/newsfirstlive-kannada/media/media_files/2025/10/29/online-aggregator-apps-2025-10-29-14-48-05.jpg)
ಆನ್ ಲೈನ್ ಅಗ್ರಿಗೇಟರ್ ಆ್ಯಪ್‌ಗಳಿಂದ ಗ್ರಾಹಕರಿಗೆ ಮಾತ್ರವಲ್ಲ ಚಾಲಕರಿಗೂ ಮೋಸವಾಗುತ್ತಿದೆಯಂತೆ. ಓಲಾ, ಉಬರ್ ಸೇರಿದಂತೆ ಬೇರೆ ಟ್ಯಾಕ್ಸಿ ಸೇವೆಗಳು ಆನ್ ಲೈನ್ ಅಗ್ರಿಗೇಟರ್ ಆ್ಯಪ್ ಗಳ ಮೂಲಕವೇ ಸಿಗುತ್ತಿವೆ. ಈ ಆನ್ ಲೈನ್ ಅಗ್ರಿಗೇಟರ್ ಆ್ಯಪ್ ಗಳ ಜೊತೆ ಜೋಡಣೆಯಾಗಿರು ಕಾರ್ ಚಾಲಕರಿಗೆ ಕಿಲೋಮೀಟರ್ ಗೆ ಇಂತಿಷ್ಟು ಎಂದು ಹಣವನ್ನು ಆ್ಯಪ್ ಕಂಪನಿಗಳು ನೀಡಬೇಕು. ಆದರೇ, ನಿಗದಿತ ಹಣ ನೀಡುತ್ತಿಲ್ಲ ಎಂದು ಎಂದು ಕ್ಯಾಬ್ ಚಾಲಕರು ಈಗ ಈ ಆನ್ ಲೈನ್ ಅಗ್ರಿಗೇಟರ್ ಆ್ಯಪ್ ಕಂಪನಿಗಳ ವಿರುದ್ಧ ಸಿಡಿದೆದ್ದಿದ್ದಾರೆ.
ಆನ್ ಲೈನ್ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಸಾರಿಗೆ ಇಲಾಖೆಗೆ ದೂರು ನೀಡಿದ್ದಾರೆ. ದುಡಿಯೋದು ನಾವು, ತಿನ್ನೋದು ಅವರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ನಿಯಮ ಗಾಳಿಗೆ ತೂರಿರುವ ಅಗ್ರಿಗೇಟರ್ ಆ್ಯಪ್ ಗಳು ಇಷ್ಟ ಬಂದ ಹಾಗೇ ಹಣವನ್ನು ನಮಗೆ ನೀಡುತ್ತಿವೆ ಎಂದು ಚಾಲಕರು ಅಗ್ರಿಗೇಟರ್ ಆ್ಯಪ್ ಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಸಾರಿಗೆ ಇಲಾಖೆ ಮುಂದೆ ಸಾಕ್ಷಿ ಸಮೇತ ಬಂದು ಕ್ಯಾಬ್ ಚಾಲಕರ ವಾದ ಮಾಡಿದ್ದಾರೆ. ಒಂದೊಂದು ಬಾರಿ ಒಂದೊಂದು ರೇಟ್ ನೀಡುವುದನ್ನ ಕಂಡು, ಅನುಭವಿಸಿ ಚಾಲಕರು ಹೈರಾಣಾಗಿದ್ದಾರೆ. ಪ್ರಯಾಣಿಕರು ಹಾಗೂ ಚಾಲಕರಿಬ್ಬರಿಗೂ ಆಗ್ರಿಗೇಟರ್ ಆ್ಯಪ್ ಮಾರಕ ಎಂದು ಚಾಲಕರೇ ಈಗ ಹೇಳುತ್ತಿದ್ದಾರೆ. ಒಂದು ಕಿಲೋ ಮೀಟರ್ ಗೆ 24 ರೂಪಾಯಿ ದರವನ್ನು ಸಾರಿಗೆ ಇಲಾಖೆ ನಿಗದಿ ಮಾಡಿದೆ.
ಇತ್ತ ಅಗ್ರಿಗ್ರೇಟರ್ ಆ್ಯಪ್ ಗಳಲ್ಲಿ ನಾನ್ ಫೀಕ್ ಆವರ್ - ಪೀಕ್ ಆವರ್ ನಲ್ಲಿ ದರ ವ್ಯತ್ಯಾಸ ಇದೆ. ಬಹುತೇಕ ಭಾರಿ ಸಾರಿಗೆ ಇಲಾಖೆ ನಿಗದಿ ಮಾಡಿರುವ ದರಕ್ಕಿಂತ ಕಡಿಮೆ ದರಕ್ಕೆ ಡ್ಯೂಟಿ ಮಾಡಬೇಕಾಗಿದೆ. ಸಾರಿಗೆ ಇಲಾಖೆ ನೀಡಿರುವ ದರವನ್ನು ನಮಗೆ ನೀಡಲಿ ಎಂದು ಚಾಲಕರು ಒತ್ತಾಯ ಮಾಡಿದ್ದಾರೆ. ಆಗ ಚಾಲಕರಿಗೂ ಪ್ರಯಾಣಿಕರಿಗೂ ಯಾವುದೇ ಸಮಸ್ಯೆ ಇರಲ್ಲ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/29/online-aggregator-apps02-2025-10-29-14-49-57.jpg)
ಸಾರಿಗೆ ಇಲಾಖೆ ನಿಗದಿ ಮಾಡಿರುವ ದರ 24 ರೂಪಾಯಿ ಆಗಿದ್ದರೇ, ನಾನ್ ಪೀಕ್ ಅವರ್ ನಲ್ಲಿ ಕಿ.ಮೀ 14-16 ರೂಪಾಯಿ ಈ ಅಗ್ರಿಗೇಟರ್ ಆ್ಯಪ್ ಗಳು ಚಾಲಕರಿಗೆ ನೀಡುತ್ತಿವೆ. ಒಬ್ಬೊಬ್ಬ ಚಾಲಕರಿಗೆ ಒಂದೊಂದು ರೀತಿಯಲ್ಲಿ ಅನ್ಯಾಯ ಆಗುತ್ತಿದೆ. ₹4449 ಕೊಡಬೇಕಿದ್ದ ಚಾಲಕನಿಗೆ ಸಿಕ್ಕಿದ್ದು ₹1999 ಮಾತ್ರ.
₹1199 ಕೊಡಬೇಕಿದ್ದ ಚಾಲಕನಿಗೆ ಕಂಪನಿ ಕೊಟ್ಟಿದ್ದು ₹849 ಮಾತ್ರ . ಹೀಗೆ ನೂರಾರು ಚಾಲಕರು ಮೋಸಮಾಡಿರುವ ಆರೋಪವನ್ನು ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us