಾಕಿ ಇರುವಾಗ್ಲೇ ಈ ಸುಂದರಿ ಬದುಕು ದಾರುಣವಾಗಿ ಅಂತ್ಯ ಕಂಡಿದೆ.. ಯಾವ ಸೂಟ್​ ಕೇಸ್​​ನಲ್ಲಿ ಕೂತು ಫೋಟೋಗೆ ಪೋಸ್​ ಕೊಟ್ಟಿದ್ದಾಳೋ, ಅದೇ ಸೂಟ್​ಕೇಸ್​​ನಲ್ಲಿ ತಾನು ಹೆಣವಾಗ್ತೀನಿ ಅನ್ನೋ ಸಣ್ಣ ಸುಳಿವು ಕೂಡ ಈಕೆಗೆ ಇರಲ್ಲಿಲ್ಲ... ಈಕೆ ಜೀವನದ ಸರ್ವನಾಶಕ್ಕೆ ಈಕೆಯ ಸ್ವಯಂಕೃತ ಅಪರಾಧವೇ ಕಾರಣ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಮನಸ್ಸು ಪಕ್ವವಾಗುವ ಮುನ್ನವೇ ಪ್ರೀತಿ ಪ್ರೇಮದ ಬಲೆಗೆ ಬಿದ್ದು ಇವತ್ತು ಈ ಹುಡುಗಿ ಜೀವವನ್ನೆ ಕಳ್ಕೊಂಡಿದ್ದಾಳೆ... ಈಕೆಯನ್ನ ಹೆತ್ತಿದ ತಪ್ಪಿಗೆ ಹೆತ್ತ ಜೀವಗಳು ನರಕ ಯಾತನೆಯನ್ನೆ ಅನುಭವಿಸ್ತಿವೆ.
ಇನ್​ಸ್ಟಾದಲ್ಲಿ ಸ್ನೇಹ..ರೆಸ್ಟೊರೆಂಟ್​ನಲ್ಲಿ ಪ್ರೀತಿ..ಡೆಡ್ಲಿ ಮರ್ಡರ್!
ವಾಟ್ಸ್ಯಾಪ್​ ನೋಡಿ ಕೆರಳಿದ ಪ್ರೇಯಸಿ! ಸೂಟ್​ಕೇಸ್​ನಲ್ಲಿ ಶವ!
ಈ ಹುಡುಗಿ ಹೆಸರು ಆಕಾಂಕ್ಷ ಅಂತ.. ರೆಸ್ಟೋರೆಂಟ್​​ ಒಂದ್ರಲ್ಲಿ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿದ್ಳು.. ಅಪ್ಪ ಅಮ್ಮನ ಜೊತೆ ಈಕೆ ಲೈಫ್​ ಚೆನ್ನಾಗಿಯೇ ಇತ್ತು.. ಆದ್ರೆ ಏನ್ ಮಾಡೋದು ಎಲ್ಲ ಚೆನ್ನಾಗಿದ್ರೆ ದೇವರಿಗೆ ಇಷ್ಟ ಆಗಲ್ವೇನೋ.. ಯಾಕಂದ್ರೆ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡ್ತಿದ್ದ ಆಕಾಂಕ್ಷ ಲೈಫ್​ಗೆ ಒಬ್ಬ ಎಂಟ್ರಿ ಕೊಟ್ಟಿದ್ದ.. ಆ ಕಿರಾತಕನ ಹೆಸರು ಸೂರಜ್ ಅಂತ.. ಸೂರಜ್​ಗೂ ಮತ್ತು ಆಕಾಂಕ್ಷಗೂ ಇನ್​ಸ್ಟಾದಲ್ಲಿ ಪರಿಚಯ ಆಗಿತ್ತು.. ಈ ಹುಡುಗಿಯರು ಇನ್​ಸ್ಟಾದಲ್ಲಿ ಬರೋ ಒಂದೇ ಮೆಸೇಜ್​ಗೆ ಹಾಯ್ ಅಂತ ಹಾಕಿ ಫ್ರೆಂಡ್​ ಮಾಡ್ಕೊಂಡು ಬಿಡ್ತಾರೋ ಗೊತ್ತಿಲ್ಲ.. ಗೊತ್ತು ಗುರಿ ಹಿಂದೆ ಮುಂದೆ ನೋಡ್ಬೆಕಲ್ಲ.. ಅಂದ ಚೆಂದಕ್ಕೆ ಬಣ್ಣದ ಮಾತಿಗೆ ಮರುಳಾಗಿ ಈ ಆಕಾಂಕ್ಷ ಸೂರಜ್​ ಜೊತೆ ಫ್ರೆಂಡ್​ಶಿಪ್ ಮಾಡಿದ್ಳು.. ಇವರಿಬ್ಬ ಸಂಬಂಧ ಪ್ರೆಂಡ್​ಶಿಪ್​ಗೆ ನಿಂತಿದ್ರೆ ಇಬ್ಬರ ಜೀವನಾನೂ ಚೆನ್ನಾಗಿ ಇರ್ತಿತ್ತು.. ಆದ್ರೆ ಇಬ್ಬರ ಸ್ನೇಹಕ್ಕೆ ಪ್ರೀತಿ ಮುದ್ರೆ ಬಿದ್ದು ಇಬ್ಬರಿಗೂ ಪ್ಯಾರ್​ಗೆ ಆಗ್ಬಿಟ್ಟಿತ್ತು.. ಇಲ್ಲೆ ನೋಡಿ ಎಡವಟ್ಟು ಆಗಿರೋದು..
ಹೌದು ಸ್ವಾಮಿ ಹೌದು.. ಸೂರಜ್ ಅದೇನೋ ಮೋಡಿ ಮಾಡಿದ್ನೋ.. ಅದ್ಯಾವ ಕನಸಿನ ಗೋಪುರ ಕಟ್ಟಿ ಈಕೆಯನ್ನ ರಾಣಿ ಮಾಡಿ ಕೂಡಿಸಿದ್ನೋ ಗೊತ್ತಿಲ್ಲ.. ಸೂರಜ್​​ ಪ್ರೀತಿ ಬಲೆಯಲ್ಲಿ ಆಕಾಂಕ್ಷ ಬಿದ್ದಿದ್ಳು.. ಇನ್​ಸ್ಟಾದಲ್ಲಿ ಸಿಕ್ಕಿದ್ದವನು ರೆಸ್ಟೋರೆಂಟ್​ಗೂ ಬರೋದಕ್ಕೆ ಶುರು ಮಾಡಿದ್ದ.. ಇಬ್ಬರ ಮಿಲನ ಸಮ್ಮಿಲನ ಎಲ್ಲವೂ ಶುರುವಾಗೋಗಿತ್ತು.. ಇಷ್ಟಕ್ಕೆ ಮೀಸಲಾಗಿದ್ರೂ ಕೂಡ ಆಕಾಂಕ್ಷ ಜೀವನ ಚೆನ್ನಾಗಿ ಇರ್ತಿತ್ತು.. ಆದ್ರೆ ಪ್ರೀತಿ ಪ್ರೇಮ ಅಂತಿದ್ದವರು ಒಟ್ಟಿಗೆ ಇರೋ ತೀರ್ಮಾನ ಮಾಡಿದ್ದಾರೆ.. ಈ ಆಕಾಂಕ್ಷ ಸೂರಜ್​ಗಾಗಿ ಹೆತ್ತವರನ್ನೆ ಬಿಟ್ಟು ಬಂದು ಇವನ ಜೊತೆ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿ ಇರೋದಕ್ಕೆ ಶುರು ಮಾಡಿದ್ದಾಳೆ. ಹಾಗಂತ ಮನೆಯವರ ಸಂಪರ್ಕದಿಂದ ಏನು ಆಕಾಂಕ್ಷ ದೂರ ಇರಲ್ಲಿಲ್ಲ. ಸೂರಜ್​ ಜೊತೆ ಇದ್ರೂ ಕೂಡ ಅಮ್ಮ ಅಕ್ಕನ ಜೊತೆ ಫೋನ್​ನಲ್ಲಿ ಮಾತಾಡೋದು ಮಾಡ್ತಿದ್ಳು.. ಆದ್ರೆ ಓನ್ ಫೈನ್​ ಡೇ ಆಕಾಂಕ್ಷ್ ಫೋನ್ ಏಕಾಏಕಿ ಸ್ವೀಚ್ ಆಫ್​ ಆಗೋಗಿತ್ತು. ಮೂರು ದಿನ ನಿರಂತರವಾಗಿ ಕಾಲ್ ಮಾಡಿದ್ರೂ ಆಕಾಂಕ್ಷ್​ ಫೋನ್​ ಕಾಲ್ ರೀಚ್ ಆಗಿರಲ್ಲಿಲ್ಲ.
ಫೋನ್ ಸ್ವಿಚ್​ ಆಫ್​.. ಯಮುನಾ ನದಿಯಲ್ಲಿ ತೇಲಿದ ಸುಂದರಿ!
ಆಕಾಂಕ್ಷ ದಿನಕ್ಕೆ ಒಂದೆರಡು ಸಾರಿಯಾದ್ರೂ ಅಮ್ಮ ವಿಜಯಶ್ರೀಗೆ ಕಾಲ್ ಮಾಡಿ ಮಾತಾಡ್ತಿದ್ಳು.. ಆದ್ರೆ ಮೂರು ದಿನ ಕಳೆದ್ರೂ ಮಗಳಿಂದ ಯಾವುದೇ ಕಾಲ್ ಬರದೇ ಇದ್ದಾಗ ವಿಜಯಶ್ರೀಗೆ ಡೌಟ್ ಶುರುವಾಗಿತ್ತು.. ಮಗಳು ಕಾಣೆಯಾದ ಬಗ್ಗೆ ವಿಜಯಶ್ರೀ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ರೂ ಯಾರು ಕ್ಯಾರೆ ಅಂದಿರಲ್ಲಿಲ್ಲ.. ಮಾಮುಲಿ ಪೊಲೀಸರು ಹೇಗೋ ವಿಚಾರಣೆ ಮಾಡ್ತೋರ ಹಾಗೆ ವಿಚಾರಿಸಿ ಕಳಿಸಿಬಿಟ್ಟಿದ್ರು... ಕೊನೆಗೆ ದಾರಿ ಕಾಣದೇ ವಿಜಯಶ್ರೀ ಪೊಲೀಸ್ ಕಮಿಷನರ್​ಗೆ ಹೋಗಿ ದೂರು ಕೊಟ್ಟಿದ್ದಾರೆ.. ಆಗ ಆಗಸ್ಟ್​ ಎಂಟನೇ ತಾರೀಖು ಆಕಾಂಕ್ಷ ಮಿಸ್ಸಿಂಗ್ ಬಗ್ಗೆ ಎಫ್​ಐಆರ್ ದಾಖಲಾಗಿತ್ತು.. ಆಗ ಪೊಲೀಸರು ತನಿಖೆ ಶುರು ಮಾಡ್ದಾಗ ಬೆಚ್ಚಿ ಬೀಳಿಸೋ ಕಹಿ ಸತ್ಯವೇ ಬಯಲಾಗಿ ಹೋಗಿತ್ತು.
ಸೂರಜ್ ಹೆಸರಿನ ಹುಡುಗನನ್ನ ಪ್ರೀತಿ ಮಾಡ್ತಿದ್ಳು. ಮೂರು ಜನ ಹೆಣ್ಮಕ್ಕಳೇ ನನಗೆ. ಇಬ್ಬರ ಮಧ್ಯೆ ಜಗಳ ಆಗಿತ್ತು.. ಅದಕ್ಕೆ ಬೇರೆ ಕೆಲಸ ಮಾಡೋದಕ್ಕೆ ಶುರು ಮಾಡಿದ್ಳು.ಒಂದು ವರ್ಷದಿಂದ ಕೆಲಸ ಮಾಡ್ತಿದ್ಳು. ಜುಲೈನಲ್ಲಿ ನನ್ನ ಮಗಳು ನಮ್ಮನ್ನೆಲ್ಲ ಬಿಟ್ಟು ಅವನ ಜೊತೆ ಇರೋದಕ್ಕೆ ಶುರು ಮಾಡಿದ್ಳು.. ನನ್ನ ಮಗಳಿಗೆ ಏನ್ ಮಾಡಿದ್ನೋ, ಏನ್ ತಿನ್ನಿಸಿದ್ನೋ ಗೊತ್ತಿಲ್ಲ. ಜುಲೈ 10ನೇ ತಾರೀಕು ಮತ್ತೆ ಮನೆಗೆ ಬಂದು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ತಗೊಂಡು ಹೋಗಿದ್ಳು. ಇದಾದ ಮೇಲೆ ಸೂರಜ್​ಗೆ ಮನೆ ಎಲ್ಲಿದೆ ಅಂತ ಕೇಳಿದ್ರೆ ಅವನು ಹೇಳಿಲ್ಲ. ಆಮೇಲೆ ನೋಡಿದ್ರೆ ಅವಳ ಫೋನ್ ಸ್ವಿಚ್ ಆಫ್​ ಬರ್ತಿತ್ತು. ಅವಳು ಸಿಕ್ಕಾಪಟ್ಟೆ ನೆನಪಾಗ್ತಿದ್ಳು. ಅದ್ಕೆ ಫೋನ್ ಮಾಡಿ ಮಾತಾಡೋಣ ಅಂದ್ರೆ ಆಕೆ ಫೋನ್ ಬಂದ್ ಆಗಿತ್ತು.
-ವಿಜಯಶ್ರೀ, ಆಕಾಂಕ್ಷ ತಾಯಿ
ಆಕಾಂಕ್ಷ ಕಾಣೆಯಾಗಿರೋ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರು, ಆಕೆ ಫೋನ್​ ಕಾಲ್​ ಮತ್ತು ನೆಟ್​ವರ್ಕ್ ಲೋಕೆಷನ್​ಗಳನ್ನ ಪರಿಶೀಲನೆ ನಡೆಸಿದ್ರು. ಈ ಟೈಮ್​ನಲ್ಲಿ ಆಕಾಂಕ್ಷ ಕಾಣೆಯಾದ ದಿನ ಸೂರಜ್​ ಜೊತೆಯಲ್ಲೆ ಇದ್ಳು ಅನ್ನೋ ಸುಳಿವು ಸಿಕ್ಕಿತ್ತು. ಕಾಲ್​ ಡಿಟೇಲ್ಸ್​ ಮತ್ತು ಲೊಕೆಷನ್​ ಕೂಡ ಸೂರಜ್​ ಕಡೆಗೆ ಬೊಟ್ಟು ಮಾಡಿ ತೋರಿಸ್ತಿದ್ವು.. ಹೀಗಾಗಿ ಪೊಲೀಸರು ಸೀದಾ ಸೂರಜ್ ಮನಗೆ ಹೋಗಿ ಆಕಾಂಕ್ಷ ಬಗ್ಗೆ ವಿಚಾರಣೆ ನಡೆಸಿದ್ದಾರೆ.. ಆದ್ರೆ ಸೂರಜ್ ಪೊಲೀಸರ ಮುಂದೆ ತನಗೇನೂ ಗೊತ್ತಿಲ್ಲ. ತಾನೇನು ಮಾಡಿಲ್ಲ ಅಂತ ಹೇಳಿದ್ದ. ಅವಳು ಎಲ್ಲಿ ಹೋಗಿದ್ದಾಳೆ ಅಂತ ನನಗೂ ಗೊತ್ತಿಲ್ಲ ಅಂತಲೇ ಹೇಳಿದ್ದ. ಆದ್ರೆ ಯಾವಾಗ ಪೊಲೀಸರು ಈ ಸೂರಜ್​ ಮೊಬೈಲ್​ನ್ನ ವಶಕ್ಕೆ ಪಡೆದು ಚೆಕ್ ಮಾಡಿದ್ರು ಆಕಾಂಕ್ಷ ಬದುಕಿಲ್ಲ ಅನ್ನೋ ಬೆಚ್ಚಿ ಬೀಳಿಸೋ ವಿಚಾರ ರಿವೀಲ್ ಆಗಿತ್ತು. ಕಾಣೆಯಾಗಿದ್ದ ಆಕಾಂಕ್ಷ ಕೊಲೆಯಾಗಿದ್ದಾಳೆ ಅನ್ನೋ ಸತ್ಯ ಆಚೆ ಬಂದಿತ್ತು.
ಸೂರಜ್​ ಮೊಬೈಲ್​ನಲ್ಲಿದ್ದ ಆ ಒಂದೇ ಒಂದು ಫೋಟೋ ಸೂರಜನೇ ಆಕಾಂಕ್ಷಳನ್ನ ಕೊಂದು ಹಾಕಿದ್ದ ಅನ್ನೋ ಸತ್ಯವನ್ನ ಹೇಳಿತ್ತು. ಶಾಕಿಂಗ್ ಸಂಗತಿ ಏನಂದ್ರೆ ಸೂರಜ್​ ಆಕಾಂಕ್ಷಳನ್ನ ಕೊಲ್ಲೋದು ಮಾತ್ರವಲ್ಲ.. ಆಕೆ ದೇಹವನ್ನು ತನ್ನ ಮನೆಯಿಂದ ನೂರು ಕಿ. ಮೀಟರ್ ದೂರದಲ್ಲಿರೋ ಯಮುನಾ ನದಿಯಲ್ಲಿ ಬೀಸಾಕಿ ಬಂದಿದ್ದ. ಈ ಪಾಪದ ಕೆಲಸಕ್ಕೆ ಈ ಸೂರಜ್​​ನ ಸ್ನೇಹಿತ ಕೂಡ ಸಾಥ್ ನೀಡಿದ್ದ.. ಆಗಸ್ಟ್ ಎಂಟನೇ ತಾರೀಖು ಸೂರಜ್​ ಮೊಬೈಲ್​ನಲ್ಲಿ ಕಂಡಿದ್ದ ಒಂದು ಫೋಟೋ ಆಕಾಂಕ್ಷಳನ್ನ ಕೆರಳುವಂತೆ ಮಾಡಿತ್ತು.. ಈ ಟೈಮ್​ನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಈ ಪಾಪಿ ಆಕಾಂಕ್ಷಳನ್ನ ಗೋಡೆಗೆ ಗುದ್ದಿ, ಕತ್ತು ಹಿಸುಕಿ ಜೀವ ತೆಗದಿದ್ದ.. ಬಳಿಕ ಸೂರಜ್​ ಮತ್ತು ಆತನ ಸ್ನೇಹಿತ ದೇಹವನ್ನ ಯಮುನಾ ನದಿಯಲ್ಲಿ ಬೀಸಾಕಿ ಬಂದಿದ್ರು.. ಆದ್ರೆ ಕ್ರಿಮಿನಲ್ಸ್​​ಗಳು ಎಷ್ಟೆ ಬುದ್ಧಿವಂತರಾಗಿದ್ರೂ ಪೊಲೀಸರ ಮುಂದೆ ಆಟ ನಡೆಯೋದೆ ಇಲ್ಲ.. ಮೊಬೈಲ್​ನಲ್ಲಿ ಸಿಕ್ಕಿದ್ದ ಸಣ್ಣ ಸುಳಿವೇ ಸೂರಜ್​​ನ್ನ ಲಾಕ್ ಆಗುವಂತೆ ಮಾಡಿತ್ತು. ಆ ಫೋಟೋದಿಂದ ಆಕಾಂಕ್ಷಳ ಕೊಲೆ ರಹಸ್ಯವನ್ನ ಹಂತಕ ಸೂರಜ್ ಪೊಲೀಸರ ಮುಂದೆ ಕಕ್ಕಿದ್ದ.
ಪ್ರೀತಿ ಪ್ರೇಮ ವಿಚಾರದಲ್ಲಿ ಆರಂಭ ಚೆನ್ನಾಗಿಯೇ ಇದ್ರು, ಅಂತ್ಯ ಭೀಕರವಾಗಿಯೇ ಇರುತ್ತೆ ಅಂತ.. ಹಾಗಾಗಿ ಆಕಾಂಕ್ಷ ಮತ್ತು ಸೂರಜ್ ಲವ್ ಸ್ಟೋರಿಯಲ್ಲೂ ಕೂಡ ವಿಭಿನ್ನವಾಗಿಲ್ಲ.. ಯಾಕಂದ್ರೆ ಇಬ್ಬರು ಒಬ್ಬರನೊಬ್ಬರು ಇಷ್ಟ ಪಟ್ಟೆ ಒಟ್ಟಿಗಿದ್ರು ಕೂಡ.. ವಾಟ್ಸಪ್​ನಲ್ಲಿದ್ದ ಒಂದೇ ಒಂದು ಫೋಟೋ ಇವರ ಲವ್​ಸ್ಟೋರಿಯನ್ನ ಬ್ರೇಕ್ ಮಾಡಿತ್ತು. ಆ ಒಂದು ಫೋಟೋ ಕಾರಣಕ್ಕೆ ಸೂರಜ್ ಮತ್ತು ಆಕಾಂಕ್ಷ ನಡುವೆ ಕಿರಿಕ್ ಶುರುವಾಗಿತ್ತು.. ಆಗ್ಲೇ ನೋಡಿ ಆಕಾಂಕ್ಷ ಕೊಲೆಗೆ ಮುಹೂರ್ತ ಫಿಕ್ಸ್ ಆಗಿದ್ದು.
ಮೊಬೈಲ್​ನಿಂದ ಬಯಲಾಗಿತ್ತು ಸೂರಜ್​​ ಮುಖವಾಡ!
ತಲೆ ಗೋಡೆಗೆ ಗುದ್ದಿ ಮರ್ಡರ್.. ಸೂಟ್​ಕೇಸ್​​ನಲ್ಲಿ ಶವ ಸಾಗಾಟ!
ದುರಂತ ಏನ್ ಗೊತ್ತಾ? ಈ ಸೂರಜ್​ ಆಕಾಂಕ್ಷ​ ಜೊತೆ ಲಿವ್​​ಇನ್​ನಲ್ಲಿದ್ರೂ ಬೇರೊಂದು ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದ.. ಆದ್ರೆ ಈ ವಿಚಾರ ಆಕಾಂಕ್ಷಗೆ ಗೊತ್ತಿರಲ್ಲಿಲ್ಲ. ಆಕಾಂಕ್ಷ ಕೊಲೆ ನಡೆದ ದಿನ ಸೂರಜ್​ ಮೊಬೈಲ್​ನಲ್ಲಿದ್ದ ಬೇರೊಂದು ಹುಡುಗಿ ಫೋಟೋ ಈಕೆ ಕಣ್ಣಿಗೆ ಬಿದ್ದಿತ್ತು.. ಆಗ ಸೂರಜ್​​ಗೆ ಬೇರೊಬ್ಬ ಹುಡುಗಿ ಜೊತೆ ಸಂಬಂಧ ಇಟ್ಕೊಂಡಿದ್ದಾನೆ ಅನ್ನೋ ಕಹಿ ಸತ್ಯ ಗೊತ್ತಾಗಿತ್ತು. ಆಗ ಆಕಾಂಕ್ಷ ಸೂರಜ್ ಜೊತೆ ಜಗಳ ಮಾಡಿದ್ದಾಳೆ.. ಮಾಡಿದ ಪ್ರೀತಿಗೆ ಮೋಸ ಮಾಡಿದ್ಯಲ್ಲ ಅಂತ ಕಣ್ನೀರು ಸುರಿಸಿದ್ದಾಳೆ.. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ ಅಷ್ಟೇ ನೋಡಿ ಮುಂದೆ ನಡೆದಿದ್ದು ನಿಜಕ್ಕೂ ದಾರುಣ..
ಅಲ್ಲ ಸ್ವಾಮಿ ಸ್ನೇಹ ಬೆಳೆಸಿಕೊಂಡು ಮನಸ್ಸು ಕೊಟ್ಟು ಪ್ರೀತಿ ಮಾಡಿ, ಇನ್ನೊಬ್ಬಳ ಜೊತೆ ಸಂಬಂಧ ಇಟ್ಕೊತಾನೆ ಅಂದ್ರೆ ಇವನೆಂಥಾ ಕ್ರಿಮಿ ಇರ್ಬೇಡ ಹೇಳಿ.. ಆಕಾಂಕ್ಷ ಇವನನ್ನ ನಂಬಿ ಹೆತ್ತವರನ್ನ ಸಹ ಬಿಟ್ಟು ಬಂದು ಲಿವ್​​ ಇನ್​ನಲ್ಲಿದ್ಳು..ಆದ್ರೆ ಈ ಪಾಪಿ ನೋಡಿದ್ರೆ ಮನೆಗೊಬ್ಬಳು ಮನಸಿಗೊಬ್ಬಳು ಅನ್ನೋ ಹಾಗೆ ಇಬ್ಬಿಬ್ಬರನ್ನ ಮೇಂಟೈನ್ ಮಾಡ್ತಿದ್ದ.. ಇದೇ ವಿಚಾರ ಆಕಾಂಕ್ಷಳ ಸಾವಿಗೆ ಕಾರಣವಾಗಿತ್ತು.. ಯಾಕಂದ್ರೆ ಮುಚ್ಚಿಟ್ಟ ಗುಟ್ಟು ರಟ್ಟಾಗಿದ್ದೇ ತಡ ಸೂರಜ್​ ತನಗೆ ಉಳಿಗಾಲವಿಲ್ಲ ಅಂತ ಯೋಚಿಸಿದ್ದ.. ಹೀಗಾಗಿ ಆಕಾಂಕ್ಷಳನ್ನ ಮುಗಿಸಲೇಬೇಕು ಅಂತ ತೀರ್ಮಾನಿಸಿದ್ದ ಸೂರಜ್​, ಆಗಸ್ಟ್ ಎಂಟನೇ ತಾರೀಕು ಕತೆ ಫಿನಿಶ್ ಮಾಡಿದ್ದ. ಜಗಳದ ಟೈಮ್​ನಲ್ಲಿ ಆಕಾಂಕ್ಷಳ ತಲೆಯನ್ನ ಗೋಡೆಗೆ ಗುದ್ದಿ ಬಳಿಕ ಆಕೆ ಕತ್ತು ಹಿಸುಕಿ ಉಸಿರು ನಿಲ್ಲಿಸಿಬಿಟ್ಟಿದ್ದ.. ಆದ್ರೆ ಈ ಪಾಪಿಯ ಕ್ರೌರ್ಯ ಇಷ್ಟಕ್ಕೆ ನಿಂತಿಲ್ಲ..
ಆಕಾಂಕ್ಷ ಕಪ್ಪು ಬಣ್ಣದ ಸೂಟ್​​ಕೇಸ್ ಮೇಲೆ ಕೂತಿದ್ದಾಳೆ.. ಶಾಕಿಂಗ್ ಏನಂದ್ರೆ ಆಕಾಂಕ್ಷಳ ಮೃತದೇಹವನ್ನ ಸಾಗಿಸೋಕೆ ಸೂರಜ್ ಇದೇ ಸೂಟ್​​ಕೇಸ್​ ಬಳಸಿದ್ದ. ನಂಬಿ ಬಂದವಳ ಪ್ರಾಣ ತೆಗೆದಿದ್ದ ಕಿರಾತಕ, ಆಕೆ ದೇಹವನ್ನು ಸೂಟ್​್ಕೇಸ್​ನಲ್ಲಿ ತುಂಬಿ, ಬಳಿಕ ಬರೋಬ್ಬರಿ 100 ಕೀ ಮೀಟರ್ ದೂರವಿರೋ ಯಮುನಾ ನದಿಯಲ್ಲಿ ಬೀಸಾಕಿ ಬಂದಿದ್ದ.. ಇದಾದ ಮೇಲೆ ಆಕಾಂಕ್ಷಳ ಫೋನ್​ ಲೋಕೆಷನ್ ಸಿಗಬಾರದು ಅಂತ, ಆ ಫೋನ್​ ಅನ್ನು ಯಾವುದೋ ಒಂದು ಟ್ರೇನ್​​ನಲ್ಲಿ ಇಟ್ಟು ಬಂದಿದ್ದ. ಕೊನೆಗೆ ಏನು ಮಾಡದ ಮಳ್ಳನಂತೆ ಬಂದು ಮನೆ ಸೇರಿದ್ದ.. ಆದ್ರೆ ಇಂಟರ್​ಸ್ಟಿಂಗ್​ಲೀ ಈ ಸೂರಜ್​ ಫೋನ್​ನಲ್ಲಿದ್ದ ಫೋಟೋ ಪಾಪಿಯನ್ನ ಲಾಕ್ ಮಾಡೋದಕ್ಕೆ ಸಾಧ್ಯವಾಗಿತ್ತು.
ಪ್ರೇಯಸಿ ಜೀವ ತೆಗೆದು, ಸೆಲ್ಫಿ ಕ್ಲಿಕ್ಕಿಸಿದ ಕ್ರೂರಿ!
ಜಗತ್ತಿನಲ್ಲಿ ಎಂತೆಂಥಾ ವಿಕೃತಿಗಳಿರ್ತಾರೆ ಅಂದ್ರೆ ನೀಚ ಮನಸ್ಸಿನ ರಾಕ್ಷಸರೇ ಆಗಿರ್ತಾರೆ.. ಈ ಸೂರಜ್ ಕೂಡ ಇದೇ ಜಾತಿಗೆ ಸೇರಿದವನು.. ಯಾಕಂದ್ರೆ ಪ್ರೇಯಸಿಯನ್ನ ಕೊಂದಿದ್ದು ಅಲ್ಲದೇ ಆಕೆ ದೇಹವನ್ನ ನದಿಗೆ ಬೀಸಾಕುವಾಗ, ಸೂಟ್​ಕೇಸ್​​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ.. ಆ ಫೋಟೋ ಈ ಪಾಪಿ ಮೊಬೈಲ್​ನಲ್ಲೇ ಇತ್ತು. ಪೊಲೀಸರು ಇವನ ಮನೆಗೆ ಬಂದು ಫೋನ್ ಚೆಕ್ ಮಾಡ್ದಾಗ ಸೆಲ್ಪಿ ನೋಡಿ ಪೊಲೀಸರಿಗೆ ಆಕಾಂಕ್ಷಳ ಮರ್ಡರ್​ ರಹಸ್ಯ ಏನು ಅನ್ನೋದು ಗೊತ್ತಾಗಿತ್ತು.. ಕೊನೆಗೆ ಇವನ್ನ ಹೆಡೆಮುರಿ ಕಟ್ಟಿ ಸ್ಟೇಷನ್​ಗೆ ಕರ್ಕೊಂಡು ಹೋಗಿ ವಿಚಾರಣೆ ನಡೆಸಿದಾಗ ಪಾಪಿ ಕೊಲೆ ಮಾಡಿದ್ದು ಯಾಕೆ ಅನ್ನೋ ಸತ್ಯವನ್ನ ಹೇಳಿದ್ದ.
ಇಂಥಾ ಕಿರಾತಕನ್ನ ಆಕಾಂಕ್ಷ ನಂಬಿ ಬಂದಿದ್ಳು. ಆದ್ರೆ ಈ ಪಾಪಿ ಆಕೆಯನ್ನ ಪರಲೋಕಕ್ಕೆ ಕಳಿಸಿ ಕ್ರೌರ್ಯ ಮೆರೆದು ಬಿಟ್ಟಿದ್ದ. ಅತ್ತ ಮಗಳನ್ನ ಕಳ್ಕೊಂಡ ಹೆತ್ತ ಜೀವ ಸಂಕಟ ಪಡ್ತಿದೆ.. ಪ್ರೀತಿ ಮಾಡೋದು ಮಾಡಿದ್ಳು, ತಾಯಿ ಜೊತೆಯಲ್ಲೇ ಇದ್ದಿದ್ರೆ ಇವತ್ತು ಅಕಾಂಕ್ಷಳ ಬದುಕು ದಾರುಣವಾಗಿ ಅಂತ್ಯ ಕಾಣ್ತಿರಲ್ಲಿಲ್ಲ.. ಹಾಗಾಗಿ ಹುಡುಗಿಯರು ಪ್ರೀತಿ ಪ್ರೇಮ ಅನ್ನೋ ಹುಚ್ಚಿಗೆ ಬೀಳೋ ಮುನ್ನ ಪ್ರೀತಿ ಮಾಡುವನ ಹಿನ್ನೆಲೆ ಒಮ್ಮೆ ನೋಡಿದ್ರೆ ಒಳ್ಳೆದು.. ಕುರುಡು ಪ್ರೀತಿಗೆ ಬಿದ್ರೆ ಆಕಾಂಕ್ಷಗೆ ಬಂದಿರೋ ಪರಿಸ್ಥಿತಿಯೇ ನಾಳೆ ನಿಮಗೂ ಬರಬಹುದು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.