/newsfirstlive-kannada/media/media_files/2026/01/01/press-club-awards-2026-01-01-18-51-07.jpg)
ಪ್ರತಿ ವರ್ಷವೂ ಬೆಂಗಳೂರು ಪ್ರೆಸ್​​ಕ್ಲಬ್​.. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರನ್ನು ಗುರುತಿಸಿ.. ಪ್ರಶಸ್ತಿ ನೀಡಿ ಗೌರವಿಸುತ್ತೆ.. ಅದೇ ರೀತಿ ಈ ವರ್ಷವೂ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೈದ ಹಿರಿಯ ಪತ್ರಕರ್ತರು, ಸಾಧಕರಿಗೆ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿದೆ.
ಬೆಂಗಳೂರಿನ ಪ್ರೆಸ್​ಕ್ಲಬ್​​ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ಸೇರಿದಂತೆ ಹಿರಿಯ ಪತ್ರಕರ್ತರು ಭಾಗಿಯಾಗಿದ್ದರು.
ನ್ಯೂಸ್​​ಫಸ್ಟ್ ಕನ್ನಡ ಸುದ್ದಿವಾಹಿನಿಯ ಇನ್​ಪುಟ್ ವಿಭಾಗದ ಹೆಡ್ ಆದ ಮೋಹನ್ ಕುಮಾರ್ ಕೆ.ಪಿ, ಹಾಗೂ ನ್ಯೂಸ್​ಫಸ್ಟ್ ಹಿರಿಯ ರಾಜಕೀಯ ವರದಿಗಾರರಾದ ಹರೀಶ್ .ಜಿ ಕಾಕೋಳು ಸೇರಿದಂತೆ ಒಟ್ಟು 55 ಹಿರಿಯ ಪತ್ರಕರ್ತರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯ್ತು.
ನ್ಯೂಸ್​ಫಸ್ಟ್​ನ ಇನ್​​ಪುಟ್​ ಹೆಡ್​​ ಆಗಿರುವ ಮೋಹನ್​ ಕುಮಾರ್​ ಕೆಪಿ ಮೂಲತ ಚಿಕ್ಕಮಗಳೂರಿನ ಅದ್ದಡ ಗ್ರಾಮ ಹೊಳೆಹಲಸಿನವರು.. ಬೆಂಗಳೂರು ಯ್ಯೂನಿವರ್ಸಿಟಿಯಲ್ಲಿ ಎಂ.ಎ ಜರ್ನಲಿಸಂ ಮುಗಿಸಿ ಮಾಧ್ಯಮ ಲೋಕಕ್ಕೆ ಪಾದರ್ಪಣೆ ಮಾಡಿದ್ರು.. 2007ರಲ್ಲಿ ವೃತ್ತಿ ಆರಂಭಿಸಿದ ಇವರು, ಸುಮಾರು 18 ವರ್ಷಗಳ ಅನುಭವಹೊಂದಿದ್ದು, ಇವರ ಸೇವೆಯನ್ನು ಗುರುತಿಸಿ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ ನೀಡಿ ಗೌರವಿಸಿದೆ.
ಇನ್ನು ನ್ಯೂಸ್​ಫಸ್ಟ್​​ನ ಹಿರಿಯ ರಾಜಕೀಯ ವರದಿಗಾರರಾದ ಹರೀಶ್​ ಕಾಕೋಳ್​​ರಿಗೂ ಪ್ರಶಸ್ತಿ ಲಭವಿಸಿದೆ. ಬೆಂಗಳೂರು ಉತ್ತರ ಜಿಲ್ಲೆಯ ಕಾಕೋಳ್ ಗ್ರಾಮದ ಇವರು ಮುದ್ರಣ ಮತ್ತು ದೃಶ್ಯ ಮಾಧ್ಯಮ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜಕೀಯ ವರದಿಗಾರಿಕೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಪ್ರಸ್ತುತ ‘ನ್ಯೂಸ್ ಫಸ್ಟ್’ ವಾಹಿನಿಯಲ್ಲಿ ಹಿರಿಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ 22 ವರ್ಷಗಳ ಸೇವೆಯನ್ನು ಪರಿಗಣಿಸಿ, ‘ಪ್ರೆಸ್ ಕ್ಲಬ್ ಆಫ್ ಬೆಂಗಳೂರು’ 2025ರ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿರೋದು ಹೆಮ್ಮೆಯ ವಿಷಯ
ಒಟ್ಟಾರೆ ಬೆಂಗಳೂರು ಪ್ರೆಸ್​​ಕ್ಲಬ್​ ಪ್ರತಿವರ್ಷ ಕೂಡ.. ಪತ್ರಿಕೋದ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರನ್ನು ಗುರುತಿಸುವ ಕೆಲ್ಸವನ್ನು ಮಾಡುತ್ತಲೇ ಇದೆ. ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಅವರ ಕಾಯಕ ಹೀಗೆ ಮುಂದುವರಿಯಲಿ.
ಬೆಂಗಳೂರು ಪ್ರೆಸ್ ಕ್ಲಬ್ ನಿಂದ 15-20 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಪ್ರತಿಭಾವಂತ ಪತ್ರಕರ್ತರನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
/filters:format(webp)/newsfirstlive-kannada/media/media_files/2026/01/01/press-club-annual-awards-2026-01-01-13-19-03.jpg)
ನ್ಯೂಸ್​ಫಸ್ಟ್​ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us