ಬೆಳ್ಳಿ ಮಾತ್ರವಲ್ಲ, ದೇಶದಲ್ಲಿ ಚಿನ್ನದ ಬೆಲೆಯೂ ಏರಿಕೆ : 10 ಗ್ರಾಂ ಚಿನ್ನದ ಬೆಲೆ 1,24,260 ರೂ.ಗೆ ಏರಿಕೆ

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರೆಡೂ ಏರಿಕೆಯಾಗುತ್ತಿವೆ. ಎವರ್ ಗ್ರೀನ್ ಹೂಡಿಕೆ ಎಂದೇ ಪರಿಗಣಿಸಲಾದ ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಚಿನ್ನದ ಬೆಲೆಯಲ್ಲಿ ಇಂದು ಪ್ರತಿ ಗ್ರಾಂಗೆ 55 ರೂಪಾಯಿ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ 12,426 ರೂಪಾಯಿಗೆ ಏರಿಕೆಯಾಗಿದೆ.

author-image
Chandramohan
GOLD PRICE TODAY

ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

Advertisment
  • ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ
  • ಒಂದು ಗ್ರಾಂ ಚಿನ್ನದ ಬೆಲೆ 12,426 ರೂಪಾಯಿಗೆ ಏರಿಕೆ
  • 10 ಗ್ರಾಂ ಚಿನ್ನದ ಬೆಲೆ 1,24,260 ರೂಪಾಯಿಗೆ ಏರಿಕೆ!

ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆಯೇ ದೇಶದಲ್ಲಿ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದೆ. ದೀಪಾವಳಿ ಹಬ್ಬದ ವೇಳೆ ಅನೇಕರು ಚಿನ್ನ ಖರೀದಿಗೆ ಮುಗಿಬೀಳುತ್ತಾರೆ. ಶುಭ ಸಮಾರಂಭಗಳೂ ನಡೆಯುವುದರಿಂದ ಚಿನ್ನಕ್ಕೆ ಬೇಡಿಕೆ ಜಾಸ್ತಿ. ಇನ್ನೂ ಜಾಗತಿಕ ಅನಿಶ್ಚಿತತೆಯ ಸ್ಥಿತಿಯ ಮಧ್ಯೆ ಚಿನ್ನದ ಮೇಲಿನ ಹೂಡಿಕೆಯೇ ಸೇಫ್ ಎಂದು ಹಣಕಾಸು, ಹೂಡಿಕೆ ತಜ್ಞರು ಕೂಡ ಜನರಿಗೆ ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಚಿನ್ನ ಮಾರಾಟ, ಬೇಡಿಕೆ ಎರಡೂ ಹೆಚ್ಚಾಗುತ್ತಿದೆ. 
ಇಂದು( ಅಕ್ಟೋಬರ್ 11, 2025)  ದೇಶದಲ್ಲಿ ಚಿನ್ನದ ಬೆೆಲೆ ಪ್ರತಿ ಗ್ರಾಂಗೆ 55 ರೂಪಾಯಿ ಏರಿಕೆಯಾಗಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 55 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಗ್ರಾಂ ಚಿನ್ನದ ಬೆಲೆ 12,426 ರೂಪಾಯಿಗೆ ಏರಿಕೆಯಾಗಿದೆ.  ನಿನ್ನೆ ಒಂದು ಗ್ರಾಂ  ಚಿನ್ನದ ಬೆಲೆ 12,371 ರೂಪಾಯಿ ಇತ್ತು.  

ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆಯೂ ಪ್ರತಿ ಗ್ರಾಂಗೆ 11,390 ರೂಪಾಯಿಗೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 11,340 ರೂಪಾಯಿ ಇತ್ತು . ದೀಪಾವಳಿ ಮತ್ತು ಧನತೇರಸ್ ಹಬ್ಬದ ಕಾರಣದಿಂದಾಗಿ ಚಿನ್ನದ ಆಭರಣಗಳಿಗಾಗಿ 22 ಕ್ಯಾರೆಟ್ ಚಿನ್ನವನ್ನು ಜನರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. 
ಇನ್ನೂ 18 ಕ್ಯಾರೆಟ್ ಚಿನ್ನದ ಬೆಲೆಯು ಇಂದು 41 ರೂಪಾಯಿ ಏರಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯು ಇಂದು  ಒಂದು ಗ್ರಾಂಗೆ 9,319 ರೂಪಾಯಿಗೆ ಏರಿಕೆಯಾಗಿದೆ. ನಿನ್ನೆ 9,278 ರೂಪಾಯಿ ಇತ್ತು. 

GOLD_BHIMA


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

gold rate
Advertisment