/newsfirstlive-kannada/media/media_files/2025/08/18/darshan-in-jail-2025-08-18-07-07-27.jpg)
ಜೈಲಿನಲ್ಲಿರುವ ನಟ ದರ್ಶನ್ ಗೆ ಏನೂ ಸೌಲಭ್ಯ ಕೊಡುತ್ತಿಲ್ಲವಂತೆ
ನಟ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 64ನೇ ಸೆಷನ್ಸ್ ಕೋರ್ಟ್ ನೀಡಿದ ಆದೇಶದಂತೆ ಕನಿಷ್ಠ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ದೂರಿನ 2ನೇ ಭಾರಿಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇವತ್ತು ಸಂಜೆ ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ನಲ್ಲಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತು.
ದರ್ಶನ್ ಪರ ವಕೀಲ ಸುನೀಲ್ ಕೋರ್ಟ್ ನಲ್ಲಿ ವಾದಿಸಿದರು. ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ. ಕೋರ್ಟ್ ಆದೇಶವನ್ನ ತೀರಾ ಹಗುರುವಾಗಿ ಪರಿಗಣಿಸಿದ್ದಾರೆ. ಕೋರ್ಟ್ ಆದೇಶ ಇದ್ದರೂ ಏನು ಕೊಡುತ್ತಿಲ್ಲ. ಏನು ಕೊಟ್ಟಿದ್ದಾರೆ ಎಂದು ಆರೋಪಿಗಳ ಮುಖಾಂತರವೇ ಹೇಳಿಸಿ ಎಂದು ವಕೀಲ ಸುನೀಲ್ ಕೋರ್ಟ್ ನಲ್ಲಿ ಕೇಳಿದ್ದರು.
ಜೈಲು ಅಧಿಕಾರಿಗಳು ಏನು ಬೇಕಾದರು ಬರೆದುಕೊಂಡು ಬರಬಹುದ ಎಂದು ವಕೀಲ ಸುನೀಲ್ ವಾದಿಸಿದ್ದರು. ಕೋರ್ಟ್ ಗೆ ಜೈಲು ವರದಿ ಸಲ್ಲಿಕೆ ಮಾಡಿದ್ದರು. ಹೊಸ ಆರೋಪಿ ಜೈಲಿಗೆ ಬಂದಾಗ 14 ದಿನ ಮಾತ್ರ ಕ್ವಾರೆಂಟೈನ್ ನಲ್ಲಿ ಇರಬೇಕು. ನಂತರ ಆರೋಗ್ಯ ಪರಿಶೀಲನೆ ಮಾಡಿ ಸಾಮಾನ್ಯ ಸೆಲ್ ಗಳಿಗೆ ಶಿಫ್ಟ್ ಮಾಡಬೇಕು. ಆದ್ರೆ ಒಂದು ತಿಂಗಳು ಕ್ವಾರೇಂಟೈನ್ ಸೆಲ್ ನಲ್ಲಿ ದರ್ಶನ್ ಇದ್ದಾರೆ. ಕ್ವಾರೆಂಟೈನ್ಸ್ ಗೈಡ್ ಲೈನ್ಸ್ ಮಾಹಿತಿಯನ್ನು ವಕೀಲ ಸುನೀಲ್ ಕೋರ್ಟ್ ಗೆ ನೀಡಿದ್ದರು. ಜನರನ್ನ ತಿಂಗಳುಗಟ್ಟಲೇ ಕ್ವಾರೇಂಟೈನ್ ನಲ್ಲಿ ಇಟ್ಟಿದ್ದಾರೆ . ಯಾವ ಎಂಎಲ್ಎ, ಸಂಸದರನ್ನ 14 ದಿನಕ್ಕಿಂತ ಹೆಚ್ಚು ಕ್ವಾರೇಂಟೈನ್ ನಲ್ಲಿ ಇಟ್ಟಿದ್ದಾರೆ…? ಎಂದು ವಕೀಲ ಸುನೀಲ್ ಪ್ರಶ್ನಿಸಿದ್ದರು. ಜೈಲು ಅಧಿಕಾರಿಗಳ ವಿರುದ್ಧ ಸುನೀಲ್ ಗಂಭೀರ ಆರೋಪ ಮಾಡಿದ್ದರು. ಆರೋಪಿಗಳ ಸುತ್ತ ಕ್ಯಾಮರಾ ಇಡೋದು ಹೆಚ್ಚಿನ ಭದ್ರತೆ ಹೆಸರಿನಲ್ಲಿ ಕಿರುಕುಳ ನೀಡಿದಂತೆ ಆಗುತ್ತೆ ಎಂದು ವಕೀಲ ಸುನೀಲ್ ವಾದಿಸಿದ್ದರು.
ನಟ ದರ್ಶನ್ ಪಕ್ಕದ ಸೆಲ್ ನಲ್ಲಿ ಪಾಕಿಸ್ತಾನದ ಟೆರರಿಸ್ಟ್ ಗಳು ಇದ್ದಾರೆ. ಅವರಿಗೆ ಎಲ್ಲಾ ಸೌಲಭ್ಯ ಗಳು ನೀಡುತ್ತಿದ್ದಾರೆ. ಕೇರಂ, ಟಿವಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂದು ನಟ ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದರು.
ವಾದ ಆಲಿಸಿದ ಕೋರ್ಟ್ ಸೆಪ್ಟೆಂಬರ್ 19ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.