/newsfirstlive-kannada/media/media_files/2025/08/04/vande-bharat-train333-2025-08-04-14-30-43.jpg)
ಇನ್ನೂ ಮುಂದೆ ನೀವು ವಂದೇ ಭಾರತ್ ಟ್ರೇನ್ ನಲ್ಲಿ ಸಂಚಾರ ಮಾಡಲು ಒಂದು ತಿಂಗಳು, 15 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡುವ ಅಗತ್ಯವಿಲ್ಲ. ಟ್ರೇನ್ ನಿಮ್ಮ ರೈಲ್ವೇ ನಿಲ್ದಾಣಕ್ಕೆ ಬರುವ 15 ನಿಮಿಷ ಮುಂಚಿತವಾಗಿ ಟ್ರೇನ್ ಟಿಕೆಟ್ ಬುಕ್ ಮಾಡಬಹುದು.
ದಕ್ಷಿಣ ರೈಲ್ವೇಯ ಆಯ್ದ ಎಂಟು ವಂದೇ ಭಾರತ್ ಟ್ರೇನ್ ಗಳಿಗೆ ಈ ಸೌಲಭ್ಯವನ್ನು ರೈಲ್ವೇ ಇಲಾಖೆ ನೀಡಿದೆ. ಈ ಮೊದಲು, ವಂದೇ ಭಾರತ್ ಟ್ರೇನ್ ತನ್ನ ಮೊದಲು ರೈಲ್ವೇ ಸ್ಟೇಷನ್ ನಿಂದ ಹೊರಟ ಬಳಿಕ ಆ ಮಾರ್ಗದ ಸ್ಟೇಷನ್ ಗಳಲ್ಲಿ ವಂದೇ ಭಾರತ್ ಟ್ರೇನ್ ನಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವೇ ಇರಲಿಲ್ಲ.
ಆದರೇ, ಈಗ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಅನ್ನು ಅಪ್ ಡೇಟ್ ಮಾಡಿರುವುದರಿಂದ ಖಾಲಿ ಇರುವ ಸೀಟುಗಳನ್ನು, ವಂದೇ ಭಾರತ್ ಟ್ರೇನ್ , ತಮ್ಮ ನಿಲ್ದಾಣಕ್ಕೆ ಬರುವ 15 ನಿಮಿಷಗಳ ಮುಂಚೆ ಕೂಡ ಬುಕ್ ಮಾಡಲು ಅವಕಾಶ ಕೊಡಲಾಗಿದೆ. ವಂದೇ ಭಾರತ್ ಟ್ರೇನ್ ಸಂಚರಿಸುವ ಮಾರ್ಗದ ಯಾವುದೇ ಸ್ಟೇಷನ್ ನಿಂದ ಬೇಕಾದರೂ ಹೊರಡಲು 15 ನಿಮಿಷಗಳ ಮುಂಚೆ ಟ್ರೇನ್ ಟಿಕೆಟ್ ಬುಕ್ ಮಾಡಿ ಟ್ರೇನ್ ನಲ್ಲಿ ಸಂಚಾರ ಮಾಡಬಹುದು.
ಯಾವ್ಯಾವ ವಂದೇ ಭಾರತ್ ಟ್ರೇನ್ ಗಳಲ್ಲಿ ಈ ಸೌಲಭ್ಯ ಇದೆ?
ದಕ್ಷಿಣ ರೈಲ್ವೇಯು ಸದ್ಯಕ್ಕೆ ಎಂಟು ವಂದೇ ಭಾರತ್ ಟ್ರೇನ್ ಗಳಲ್ಲಿ 15 ನಿಮಿಷ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ಕೊಟ್ಟಿದೆ. ಆ ವಂದೇ ಭಾರತ್ ಟ್ರೇನ್ ಗಳು ಯಾವ್ಯಾವು? ಯಾವ್ಯಾವ ಮಾರ್ಗದಲ್ಲಿ ವಂದೇ ಭಾರತ್ ಟ್ರೇನ್ ಗಳು ಸಂಚಾರ ಮಾಡುತ್ತಾವೆ ಅನ್ನೋ ವಿವರ ಇಲ್ಲಿದೆ ಓದಿ.
20631- ಮಂಗಳೂರು ಸೆಂಟ್ರಲ್- ತಿರುವನಂತಪುರ ಸೆಂಟ್ರಲ್
20632- ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್
20646-ಮಂಗಳೂರು ಸೆಂಟ್ರಲ್- ಮಡಗಾಂವ್
20642-ಕೊಯಮತ್ತೂರು- ಬೆಂಗಳೂರು ಕಂಟೋನ್ ಮೆಂಟ್
20671-ಮಧುರೈ- ಬೆಂಗಳೂರು ಕಂಟೋನ್ ಮೆಂಟ್
20627-ಚೆನ್ನೈ ಎಗ್ಮೋರ್--ನಾಗರಕೋಯೀಲ್
20628- ನಾಗರಕೋಯೀಲ್- ಚೆನ್ನೈ ಎಗ್ಮೋರ್
20677--ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್--ವಿಜಯವಾಡ
ದೇಶದಲ್ಲಿ ವಂದೇ ಭಾರತ್ ಟ್ರೇನ್ ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಸಾಮಾನ್ಯ ಟ್ರೇನ್ ಗಳಿಗಿಂತ ಹೆಚ್ಚು ಕಂಫರ್ಟ್, ಕ್ಲೀನ್ ನೆಸ್, ಸ್ಪೀಡ್, ಲಕ್ಷುರಿ ಪ್ರಯಾಣಕ್ಕಾಗಿ ಜನರು ವಂದೇ ಭಾರತ್ ಟ್ರೇನ್ ಗಳಲ್ಲಿ ಸಂಚಾರವನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ವಂದೇ ಭಾರತ್ ಟ್ರೇನ್ ಗಳ ಸೀಟುಗಳನ್ನು ಸಂಪೂರ್ಣವಾಗಿ ಪ್ರಯಾಣಿಕರಿಗೆ ಬಳಸಿಕೊಳ್ಳುವ ಉದ್ದೇಶದಿಂದ ಕೊನೆಯ 15 ನಿಮಿಷದವರೆಗೂ ಟಿಕೆಟ್ ಬುಕ್ ಮಾಡಲು ಈಗ ಅವಕಾಶ ಕೊಡಲಾಗಿದೆ. ಜೊತೆಗೆ ಸಡನ್ನಾಗಿ ಪ್ರಯಾಣ ಮಾಡಲು ರೈಲ್ವೇ ಸ್ಟೇಷನ್ ಗೆ ಬರುವವರಿಗೂ ಕೊನೆಯ 15 ನಿಮಿಷಗಳಲ್ಲಿ ಟ್ರೇನ್ ಟಿಕೆಟ್ ತಗೊಂಡು ವಂದ್ ಭಾರತ್ ಟ್ರೇನ್ ನಲ್ಲಿ ಸಂಚಾರ ಮಾಡಬಹುದು. ರೈಲ್ವೇಯ ಪ್ರಯಾಣಿಕರ ಅನುಕೂಲಕ್ಕಾಗಿ ತನ್ನ ಬುಕ್ಕಿಂಗ್ ಸಿಸ್ಟಮ್ ಅನ್ನು ಪ್ಲೆಕ್ಸಿಬಲ್ ಆಗುವಂತೆ ಮಾಡಿದೆ.
ಹಾಗಂತ ವಂದೇ ಭಾರತ್ ಟ್ರೇನ್ ಗಳು ಪ್ರಯಾಣಿಕರಿಲ್ಲದೇ ಖಾಲಿ ಓಡುತ್ತಿಲ್ಲ. ವಂದೇ ಭಾರತ್ ಟ್ರೇನ್ ಗಳೆಲ್ಲಾ ಪ್ರಯಾಣಿಕರಿಂದ ಶೇ.100 ಕ್ಕೂ ಹೆಚ್ಚು ಫುಲ್ ಆಗಿವೆ. 2024-25 ರಲ್ಲಿ ವಂದೇ ಭಾರತ್ ಟ್ರೇನ್ ಗಳು ಶೇ.102 ರಷ್ಟು ಪ್ರಯಾಣಿಕರಿಂದ ಭರ್ತಿ ಆಗಿವೆ. 2025-26 ರಲ್ಲಿ ಶೇ.105 ರಷ್ಟು ಪ್ರಯಾಣಿಕರಿಂದ ಸೀಟುಗಳು ಭರ್ತಿಯಾಗಿವೆ ಎಂದು ಕೇಂದ್ರದ ರೈಲ್ವೇ ಖಾತೆ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದರು.