/newsfirstlive-kannada/media/media_files/2025/10/14/kid-on-kbc02-2025-10-14-12-21-17.jpg)
KBC ಯಲ್ಲಿ ಭಾಗವಹಿಸಿದ್ದ ಇಶಿತಾ ಭಟ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ 5 ನೇ ತರಗತಿಯ ಬಾಲಕನೊಬ್ಬ ಅಗೌರವಯುತವಾಗಿ ವರ್ತಿಸಿ ಈಗ ದೇಶದಲ್ಲಿ ಟೀಕೆಗೆ ಗುರಿಯಾಗಿದ್ದಾನೆ. ಬಾಲಕನ ಜೊತೆಗೆ ಆತನ ಪೋಷಕರನ್ನ ಜನರು ಟೀಕಿಸುತ್ತಿದ್ದಾರೆ. ಸೋನಿ ಟಿವಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೂ ಭಾಗವಹಿಸಲು ಅವಕಾಶ ಕೊಡಲಾಗಿತ್ತು.
ಗುಜರಾತ್‌ನಲ್ಲಿ ಐದನೇ ತರಗತಿ ಓದುತ್ತಿರುವ ಇಶಿತಾ ಭಟ್ ಎಂಬ ಬಾಲಕ ಅಮಿತಾಬ್ ಬಚ್ಚನ್ ಜೊತೆ ಹಾಟ್ ಸೀಟ್ ನಲ್ಲಿ ಕುಳಿತುಕೊಂಡು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದ. ಆದರೇ, ಹಾಟ್ ಸೀಟ್ ಗೆ ಬಂದು ಕುಳಿತುಕೊಂಡ ಬಳಿಕ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹಿರಿತನ, ವಯಸ್ಸು, ಸಾಧನೆಗೆ ಗೌರವ ಕೊಟ್ಟು ಅವರ ಜೊತೆ ಗೌರವದಿಂದ ಮಾತನಾಡಬೇಕಾಗಿತ್ತು. ಆದರೇ, ಬಾಲಕ ಇಶಿತಾ ಭಟ್, ಅಮಿತಾಬ್ ಬಚ್ಚನ್ ಜೊತೆ ಅಸೌಜನ್ಯ, ಅತಿಯಾದ ಆತ್ಮವಿಶ್ವಾಸದಿಂದ ವರ್ತಿಸಿದ. ಇದಕ್ಕೆ ಈಗ ಜನರು ಕಿಡಿಕಾರುತ್ತಿದ್ದಾರೆ.
ಕೇವಲ 10-12 ವರ್ಷದ ಬಾಲಕನಿಗೆ , ಹಿರಿಯರ ಜೊತೆ ಹೇಗೆ ವರ್ತಿಸಬೇಕೆಂಬುದೇ ಗೊತ್ತಿಲ್ಲ, ಬಾಲಕ ಅತಿಯಾಗಿ ವರ್ತಿಸಿದ್ದಾನೆ. ಪೋಷಕರು ಮಗನನ್ನು ಸರಿಯಾಗಿ ಬೆಳೆಸಬೇಕು. ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಬೇಕು. ಇಶಿತಾ ಭಟ್ ಪೋಷಕರು ತಮ್ಮ ಮಗನಿಗೆ ಹಿರಿಯರಿಗೆ ಗೌರವ ಕೊಡುವುದನ್ನೇ ಕಲಿಸಿಲ್ಲ. ಹೀಗಾಗಿ ಈ ಇಶಿತಾ ಭಟ್ , ಅಮಿತಾಬ್ ಬಚ್ಚನ್ ಜೊತೆ ಅತಿಯಾಗಿ ವರ್ತಿಸಿದ್ದಾನೆ. ಒಂದು ಹಂತದಲ್ಲಿ ಅಂತೂ ಇದು ಯಾರಿಗಾದರೂ ಕೇಳುವ ಪ್ರಶ್ನೆಯೇ ಎಂದು ಅಮಿತಾಬ್ ಬಚ್ಚನ್ ಗೆ ಬಾಲಕ ಹೇಳಿದ್ದ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ರೂಲ್ಸ್ ಗಳನ್ನೆಲ್ಲಾ ನನಗೆ ಹೇಳಬೇಡಿ, ನನಗೆ ಎಲ್ಲವೂ ಗೊತ್ತು ಎಂದು ಅಮಿತಾಬ್ ಬಚ್ಚನ್ ಗೆ ಬಾಲಕ ಇಶಿತಾ ಭಟ್ ಹೇಳಿದ್ದ. ಇನ್ನೂ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ, ಆಪ್ಷನ್ ಕೊಡಬೇಡಿ, ಉತ್ತರ ಲಾಕ್ ಮಾಡಿ ಎಂದು ಬಾಲಕ ಇಶಿತಾ ಭಟ್ ಹೇಳಿದ್ದ. ಹೀಗೆ ಅತಿಯಾದ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಾ ಮಾತನಾಡುತ್ತಿದ್ದ ಬಾಲಕನ ಆಟ ಮೂರೇ ಮೂರು ಪ್ರಶ್ನೆಗಳಿಗೆ ಸೀಮಿತವಾಯಿತು. ಮೂರು ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ಕೊಟ್ಟ ಬಾಲಕ ಇಶಿತಾ ಭಟ್, ನಾಲ್ಕನೇ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟು ಕಾರ್ಯಕ್ರಮದಿಂದ ನಿರ್ಗಮಿಸಬೇಕಾದ ಪರಿಸ್ಥಿತಿ ತಂದುಕೊಂಡ.
ಚೆಸ್ ನಲ್ಲಿ ಎಷ್ಟು ರಾಜರು ಇರುತ್ತಾರೆ ಎಂಬ ಪ್ರಶ್ನೆಗೆ, ಇದು ಕೇಳುವ ಪ್ರಶ್ನೆಯೇ ಎಂದು ಬಾಲಕ ಇಶಿತಾ ಭಟ್ ಹೇಳಿದ್ದ. ಆದರೇ, ನಾಲ್ಕನೇ ಪ್ರಶ್ನೆಗೆ ಬಾಲಕ ತಪ್ಪು ಉತ್ತರ ಕೊಟ್ಟು ತಲೆ ಮೇಲೆ ಕೈ ಹೊತ್ತು ನಿರ್ಗಮಿಸಬೇಕಾಯಿತು.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬಾಲಕ ಇಶಿತಾ ಭಟ್ ಆಡಿದ ಮಾತುಗಳ ವಿಡಿಯೋ ಲಿಂಕ್ ಇಲ್ಲಿದೆ ನೋಡಿ.
what a satisfying end
— Aditi🏵️🌼 (@GlamAditi_X) October 12, 2025
And no, not blaming the kid—blame the parents. Raise a child without humility, patience, or manners, and you get a tiny dictator in the making. Losing even a single rupee? Bet it stings more than a reality check ever could. 😏#KBCpic.twitter.com/Uf8XitnJri
ವಾಲ್ಮೀಕಿ ರಾಮಾಯಣದ ಮೊದಲ ಕಾಂಡ ಯಾವುದು ಎಂಬ ಪ್ರಶ್ನೆಗೆ ತಪ್ಪು ಉತ್ತರ ನೀಡಿದ. ವಾಲ್ಮೀಕಿ ರಾಮಾಯಣದ ಮೊದಲ ಕಾಂಡ ಅಯೋಧ್ಯೆ ಕಾಂಡ ಎಂದು ಉತ್ತರ ನೀಡಿದ್ದ. ಆದರೇ ಸರಿಯಾದ ಉತ್ತರ ಬಾಲ ಕಾಂಡ ಆಗಿತ್ತು. ಬಾಲಕನಿಗೆ ಇದರ ಬಗ್ಗೆ ಸರಿಯಾದ ಜ್ಞಾನ, ಮಾಹಿತಿ ಇರಲಿಲ್ಲ. ಹೀಗಾಗಿ ಬಾಲಕ ಇಶಿತಾ ಭಟ್ ತಪ್ಪು ಉತ್ತರ ಕೊಟ್ಟ.
ಬಾಲಕ ಇಶಿತಾ ಭಟ್ ವರ್ತನೆ, ಮಾತುಗಳಿಗೆ ಜನರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಜನರು ಇಶಿತಾ ಭಟ್ ಹಾಗೂ ಆತನ ಪೋಷಕರನ್ನು ತೀವ್ರವಾಗಿ ತರಾಟೆಗೆ ತೆೆಗೆದುಕೊಳ್ಳುತ್ತಿದ್ದಾರೆ. ಮೊದಲು ನಿಮ್ಮ ಮಗನಿಗೆ ಅತಿಯಾದ ಆತ್ಮವಿಶ್ವಾಸ ಬಿಟ್ಟು, ನಯ, ವಿನಯ, ಸೌಜನ್ಯಯುತ ವರ್ತನೆಯನ್ನು ಕಲಿಸಿ. ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿ. ಅತಿಯಾದ ಆತ್ಮವಿಶ್ವಾಸವೂ ಅಪತ್ತಿಗೆ ಕಾರಣವಾಗುತ್ತೆ ಎಂದು ಟೀಕಿಸುತ್ತಿದ್ದಾರೆ.
ಆದರೇ, ಇಶಿತಾ ಭಟ್ ಎಂಬ ಬಾಲಕ ಅಮಿತಾಬ್ ಬಚ್ಚನ್ ಗೆ ಗೌರವ ಕೊಡದೇ ಮಾತನಾಡಿದ್ದು ಸರಿಯಲ್ಲ. ಎಲ್ಲವೂ ನನಗೆ ಗೊತ್ತು ಎಂಬ ಅಹಂ ಒಳ್ಳೆಯದ್ದಲ್ಲ. ಆತ್ಮವಿಶ್ವಾಸವೇ ಬೇರೆ, ಗೌರವಯುತವಾಗಿ ಹಿರಿಯರ ಜೊತೆ ವರ್ತಿಸುವುದೇ ಬೇರೆ. ಎಲ್ಲವನ್ನೂ ತಿಳಿದಿರುವವರು ಬೇರೆಯವರ ಜೊತೆ, ಹಿರಿಯರ ಜೊತೆ ಗೌರವದಿಂದ ವರ್ತಿಸುತ್ತಾರೆ. ಆದರೇ, ಬೆಳೆಯಬೇಕಾದ ಬಾಲಕನಲ್ಲಿ ನಯ, ವಿನಯ, ಸೌಜನ್ಯವೇ ಇಲ್ಲ. ಇದು ಬಾಲಕ ಹಾಗೂ ಆತನ ಪೋಷಕರು ಇಬ್ಬರ ತಪ್ಪು ಎಂದು ನೆಟಿಜನ್ಸ್ ಕಿಡಿಕಾರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ