Advertisment

ಮತ್ತೆ ಬೆಂಗಳೂರಿನ ಐಟಿ ಕಂಪನಿಗಳನ್ನು ಆಂಧ್ರಕ್ಕೆ ಕರೆದ ನಾರಾ ಲೋಕೇಶ್: ಆಂಧ್ರಕ್ಕೆ ತಿರುಗೇಟು ಕೊಟ್ಟ ಪ್ರಿಯಾಂಕ್ ಖರ್ಗೆ

ಆಂಧ್ರಪ್ರದೇಶ ಮತ್ತು ಕರ್ನಾಟಕ ಸರ್ಕಾರದ ನಡುವೆ ಮತ್ತೆ ಐ.ಟಿ. ಕಂಪನಿಗಳ ವಿಷಯದಲ್ಲಿ ಜಟಾಪಟಿ ನಡೆದಿದೆ. ಆಂಧ್ರದ ಐ.ಟಿ. ಸಚಿವ ನಾರಾ ಲೋಕೇಶ್ ಮತ್ತೆ ಬೆಂಗಳೂರಿನ ಐ.ಟಿ. ಕಂಪನಿಗಳನ್ನು ಆಂಧ್ರದ ಅನಂತಪುರಕ್ಕೆ ಆಹ್ವಾನಿಸಿದ್ದಾರೆ. ಇದಕ್ಕೆ ರಾಜ್ಯದ ಐ.ಟಿ. ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

author-image
Chandramohan
nara lokesh versus priyank kharge

ಸಚಿವ ಪ್ರಿಯಾಂಕ್ ಖರ್ಗೆ ವರ್ಸಸ್ ನಾರಾ ಲೋಕೇಶ್

Advertisment
  • ಮತ್ತೆ ಐ.ಟಿ. ಕ್ಷೇತ್ರದಲ್ಲಿ ಕರ್ನಾಟಕ V/S ಆಂಧ್ರಪ್ರದೇಶ ರಾಜ್ಯ
  • ಬೆಂಗಳೂರಿನ ಐ.ಟಿ. ಕಂಪನಿಗಳನ್ನು ಆಂಧ್ರಕ್ಕೆ ಆಹ್ವಾನಿಸಿದ ನಾರಾ ಲೋಕೇಶ್
  • ನಾರಾ ಲೋಕೇಶ್‌ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಮನೆ ಗೆದ್ದು ಮಾರು ಗೆಲ್ಲಬೇಕಂತೆ.. ದೊಡ್ಡವರು ಹೇಳಿದ್ದು.. ಆದ್ರೆ ಮನೆಯಲ್ಲಿ ಸೌಕರ್ಯಗಳೇ ಇಲ್ಲದಿದ್ರೆ ಅತಿಥಿಗಳು ಇರೋದಾದ್ರೂ ಹೇಗೆ? ಬರೋದಾದ್ರೂ ಹೇಗೆ ಹೇಳಿ? ಇದೇ ವಾತಾವರಣ ಬೆಂಗಳೂರಿಗೆ ಅಳವಡಿಸಿ ನೋಡಿ.. ರಸ್ತೆ ಗುಂಡಿ ಸರಿ ಮಾಡಲು ತಿಂಗಳುಗಳು ಕಳೆದವು.. ಏನಾದ್ರೂ ಆಯ್ತಾ? ಮಳೆ ಬಂದ್ರೆ ಹೊಳೆ ಆಗುತ್ತೆ.. ಇದು ಜಾಗತಿಕ ನಗರ ಬೆಂಗಳೂರಿನ ದುಸ್ಥಿತಿ. ಈ ದುಸ್ಥಿತಿ ಕಂಡು ನೆರೆ ಮನೆಯವ್ರು ಕಣ್ಣು ಹಾಕದೇ ಇರ್ತಾರ? ಈಗ ಆಂಧ್ರ ಐ.ಟಿ.  ಸಚಿವ ನಾರಾ ಲೋಕೇಶ್​​, ನ್ಯೂನತೆಗಳ ಪಟ್ಟಿ ಮಾಡಿ ಟೀಕಿಸಿದ್ದಾರೆ.. 
ಬೆಂಗಳೂರು.. ಜಗತ್ತಿನ ಐಟಿ ದಿಗ್ಗಜ.. ಡೈನಾಮಿಕ್​ ಸಿಟಿ.. ಭಾರತದ ಟೆಕ್ನಾಲಜಿಯ ಕ್ಯಾಪಿಟಲ್​​.. ಇದೀಗ ಸಿಲಿಕಾನ್ ಸಿಟಿ ರಸ್ತೆ ಹಾಗೂ ಮೂಲಸೌಕರ್ಯ ವಿಚಾರ ಬೆಂಗಳೂರು ಹಾಗೂ ಆಂಧ್ರದ ನಡುವೆ ಜಟಾಪಟಿಗೆ ತಿರುಗಿದೆ.. 

Advertisment


ಬೆಂಗಳೂರು v/s ಆಂಧ್ರ ಪ್ರದೇಶ ನಡುವೆ ‘ಅಭಿವೃದ್ಧಿ’ ವಾರ್​​!
ಕರ್ನಾಟಕ ಕೆಣಕಿದ ನಾರಾ ಲೋಕೇಶ್​ಗೆ ಖರ್ಗೆ ಬಿಗ್​​ ಕೌಂಟರ್​​

ಇದು ಕಾಲ್ಕೆರದು ಬಂದ ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಯ ಜಗಳ.. ಖಾಲಿ ತಲೆಗೆ ಖಾಯಿಲೆ ಒಕ್ಕರಿಸಿದಾಗ ಇಂಥದ್ದೆೇ ವಿಚಾರಗಳು ಬೊಕ್ಕತಲೆಯನ್ನ ಸೀಳಿ ಒಕ್ಕರಿಸೋದು. ಎರಡೂವರೆ ದಶಕದ ಬಳಿಕ ಶೀತಲ ಸಮರಕ್ಕೆ ನಾಂದಿ ಹಾಡಿದೆ. ತಂದೆ ಚಂದ್ರಬಾಬು ನಂತರ ನಾರಾ ಲೋಕೇಶ್​​, ಬೆಂಗಳೂರಿನ ಮೇಲೆ ವಕ್ರದೃಷ್ಟಿ ಬಿಟ್ಟಿದ್ದಾರೆ.. ಸಿಲಿಕಾನ್ ಸಿಟಿಯ ಲೂಪೋಲ್ಸ್​​​ ಹುಡುಕಿದ ಆಂಧ್ರ ಸಿಎಂ ಪುತ್ರ, ಜಾಲತಾಣದಲ್ಲಿ ರಾಜಕೀಯ ಕದನಕ್ಕೆ ಕಾಲ್ಕೆರೆದಿದ್ದು, ಸಚಿವ ಪ್ರಿಯಾಂಕ್ ನಡುವೆ ಜಟಾಪಟಿ ಏರ್ಪಟ್ಟಿದೆ..
ಏನಿದು ಆಂಧ್ರವಾಲಾ ನಾರಾ ಲೋಕೇಶ್​ನ ಜಟಾಪಟಿ? 
ಔಟರ್​ರಿಂಗ್ ರೋಡ್ ಟ್ರಾಫಿಕ್, ರಸ್ತೆಗುಂಡಿ ವಿಚಾರವಾಗಿ ಬ್ಲ್ಯಾಕ್ ಬಕ್ ಸಿಇಒ ಮಾಡಿದ್ದ ಟ್ವೀಟ್​ಗೆ ನಾರಾ ಲೋಕೇಶ್ ಪ್ರತಿಕ್ರಿಯಿಸಿದ್ರು.. ಬೆಂಗಳೂರು ಬಿಟ್ಟು ಹೋಗುವ ಮಾತಾಡಿದ್ದ ಸಿಇಒಗೆ ಆಂಧ್ರ ರತ್ನಗಂಬಳಿ ಹಾಸಿತ್ತು.. ಹೊಸ ಐಟಿ ಕಂಪನಿಗಳು ಬೆಂಗಳೂರು ಉತ್ತರ ಭಾಗಕ್ಕೆ ಶಿಫ್ಟ್ ಆಗ್ತಿವೆ ಎಂಬ ವಿಷಯ ತಿಳಿದ ಈ ನಾರದ, ಇದೀಗ ಮತ್ತೊಮ್ಮೆ ಐಟಿ ಕಂಪನಿಗಳಿಗೆ ಓಪನ್ ಇನ್ವಿಟೇಷನ್ ಕೊಟ್ಟಿದ್ದಾರೆ..
‘ಉತ್ತರ’ ಇನ್ನಷ್ಟು ಹತ್ತಿರ! 
ಉತ್ತರ ಅನ್ನೋದು ಚೆನ್ನಾಗಿದೆ. ಇನ್ನಷ್ಟು ಉತ್ತರಕ್ಕೆ ಬನ್ನಿ ಅನಂತಪುರ ಅತ್ಯುತ್ತಮ ಆಯ್ಕೆಯಾಗಬಹುದು. ನೂತನ ಕಂಪನಿಗಳಿಗೆ ಆಹ್ವಾನ
- ನಾರಾ ಲೋಕೇಶ್​, ಆಂಧ್ರ ಸಚಿವ 

Advertisment




ಹೀಗೆ ನಾರಾ ಲೋಕೇಶ್​ ಆಹ್ವಾನಿಸ್ತಿದ್ದಂತೆ ಸಚಿವ ಪ್ರಿಯಾಂಕ್​ ಖರ್ಗೆ ತಕ್ಷಣವೇ ತಿರುಗೇಟು ಕೊಟ್ಟಿದ್ದಾರೆ.. ದುರ್ಬಲ ವ್ಯವಸ್ಥೆ ಇರೋರು ಬಲಶಾಲಿ ವ್ಯವಸ್ಥೆಗಳ ಮೇಲೆ ಅವಲಂಬಿಸೋದು ಸಹಜ.. ಅದರಲ್ಲಿ ತಪ್ಪೇನಿಲ್ಲ. ಆದರೆ ಆ ಪ್ರಯತ್ನ ನಿರಾಶಾದಾಯಕ ಹಂತಕ್ಕೆ ಹೋದಾಗ ಮತ್ತಷ್ಟು ದುರ್ಬಲತೆ ಉಂಟಾಗಬಹುದು ಅಂತ ಟಾಂಗ್ ಕೊಟ್ಟಿದ್ದಾರೆ.. ಅಲ್ಲದೆ, ನಗರದ ಸಾಧನೆಯ ಬಗ್ಗೆ ಪಟ್ಟಿ ಕೊಟ್ಟಿದ್ದಾರೆ..
ಬೆಂಗಳೂರು ಸಾಧನೆಯ ಶೂರ! 
ಬೆಂಗಳೂರು GDP 2035ರವರೆಗೆ ವಾರ್ಷಿಕ 8.5%ರಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆ ಇದೆ. ಇದರಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಲಿದೆ. 2025ರಲ್ಲಿ ಬೆಂಗಳೂರಿನ ಆಸ್ತಿ ಮಾರುಕಟ್ಟೆ 5% ಏರಿಕೆ ಕಾಣ್ತಿದೆ. Savills Growth Hubs Index ಪ್ರಕಾರ, 2033ರ ವೇಳೆಗೆ ನಗರೀಕರಣ, ಆರ್ಥಿಕ ಬೆಳವಣಿಗೆ ಮತ್ತು ಹೊಸತನದ ಕ್ಷೇತ್ರಗಳಲ್ಲಿ ಜಾಗತಿಕ ಪೈಪೋಟಿದಾರರನ್ನ ಮೀರಲು ಸಜ್ಜಾಗಿದ್ದೇವೆ. 2025ರಲ್ಲಿ ಬೆಂಗಳೂರು ಸಮೂಹದಲ್ಲಿ ಸುಮಾರು 14.40 ಮಿಲಿಯನ್ ಜನರು ವಾಸಿಸುವ ಅಂದಾಜಿದೆ. ಭಾರತದಲ್ಲಿ ಅತಿ ಹೆಚ್ಚು ವಲಸೆ ಕಾರ್ಮಿಕರನ್ನ ಸೆಳೆಯುವ ನಗರಗಳಲ್ಲಿ ಒಂದು. ನಾವು ಅನುಭವಿಸುತ್ತಿರುವ ಈ ವೇಗದ ಬೆಳವಣಿಗೆಗೆ ಮೂಲಸೌಕರ್ಯವನ್ನ ಸರ್ಕಾರ ನಿರ್ಮಿಸುತ್ತಿದೆ ಮತ್ತು ಮುಂದುವರೆಯುತ್ತದೆ. 
- ಪ್ರಿಯಾಂಕ್​ ಖರ್ಗೆ, ಐಟಿ-ಬಿಟಿ ಸಚಿವ 




ಇದಕ್ಕೆ ನಾರಾ ಲೋಕೇಶ್, ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಕಮೆಂಟಿಸಿ ಟಕ್ಕರ್ ಕೊಟ್ಟಿದ್ದಾರೆ.. ರಸ್ತೆ ಗುಂಡಿಗಳು ನಮ್ಮ ಪ್ರಗತಿಗೆ ಅಡ್ಡಿಯಾಗುತ್ತೆ ಅಂತ ತಿವಿದು ಬುದ್ಧಿ ಹೇಳಿದಂತಿತ್ತು.. 
‘ರಸ್ತೆ ಗುಂಡಿಗಳು ಅಹಂಕಾರದಂತೆ’
ನಮ್ಮದು ಭಾರತದ ಕಿರಿಯ ರಾಜ್ಯ. ನಮ್ಮ ಬೆಳವಣಿಗೆ & ಉದ್ಯೋಗ ಸೃಷ್ಟಿಗೆ ಪ್ರತಿಯೊಂದು ಅವಕಾಶಕ್ಕೆ ಹುಡುಕುತ್ತಿದ್ದೇವೆ. ಅಹಂಕಾರವು ನಮ್ಮ ರಸ್ತೆ ಗುಂಡಿಗಳಂತೆ. ಅದನ್ನ ಮೊದಲು ಸರಿಪಡಿಸಬೇಕು, ಇಲ್ಲದಿದ್ದರೆ ನಮ್ಮ ಪ್ರಗತಿಯ ಪ್ರಯಾಣವೇ ಅಡಕವಾಗುತ್ತದೆ. 
- ನಾರಾ ಲೋಕೇಶ್​, ಆಂಧ್ರ ಸಚಿವ 


Advertisment


ಸದ್ಯ ಬೆಂಗಳೂರು ರಸ್ತೆ ಗುಂಡಿಗಳ ವಿಚಾರದಲ್ಲಿ ದೊಟ್ಟ ಮಟ್ಟದ ಸುದ್ದಿಯಲ್ಲಿದೆ.. ಐಟಿ ಕಂಪನಿಗಳು ಟೀಕೆ ಬಳಿಕ ನೆರೆ ರಾಜ್ಯಗಳು ಇದನ್ನೆ ಬಕಪಕ್ಷಿಯಂತೆ ಕಾದು ದಾಳ ಉರುಳಿಸ್ತಿವೆ.. ಇದೇ ಅವಕಾಶವನ್ನ ಆಂಧ್ರ ಮಂತ್ರಿ ಬಳಸಿಕೊಳ್ಳಲು ಯತ್ನಿಸ್ತಿದ್ದಾರೆ.. ಅದೇನೇ ಇದ್ರೂ ಭಾರತದ ಸಿಲಿಕಾನ್​​ ವ್ಯಾಲಿಯ ಪಟ್ಟ ಕಟ್ಟಿಕೊಂಡ ಬೆಂಗಳೂರು, ಜಾಗತಿಕ ಸೌಕರ್ಯ ಕಲ್ಪಿಸಬೇಕಿರೋದು ಇಲ್ಲಿನ ಸರ್ಕಾರದ ಕರ್ತವ್ಯ ಅಲ್ವೇ?


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

karnataka V/S andhra pradesh in IT field
Advertisment
Advertisment
Advertisment