/newsfirstlive-kannada/media/media_files/2025/09/02/nestle-ceo-larrent-fire-by-company02-2025-09-02-19-38-16.jpg)
ನೆಸ್ಲೆ ಕಂಪನಿಯ ಸಿಇಓ ಆಗಿದ್ದ ಲಾರೆಂಟ್ ಫ್ರೀಕ್ಸೆ
ನೆಸ್ಲೆ ತನ್ನ ಸಿಇಓ( ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಲಾರೆಂಟ್ ಫ್ರೀಕ್ಸೆ ಅವರು ಕಿರಿಯ ಉದ್ಯೋಗಿಯೊಂದಿಗೆ ರಹಸ್ಯ "ಪ್ರಣಯ ಸಂಬಂಧ" ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಅಂತರಿಕ ತನಿಖೆ ದೃಢಪಡಿಸಿದ ನಂತರ ಅವರನ್ನು ಕಂಪನಿಯ ಸಿಇಓ ಸ್ಥಾನದಿಂದ ವಜಾಗೊಳಿಸಿದೆ.
ಸ್ವಿಸ್ ಆಹಾರ ದೈತ್ಯ ಸಂಸ್ಥೆಯ ವಿಸ್ಲ್‌ಬ್ಲೋಯಿಂಗ್ ಚಾನೆಲ್ ಮೂಲಕ ದೂರು ಸಲ್ಲಿಸಿದ ನಂತರ ವಿಚಾರಣೆ ಪ್ರಾರಂಭವಾಯಿತು ಎಂದು ಬಿಬಿಸಿ ವರದಿ ಮಾಡಿದೆ.
ಕಂಪನಿಯ ಅನುಸರಣೆ ವರದಿ ಮಾಡುವ ವೇದಿಕೆ, "ನಮಗೆ ತಿಳಿಸಿ", ಉದ್ಯೋಗಿಗಳು ಮತ್ತು ಬಾಹ್ಯ ಪಾಲುದಾರರು ನೆಸ್ಲೆಯ ತತ್ವಗಳ ಸಂಭಾವ್ಯ ಉಲ್ಲಂಘನೆಗಳನ್ನು ಗೌಪ್ಯವಾಗಿ ದೂರು ನೀಡಲು ಅವಕಾಶ ನೀಡುತ್ತೆ. ಉದಾಹರಣೆಗೆ ಹಿತಾಸಕ್ತಿ ಸಂಘರ್ಷ, ಕಿರುಕುಳ ಅಥವಾ ದುರ್ನಡತೆ ಬಗ್ಗೆ ಗೌಪ್ಯವಾಗಿ ದೂರು ಅನ್ನು ನೆಸ್ಲೆ ಕಂಪನಿಯಲ್ಲಿ ನೀಡಬಹುದು.
ಸಿಇಓ ಆಗಿದ್ದ ಲಾರೆಂಟ್ ಫ್ರೀಕ್ಸೆ ಅವರು ತಮ್ಮ ಕಿರಿಯ ಉದ್ಯೋಗಿಯೊಂದಿಗಿನ ಸಂಬಂಧದ ಬಗ್ಗೆ ಕಳವಳಗಳನ್ನು ಕಳೆದ ವರ್ಷ ಕಂಪನಿಯ ಆಂತರಿಕ ದೂರು ವ್ಯವಸ್ಥೆಯ ಮೂಲಕ ಮೊದಲು ಎತ್ತಲಾಯಿತು ಎಂದು ದಿ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ಮೊದಲ ವಿಚಾರಣೆಯಲ್ಲಿ ಹಕ್ಕುಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ ಹೊಸ ದೂರುಗಳು ಹಿತಾಸಕ್ತಿ ಸಂಘರ್ಷ ಮತ್ತು ಪಕ್ಷಪಾತವನ್ನು ಸೂಚಿಸಿದಾಗ, ನೆಸ್ಲೆ ಬಾಹ್ಯ ಸಲಹೆಗಾರರೊಂದಿಗೆ ಹೊಸ ತನಿಖೆಗೆ ಆದೇಶಿಸಿತು.
ಈ ತನಿಖೆ ವೇಳೆ ನೆಸ್ಲೆ ಸಿಇಓ ಲಾರೆಂಟ್ ಫ್ರೀಕ್ಸೆ ತನ್ನ ಕಿರಿಯ ಸಹೋದ್ಯೋಗಿ ಜೊತೆ ಪ್ರಣಯ ಸಂಬಂಧ ಹೊಂದಿರುವುದು ದೃಢಪಟ್ಟಿದೆ. ಹೀಗಾಗಿ ಸಿಇಓ ಹುದ್ದೆಯಿಂದ ವಜಾಗೊಳಿಸುವ ತೀರ್ಮಾನ ಕೈಗೊಂಡಿದೆ. ಅಫೇರ್ ಇಟ್ಟುಕೊಂಡ ತಪ್ಪಿಗೆ ಲಾರೆಂಟ್ ಫ್ರೀಕ್ಸೆ ಈಗ ಸಿಇಓ ಹುದ್ದೆ ಕಳೆದುಕೊಳ್ಳಬೇಕಾಗಿದೆ. ಕಳ್ಳಬೇಕು ಕದ್ದು ಮುಚ್ಚಿ ಹಾಲು ಕುಡಿದರೂ, ಜಗತ್ತಿಗೆ ಗೊತ್ತಾಗಲ್ಲ ಅಂದುಕೊಂಡಿರುತ್ತೆ. ಹಂಗೆ, ಈ ಲಾರೆಂಟ್ ಫ್ರೀಕ್ಸೆಯು ಕದ್ದುಮುಚ್ಚಿ ಅಫೇರ್ ಇಟ್ಟುಕೊಂಡರೂ, ಅದನ್ನು ಪತ್ತೆ ಹಚ್ಚುವಲ್ಲಿ ನೆಸ್ಲೆ ಕಂಪನಿಯು ಯಶಸ್ವಿಯಾಗಿದೆ. ಲಾರೆಂಟ್ ಫ್ರೀಕ್ಸೆಗೆ ಕಂಪನಿಯಿಂದ ಗೇಟ್ ಪಾಸ್ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.