ಐ.ಟಿ.ರಿಟರ್ನ್ಸ್ ಫೈಲ್ ಮಾಡಲು ಡೆಡ್ ಲೈನ್ ವಿಸ್ತರಣೆ ಇಲ್ಲ- ಇಂದೇ ಕೊನೆಯ ದಿನ ಎಂದ ಸಿಬಿಡಿಟಿ

ಐ.ಟಿ.ರಿಟರ್ನ್ಸ್ ಫೈಲ್ ಮಾಡಲು ಇಂದೇ( ಸೆಪ್ಟೆಂಬರ್ 15) ಕೊನೆಯ ದಿನ. ಬಹಳಷ್ಟು ಮಂದಿ ಇನ್ನೂ ಡೆಡ್ ಲೈನ್ ವಿಸ್ತರಣೆಯಾಗುತ್ತೆ ಎಂದು ಕಾಯುತ್ತಿದ್ದಾರೆ. ಡೆಡ್ ಲೈನ್ ವಿಸ್ತರಣೆ ಇಲ್ಲ ಎಂದು ಸಿಬಿಡಿಟಿ ಹೇಳಿದೆ. ಹೀಗಾಗಿ ಇಂದೇ ಮಧ್ಯರಾತ್ರಿ 12 ಗಂಟೆಯೊಳಗೆ ಐ.ಟಿ.ರಿಟರ್ನ್ಸ್ ಫೈಲ್ ಮಾಡಿಬಿಡಿ. ಇಲ್ಲದಿದ್ದರೇ, ದಂಡ ಕಟ್ಟಬೇಕಾಗುತ್ತೆ.

author-image
Chandramohan
IT RETURN FILING LAST DATE

ಐ.ಟಿ. ರಿಟರ್ನ್ಸ್ ಫೈಲ್ ಮಾಡಲು ಇಂದೇ ಕೊನೆಯ ದಿನ

Advertisment
  • ಐ.ಟಿ. ರಿಟರ್ನ್ಸ್ ಫೈಲ್ ಮಾಡಲು ಇಂದೇ ಕೊನೆಯ ದಿನ
  • ಡೆಡ್ ಲೈನ್ ವಿಸ್ತರಣೆ ಇಲ್ಲ ಎಂದ ಸಿಬಿಡಿಟಿ
  • ಇಂದು ಮಧ್ಯರಾತ್ರಿ 12ರೊಳಗೆ ದಂಡ ಇಲ್ಲದೇ ಐ.ಟಿ.ರಿಟರ್ನ್ಸ್ ಫೈಲ್ ಮಾಡಬಹುದು

2025-26 ರ ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವುದಕ್ಕೆ ಇಂದೇ ಕೊನೆಯ ದಿನ( ಸೆಪ್ಟೆಂಬರ್ 15).  ದೇಶದಲ್ಲಿ ಪ್ರತಿ ವರ್ಷ ಜುಲೈ 30 ರವರೆಗೂ ಐ.ಟಿ.ರಿಟರ್ನ್ಸ್ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುತ್ತಿತ್ತು. ಕೆಲವೊಮ್ಮೆ ಬೇರೇ ಬೇರೆ ಕಾರಣಗಳಿಂದ ಐ.ಟಿ.ರಿಟರ್ನ್ಸ್ ಸಲ್ಲಿಕೆಯ ಡೆಡ್ ಲೈನ್ ಅನ್ನು ಆದಾಯ ತೆರಿಗೆ ಇಲಾಖೆಯು ವಿಸ್ತರಣೆ ಮಾಡುತ್ತಿತ್ತು. ಆದರೇ, ಈ ಭಾರಿ ಮೊದಲೇ ಸೆಪ್ಟೆಂಬರ್ 15 ರವರೆಗೆ ಕಾಲಾವಕಾಶ ನೀಡಿದೆ.  ಹೀಗಾಗಿ ಐ.ಟಿ. ರಿಟರ್ನ್ಸ್ ಸಲ್ಲಿಕೆಗೆ ಇಂದೇ ಕೊನೆ ದಿನ. 
ಕಳೆದ ವರ್ಷ ಜುಲೈ 30 ರೊಳಗೆ 7.28 ಕೋಟಿ ಮಂದಿ ಐ.ಟಿ. ರಿಟರ್ನ್ಸ್ ಸಲ್ಲಿಸಿದ್ದರು. ಆದರೇ, ಈ ವರ್ಷ ಸೆಪ್ಟೆಂಬರ್ 15 ರವರೆಗೆ 6.69  ಕೋಟಿ ಜನರು ಐ.ಟಿ.ರಿಟರ್ನ್ಸ್ ಸಲ್ಲಿಸಿದ್ದಾರೆ.  ಈ ವರ್ಷ 8 ಕೋಟಿ ಜನರು ಐ.ಟಿ.ರಿಟರ್ನ್ಸ್ ಸಲ್ಲಿಕೆ ಮಾಡಬಹುದು ಎಂದು ಚಾರ್ಟೆಡ್ ಅಕೌಂಟೆಂಟ್ ಗಳು ಅಂದಾಜು ಮಾಡಿದ್ದಾರೆ. ಆದರೇ, ಈ ಭಾರಿಯ ಆದಾಯ ತೆರಿಗೆ ಪಾವತಿದಾರರು ಐ.ಟಿ. ರಿಟರ್ನ್ಸ್ ಸಲ್ಲಿಕೆಗೆ  ಸೆಪ್ಟೆಂಬರ್ 15ರ ಡೆಡ್ ಲೈನ್ ವಿಸ್ತರಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೇ, ಇದುವರೆಗೂ ಆದಾಯ ತೆರಿಗೆ ಇಲಾಖೆ ಐ.ಟಿ.ರಿಟರ್ನ್ಸ್ ಸಲ್ಲಿಕೆಯ ಡೆಡ್ ಲೈನ್ ವಿಸ್ತರಣೆ ಮಾಡಿಲ್ಲ. ಐ.ಟಿ. ರಿಟರ್ನ್ಸ್  ಸಲ್ಲಿಕೆಯ ಡೆಡ್ ಲೈನ್ ವಿಸ್ತರಣೆ ಮಾಡಲ್ಲ. ಐ.ಟಿ. ರಿಟರ್ನ್ಸ್ ಸಲ್ಲಿಕೆಯ ಡೆಡ್ ಲೈನ್ ವಿಸ್ತರಣೆಯಾಗಿದೆ ಎಂಬುದೆಲ್ಲಾ ಸುಳ್ಳು ಸುದ್ದಿ. ಫೇಕ್ ಸುದ್ದಿ. ಅದನ್ನು ನಂಬಬೇಡಿ. ಇಂದು ಸಂಜೆಯೊಳಗೆ ಐ.ಟಿ. ರಿಟರ್ನ್ಸ್ ಸಲ್ಲಿಕೆ ಮಾಡಿ ಎಂದು ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಪಾವತಿದಾರರಿಗೆ ಹೇಳಿದೆ.
ಒಂದು ವೇಳೆ ಇಂದು ಮಧ್ಯರಾತ್ರಿ 12 ಗಂಟೆಯೊಳಗೆ  ಐ.ಟಿ.ರಿಟರ್ನ್ಸ್ ಸಲ್ಲಿಕೆ ಮಾಡದೇ ಇದ್ದರೇ, ಡಿಸೆಂಬರ್ 31 ರವರೆಗೆ ಐ.ಟಿ. ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ಇದೆ. ಆದರೇ, ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆದಾಯ ಇದ್ದರೇ, ಒಂದು ಸಾವಿರ ರೂಪಾಯಿ ದಂಡ ಪಾವತಿಸಬೇಕು. ವಾರ್ಷಿಕ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಇದ್ದರೇ, 5 ಸಾವಿರ ದಂಡ ಪಾವತಿಸಬೇಕು. ಜೊತೆಗೆ ತೆರಿಗೆಗೆ ಬಡ್ಡಿಯನ್ನು ಪಾವತಿಸಬೇಕಾಗುತ್ತೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 

IT RETURN FILING LAST DATE02


ಇನ್ನೂ ಐ.ಟಿ. ರಿಟರ್ನ್ಸ್ ಫೈಲ್ ಮಾಡಲು ಇನ್ನೂ ಹತ್ತು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಇನ್ನೂ ಐ.ಟಿ. ರಿಟರ್ನ್ಸ್ ಫೈಲ್ ಮಾಡದೇ ಇರುವವರು ಬಾಕಿ ಉಳಿದಿರುವ ಕೆಲವೇ ಗಂಟೆಗಳಲ್ಲಿ ಐ.ಟಿ. ರಿಟರ್ನ್ಸ್ ಫೈಲ್ ಮಾಡಿ.  ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕಾದ ದಂಡದಿಂದ ಬಚಾವ್ ಆಗಿ. 
ಇನ್ನೂ ಈ ವರ್ಷ ಐ.ಟಿ. ರಿಟರ್ನ್ಸ್ ಫೈಲ್ ಮಾಡಿದವರಿಗೆ ಕೆಲವೇ ಗಂಟೆಗಳಲ್ಲಿ ಐ.ಟಿ. ರೀಫಂಡ್ ಕೂಡ ಬರುತ್ತಿದೆ. ತ್ವರಿತಗತಿಯಲ್ಲಿ ರೀಫಂಡ್ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ನೀಡುತ್ತಿದೆ. ನೀವು ಕೆಲಸ ಮಾಡುವ ಕಂಪನಿಯಿಂದ ಫಾರಂ 16(ಎ) ಮತ್ತು (ಬಿ) ಪಡೆದು ನೀವೇ ಅಥವಾ ಚಾರ್ಟರ್ಡ್ ಅಕೌಂಟೆಂಟ್‌ ಗಳ ನೆರವು ಪಡೆದು ಐ.ಟಿ.ರಿಟರ್ನ್ಸ್ ಅನ್ನು ಫೈಲ್ ಮಾಡಿ. 

 ನಿನ್ನೆ ಕೂಡ ಆದಾಯ ತೆರಿಗೆ ಇಲಾಖೆಯು ಡೆಡ್ ಲೈನ್ ವಿಸ್ತರಣೆ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.  ಐ.ಟಿ.ಆರ್. ಸಲ್ಲಿಕೆಗೆ ಸೆಪ್ಟೆಂಬರ್ 15 ಕೊನೆಯ ದಿನ ಎಂದು ಸ್ಪಷ್ಟವಾಗಿ ಹೇಳಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

INCOME TAX RETURN FILING
Advertisment