Advertisment

ರೇರಾ ಅಕ್ರಮಗಳ ಬಗ್ಗೆ ವಸತಿ ಸಚಿವ ಜಮೀರ್ ಅಹಮದ್‌ಗೆ ನ್ಯೂಸ್ ಫಸ್ಟ್ ಪ್ರಶ್ನೆಗಳು: ಉತ್ತರ ಕೊಡಿ ಜಮೀರ್ ಅಹಮದ್‌

ಕರ್ನಾಟಕದ ರೇರಾದಲ್ಲಿ ನಿವೇಶನ, ಮನೆ, ಪ್ಲ್ಯಾಟ್ ಖರೀದಿದಾರರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಬಿಲ್ಡರ್, ಡೆಲವಪರ್ ಗಳಿಂದ ಲಂಚ ವಸೂಲಿ ಕೇಂದ್ರವಾಗಿದೆ. ಈ ಬಗ್ಗೆ ಗಮನ ಸೆಳೆದರೂ ವಸತಿ ಸಚಿವ ಜಮೀರ್ ಅಹಮದ್ ಯಾವುದೇ ಕ್ರಮ ಕೈಗೊಂಂಡಿಲ್ಲ. ಇಂದು ನ್ಯೂಸ್ ಫಸ್ಟ್ ಜಮೀರ್ ಅಹಮದ್‌ಗೆ ನೇರ ಪ್ರಶ್ನೆ ಕೇಳುತ್ತಿದೆ.

author-image
Chandramohan
RERA (3)

ರೇರಾ ಅಧ್ಯಕ್ಷ ರಾಕೇಶ್ ಸಿಂಗ್, ವಸತಿ ಸಚಿವ ಜಮೀರ್ ಅಹಮದ್‌

Advertisment
  • ರೇರಾ ಅಕ್ರಮ ತಡೆಯಲು ಕ್ರಮ ಕೈಗೊಳ್ಳದ ಸಚಿವ ಜಮೀರ್ ಅಹಮದ್ ಖಾನ್‌
  • ರಾಜ್ಯದಲ್ಲಿ ನಿವೇಶನ, ಮನೆ, ಪ್ಲ್ಯಾಟ್ ಖರೀದಿದಾರರಿಗೆ ರಕ್ಷಣೆಯೇ ಇಲ್ಲ
  • ರೇರಾದಲ್ಲಿ ಎಲ್ಲಕ್ಕೂ ಲಂಚ ಕೊಡಲೇಬೇಕಾದ ಸ್ಥಿತಿಯಲ್ಲಿ ಜನರು
  • ನ್ಯೂಸ್ ಫಸ್ಟ್ ಈ ಪ್ರಶ್ನೆಗಳಿಗೆ ಉತ್ತರ ಕೊಡಿ ಜಮೀರ್ ಅಹಮದ್‌ ಖಾನ್‌್

ರೇರಾ ಅಕ್ರಮಗಳ ಬಗ್ಗೆ ವಸತಿ ಖಾತೆ  ಸಚಿವ ಜಮೀರ್​​ ಅಹ್ಮದ್ ಫುಲ್‌​ ಸೈಲೆಂಟ್​ ಆಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರೇರಾದ  ಅಕ್ರಮ, ಭ್ರಷ್ಟಾಚಾರ, ಕಮಿಷನ್​​​ ವಿಚಾರವನ್ನು   ನ್ಯೂಸ್​​ಫಸ್ಟ್ ಬಯಲಿಗೆಳೆದಿತ್ತು. ಈ ಬಗ್ಗೆ ನೇರವಾಗಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ನ್ಯೂಸ್ ಫಸ್ಟ್ ಪ್ರಶ್ನಿಸಿತ್ತು. ಇವತ್ತು ಸಂಜೆೆಯೇ ರೇರಾ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದರು. ಆದರೇ, ಅಂದು ಯಾವುದೇ ಸಭೆಯನ್ನು ಜಮೀರ್ ಅಹಮದ್ ಮಾಡಲೇ ಇಲ್ಲ. ​
ರೇರಾ ಅಕ್ರಮಗಳ ಬಗ್ಗೆ ಉತ್ತರಿಸಲು ಸಚಿವ ಜಮೀರ್​​ ಅಹ್ಮದ್​​ ಹಿಂದೇಟು ಹಾಕುತ್ತಿದ್ದಾರೆ. 
ಜನಸ್ನೇಹಿಯಾಗಿ ಕೆಲಸ ಮಾಡುವಲ್ಲಿ  ಕೆ-ರೇರಾ ಕಂಪ್ಲೀಟ್​ ಫೇಲ್ಯೂರ್​​​ ಆಗಿದೆ.  ನ್ಯೂಸ್​ಫಸ್ಟ್​​ ವರದಿ ಬೆನ್ನಲ್ಲೇ ವಿಪಕ್ಷಗಳು ರೇರಾ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿವೆ.  ಇಷ್ಟಾದ್ರು ತುಟಿ ಬಿಚ್ಚದ ವಸತಿ ಸಚಿವ  ಜಮೀರ್​​ ಅಹ್ಮದ್​​ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ರೇರಾದ ಆಕ್ರಮಗಳಿಗೆ  ಮೌನದ ಮೂಲಕವೇ ಸಮ್ಮತಿ ನೀಡುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. 
ಜನಸಾಮಾನ್ಯರಿಗೆ ಆಗ್ತಿರುವ ಅನ್ಯಾಯದ ಬಗ್ಗೆ ನಿಮಗೆ ಕಿಂಚಿತ್ತೂ ಕಾಳಜಿ ಇಲ್ವಾ..?  ಕೆ-ರೇರಾ ವಸೂಲಿ ಕೇಂದ್ರವಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ನಿಮ್ಮ ಉತ್ತರವೇನು..? ನಿಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ  ಉತ್ತರಿಸಿ ಸಚಿವರೇ..! ಎಂದು ನ್ಯೂಸ್ ಫಸ್ಟ್ ನೇರವಾಗಿ ಜಮೀರ್ ಅಹಮದ್ ಅವರನ್ನು ಪ್ರಶ್ನಿಸುತ್ತಿದೆ. 

Advertisment

ವಸತಿ ಸಚಿವ ಜಮೀರ್​​​​ ಅಹ್ಮದ್​ ಗೆ ನ್ಯೂಸ್​ಫಸ್ಟ್​ ನ ಪ್ರಶ್ನೆಗಳು..!
1. ವಸತಿ ಇಲಾಖೆಯಡಿ ಬರುವ ಕೆ.ರೇರಾ ಅಕ್ರಮಗಳು ಬಗ್ಗೆ ನಿಮ್ಮ ಗಮನಕ್ಕೆ ಬಂದಿಲ್ವಾ..?


2. ಜನಸಾಮಾನ್ಯರ 3 ಸಾವಿರಕ್ಕೂ ಹೆಚ್ಚಿನ ದೂರುಗಳು ಬಾಕಿ ಉಳಿದಿರೋದ್ಯಾಕೆ..?


3. ಗ್ರಾಹಕರ ಪರ ಆದೇಶ ಹೊರಡಿಸಿ, ಬಿಲ್ಡರ್​​ಗಳಿಂದ 750 ಕೋಟಿ ವಸೂಲಿ ಮಾಡಿಲ್ಲ ಯಾಕೆ..?


4. ಅಧಿಕಾರಿಗಳಿಂದ ಹಿಡಿದು ಸಚಿವರವರೆಗೆ ಕಮಿಷನ್​​​ ಫಿಕ್ಸ್​​​​ ಮಾಡಿರೋರ್ಯಾರು..?


5. ನಿಮ್ಮ ಹೆಸರಿನಲ್ಲಿ ವಸೂಲಿ ನಡೀತಿರೋದು ನಿಮ್ಮ ಗಮನಕ್ಕೆ ಬಂದಿಲ್ವಾ..?


6. ವಿಪಕ್ಷಗಳು ಹೇಳುವಂತೆ ಕೆ-ರೇರಾ ವಸೂಲಿ ಕೇಂದ್ರವಾಗಿ ಬದಲಾಗಿದೆಯಾ..?


7. ಕೆ-ರೇರಾ ಮೇಲೆ ಆರೋಪಗಳ ಸುರಿಮಳೆ ಇದ್ರೂ ನೀವು ಸೈಲೆಂಟ್​​ ಆಗಿರೋದ್ಯಾಕೆ..?


8. ಕೆ-ರೇರಾ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆಗೆ ನೀಡಲು ಸಿದ್ಧರಿದ್ದೀರಾ..?

ಈ ಎಲ್ಲ ಪ್ರಶ್ನೆಗಳಿಗೆ ರೇರಾ ವಸತಿ ಸಚಿವರ ಅಧೀನದಲ್ಲಿ ಬರುವುದರಿಂದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರೇ ಉತ್ತರಿಸಬೇಕು. ರೇರಾ ಅಕ್ರಮಗಳಿಗೆ ಕಡಿವಾಣವನ್ನು ರಾಜ್ಯದ ಜನರ ಹಿತದೃಷ್ಟಿಯಿಂದ ಹಾಕಲೇಬೇಕಾಗಿದೆ. ರಾಜ್ಯದ ಜನರ ಪರವಾಗಿ ನ್ಯೂಸ್ ಫಸ್ಟ್ ಈ ಪ್ರಶ್ನೆಗಳನ್ನು ಜಮೀರ್ ಅಹಮದ್ ಅವರಿಗೆ ಕೇಳಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
RERA corruption
Advertisment
Advertisment
Advertisment